ಟ್ವಿಟ್ಟರ್​ನಲ್ಲಿ ಮೋದಿಯೇ ನಂಬರ್​ ಒನ್​..!

ಅಮೆರಿಕದ ಸಂಸತ್​ ಭವನದ ಮೇಲೆ ಡೊನಾಲ್ಡ್​ ಟ್ರಂಪ್​ ಅವರ ಅನುಯಾಯಿಗಳು ಮುತ್ತಿಗೆ ಹಾಕಿರುವ ಬೆನ್ನಲ್ಲೇ ಟ್ರಂಪ್​ ಅವರು ಟ್ವಿಟರ್​ ಖಾತೆಯನ್ನು ಶಾಶ್ವತವಾಗಿ ತೆಗೆದು ಹಾಕಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು, ಟ್ವಿಟ್ಟರ್​ನಲ್ಲಿ ಅತಿ ಹೆಚ್ಚು ಫಾಲೋವರ್ಸ್​ ಹೊಂದಿರುವ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ.

ಟ್ರಂಪ್​ ಅವರು ಟ್ವಿಟ್ಟರ್​ನಲ್ಲಿ 88.7 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದರು. ನರೇಂದ್ರ ಮೋದಿಯವರು 64.7 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾರೆ. ಅತಿ ಹೆಚ್ಚು ಫಾಲೋವರ್ಸ್​ ಹೊಂದಿರುವ ಸಕ್ರಿಯ ರಾಜಕಾರಣಿಯಲ್ಲಿ ಮೋದಿ ಮೊದಲ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.
ಅದಾಗ್ಯೂ ಅಮೆರಿಕದ ಮಾಜಿ ಅಧ್ಯಕ್ಷ ಬರಕ್​ ಒಬಾಮಾ ಅವರು 127.9 ಮಿಲಿಯನ್​ ಫಾಲೋವರ್ಸ್​ಗಳನ್ನು ಹೊಂದಿರುವ ರಾಜಕಾರಣಿಗಳ ಪಟ್ಟಿಯಲ್ಲಿ ಮೊದಲಲ್ಲಿದ್ದಾರೆ.ಈಗಿನ ಅಧ್ಯಕ್ಷ ಜೋ ಬೈಡೆನ್​ ಅವರಿಗೆ 23.3 ಮಿಲಿಯನ್​ ಫಾಲೋವರ್ಸ್​ ಇದ್ದಾರೆ

ದೆಹಲಿ ಮುಖ್ಯಮಂತ್ರಿ ಮತ್ತು ಆಮ್​ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್​ ಅವರು 21.2 ಮಿಲಿಯನ್​ ಫಾಲೋವರ್ಸ್​ ಹೊಂದಿದ್ರೆ. ಭಾರತದಲ್ಲಿ ಮೋದಿಯವರ ನಂತರ ಗೃಹ ಸಚಿವ ಅಮಿತ್​ ಶಾ ಅವರು 24.2 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾರೆ ಎಂದು ಹೇಳಾಬಹುದಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *