ಖ್ಯಾತ ಗಾಯಕ ರಘು ದೀಕ್ಷಿತ್ ಆತ್ಮಹತ್ಯೆ..! #IAmStillAlive ಎಂದು ಬರೆದಿದ್ದೇಕೆ ಮಾದೇಶ !
ಖ್ಯಾತ ಗಾಯಕ ರಘು ದೀಕ್ಷಿತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ! ಕಣ್ಣೀರಿನಲ್ಲಿ ಕೈತೊಳೆದ ಚಿತ್ರರಂಗ ! ಹೀಗೊಂದು ಸುದ್ದಿ ಯೂಟ್ಯೂಬ್ ನಲ್ಲಿ ಭಾರೀ ವೈರಲ್ ಆಗಿದೆ. ಸುಮಾರು 15 ಸಾವಿರಕ್ಕಿಂತಲೂ ಹೆಚ್ಚು ಹಾಡುಗಳನ್ನು ಹಾಡಿದ್ದ ಗಾಯಕ ರಘು ದೀಕ್ಷಿತ್ ಗೊತ್ತಿಲ್ಲದ ಕನ್ನಡಿಗರಿಲ್ಲ. ಆದರೆ ದಿಡೀರನೆ ಸಾವಿನ ಸುದ್ದಿ ಕನ್ನಡ ಸಿನಿ ಪ್ರೇಮಿಗಳು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ. ಯಾಕೆ ರಘುದೀಕ್ಷಿತ್ ಆತ್ಮಹತ್ಯೆ ಮಾಡಿಕೊಂಡರು ಎಂಬುದನ್ನು ತಿಳಿಯಬೇಕಾದರೆ ಬೆಲ್ ಬಟನ್ ಒತ್ತಿ, ಸಬ್ ಸ್ಕ್ರೈಬ್ ಆಗಿ ಎಂದು ಸುದ್ದಿ ಪ್ರಾರಂಭವಾಗುತ್ತದೆ.
ಈ ಸುದ್ದಿ ನೋಡಿದ ರಘು ದೀಕ್ಷಿತ್ ಶಾಕ್ ಆಗಿದ್ದಾರೆ. ರಘು ದೀಕ್ಷಿತ್ ಆ ಸುದ್ದಿಯ ಸ್ಕ್ರೀನ್ ಶಾಟ್ ಹಾಕಿ “Heegoo unte!!! I have faced so many nasty things across my life, but this one takes the cake and eats it too! #IAmStillAlive
Best Part: #DayavittuVideogeOnduLikeNeedi ಎಂದು ಬರೆದುಕೊಂಡಿದ್ದಾರೆ.
ರಘುದೀಕ್ಷಿತ್ ಸಾವಿನ ಸುದ್ದಿಯ ಕೊನೆಗೇ “ನಿಮಗೆ ಈ ಸುದ್ದಿ ಇಷ್ಟವಾಗಿದ್ದರೆ ಲೈಕ್ ಒತ್ತಿ” ಎಂದು ಹೇಳಲಾಗಿದೆ. ಸುಮಾರು 500 ಕ್ಕೂ ಅಧಿಕ ಮಂದಿ ಹಿಂದೆ ಮುಂದೆ ನೋಡದೇ ಲೈಕ್ ಒತ್ತಿದ್ದಾರೆ. 34 ಸಾವಿರಕ್ಕೂ ಹೆಚ್ಚು ಮಂದಿ ರಘು ದೀಕ್ಷಿತ್ ಆತ್ಮಹತ್ಯೆಯ ಫೇಕ್ ಸುದ್ದಿಯನ್ನು ಓದಿದ್ದಾರೆ.
ಜನರ ಈ ಕೆಟ್ಟ ಅಭಿರುಚಿಯನ್ನು ವಿಷಾದಯುತವಾಗಿ ವ್ಯಂಗ್ಯ ಮಾಡಿರುವ ರಘು ದೀಕ್ಷಿತ್, “ದಯವಿಟ್ಟು ವಿಡಿಯೋಗೆ ಒಂದು ಲೈಕ್ ನೀಡಿ” ಎಂದು ಹ್ಯಾಶ್ ಟ್ಯಾಗ್ ಬಳಸಿದ್ದಾರೆ. ಯೂಟ್ಯೂಬ್ ಚಾನೆಲ್ ಗಳ ವಿವರ್ಸ್ ಜಾಸ್ತಿ ಮಾಡಬೇಕು ಎಂದು ಈ ರೀತಿ ಬೇಜವಾಬ್ದಾರಿಯಾಗಿ ವರ್ತಿಸೋದು ಎಷ್ಟು ಸರಿ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಾರಂಭವಾಗಿದೆ.