OTT, 5G ವಿರುದ್ಧ ಸಿಡಿದೆದ್ದಿರೋ ದರ್ಶನ್…! ಚಿತ್ರರಂಗ ಉಳಿಸಲು ಹೋರಾಟ ನಡೆಸ್ತಿದ್ದಾರೆ ನಂಬರ್ 1 ಸ್ಟಾರ್ ನಟ..!
ನಿನ್ನೆ ಫೇಸ್ ಬುಕ್ ಲೈವ್ ಬಂದ ದರ್ಶನ್ ಹುಟ್ಟು ಹಬ್ಬದ ಆಚರಣೆ ಹಾಗೂ ರಾಬರ್ಟ್ ಸಿನೆಮಾ ಬಿಡುಗಡೆಯ ಬಗ್ಗೆ ಮಾತನಾಡಿದ್ದಾರೆ. ಓಟಿಟಿ ವೇದಿಕೆಯಲ್ಲಿ ಸಿನಿಮಾ ಬಿಡುಗಡೆ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ಬಗ್ಗೆ ಮಾತನಾಡಿದ ನಟ ದರ್ಶನ್, ಚಿತ್ರಮಂದಿರಗಳನ್ನು ತೆರೆಯದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಲಾ-ಕಾಲೇಜುಗಳು ತೆರೆದಿವೆ. ಮದುವೆ ಮಂಟಪದಲ್ಲಿ ಸಾವಿರಾರು ಮಂದಿ ಸೇರುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಜನ ಓಡಾಡಿಕೊಂಡು ಇದ್ದಾರೆ. ಎಲ್ಲ ಕಡೆ ಜನರಿದ್ದಾರೆ. ಆದರೆ, ಚಿತ್ರಮಂದಿಗಳನ್ನು ಮಾತ್ರ ತೆರೆಯುತ್ತಿಲ್ಲ. ಏಕೆಂದರೆ, ಇದರ ಹಿಂದೆ 5ಜಿ ಉದ್ದೇಶವಿದೆ ಎಂದು ಹೇಳಿದ್ದಾರೆ.
ಎಲ್ಲರ ಬಳಿ ಮೊಬೈಲ್ ಇದೆ. ಒಬ್ಬ ವ್ಯಕ್ತಿ ಸಣ್ಣ ಮೊಬೈಲ್ ಸ್ಕ್ರೀನ್ನಲ್ಲಿ ಸಿನಿಮಾ ನೋಡಿದ್ರೆ ಅದರಲ್ಲಿ ಯಾವ ಮನೋರಂಜನೆ ಸಿಗುವುದು? ನನ್ನ ಪ್ರಕಾರ 5G ದೊಡ್ಡ ಸ್ಕ್ಯಾಮ್. ಯಾರೇ ಏನೇ ಹೇಳಲಿ ಈಗ 50% ದಷ್ಟು ಜನರಿಗೆ ಮಾತ್ರ ಅವಕಾಶಗಳನ್ನು ನೀಡಲಾಗಿದೆ. ಒಂದು ವೇಳೆ 25% ಅವಕಾಶ ಕೊಟ್ಟರು ಪರವಾಗಿಲ್ಲ ನಾವು ಥಿಯೇಟರ್ನಲ್ಲಿಯೇ ಸಿನೆಮಾ ರಿಲೀಸ್ ಮಾಡುತ್ತೇವೆ ಎಂದು ದರ್ಶನ್ ಹೇಳಿದ್ದಾರೆ.
ಒಂದು ವೇಳೆ 5G ಶುರುವಾದರೆ. ಥಿಯೇಟರ್ಗಳು ಮುಚ್ಚುವ ಸ್ಥಿತಿ ಬರುತ್ತದೆ. ಮುಚ್ಚಿದ್ರೆ ಚಿತ್ರರಂಗದ ಖೇಲ್ ಖತಂ ಆಗುವುದು ಗ್ಯಾರೆಂಟಿ. ಇದ್ರಿಂದ ಲಕ್ಷ ಲಕ್ಷ ಮಂದಿ ಜೀವನ ಕಳ್ಕೊಂಡು ಬೀದಿಗೆ ಬೀಳೋದು ಖಂಡಿತ. OTT, 5G ಲಾಬಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಪ್ರಶ್ನೆ ಎತ್ತಿರೋ ದರ್ಶನ್ ಚಿತ್ರರಂಗ ಉಳಿಸೋ ಪ್ರಯತ್ನ ಮಾಡ್ತಿದ್ದಾರೆ.