ಬೆಂಗಳೂರಿಗರಲ್ಲಿ ಮತ್ತಷ್ಟು ಹೆಚ್ಚಾಯ್ತು ಟೆನ್ಷನ್ ಟೆನ್ಷನ್….! ಬೆಂಗಳೂರಿಗೆ ಬಂದಿದೆ ಬ್ರಿಟನ್ನ ಮೊದಲ ವಿಮಾನ…!
ದೇಶದಲ್ಲಿ ಈಗಾಗಲೇ ರೂಪಾಂತರಿ ಕೊರೋನಾ ವೈರಸ್ ಭೀತಿ ಶುರುವಾಗಿದೆ. ಈ ನಡುವೆ ಯುಕೆಯಿಂದ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕರಿಗೆ ಕಡ್ಡಾಯವಾಗಿ RTPCR ಪರೀಕ್ಷೆ ಪರೀಕ್ಷೆ ಮಾಡಲಾಗಿದೆ.
ಇಂದು ಬೆಳಗ್ಗೆ 4 ಗಂಟೆಗೆ ಯುಕೆಯಿಂದ ಮೊದಲ ವಿಮಾನ ಬಂದಿದ್ದು 300-350 ಪ್ರಯಾಣಿಕರು ಬಂದಿದ್ದಾರೆ. ಯುಕೆನಿಂದ ಬರುವ ಪ್ರಯಾಣಿಕರು ನೆಗಟೀವ್ ರಿಪೋರ್ಟ್ ತಂದಿದ್ದು, ಏರ್ಪೋರ್ಟ್ನಲ್ಲಿ ಮತ್ತೆ ಪರೀಕ್ಷೆ ಕಡ್ಡಾಯ ಮಾಡಲಾಗಿದೆ.
ಅಲ್ದೇ, ನೆಗೆಟಿವ್ ರಿಪೋರ್ಟ್ ಬಂದ್ರೂ 14 ದಿನ ಹೋಂ ಕ್ವಾರಂಟೈನ್ ಆಗ್ಬೇಕು. ಅಲ್ದೇ, ಇವರ ಮೇಲೆ ಪಾಲಿಕೆ ಸಿಬ್ಬಂದಿ ನಿಗಾವಹಿಸಲಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಎಸ್‌ಒಪಿ ಸಹ ಬಿಡುಗಡೆ ಮಾಡಿದೆ.