ಕೊರೊನಾ ಎಫೆಕ್ಟ್ ಬೀದಿಗೆ ಬಂದ ನೂರಾರು ಜನರ ಬದುಕು…! ಕೆಲಸವಿಲ್ಲದೆ ಪರದಾಡುವ ಬಿಎಂಟಿಸಿ ನಿಲ್ದಾಣದ ಅಂಗಡಿ ಮಾಲಿಕರು…!
ಶಾಂತಿನಗರ ,ಯಶವಂತಪುರ, ಬನ್ನೇರುಘಟ್ಟ ಬಿಎಂಟಿಸಿ ನಿಲ್ದಾಣಗಳಲ್ಲಿ ಅಂಗಡಿಗಳನನ್ನಿಟ್ಟು ವ್ಯಾಪರ ಮಾಡುತ್ತಿದ್ದವರ ಬದುಕು ಈಗ ಬೀದಿ ಪಾಲಾಗಿದೆ. ಬಾಡಿಗೆ ಕಟ್ಟಿಲ್ಲವೆಂದು 30ಕ್ಕೂ ಹೆಚ್ಚು ಅಂಗಡಿಗಳನ್ನ ಬಿಎಂಟಿಸಿ ಕ್ಲೋಸ್ ಮಾಡಿಸಿದೆ. ಹೀಗೆ ಅಂಗಡಿಗಳಲ್ಲಿ ಕೆಲಸ ಮಾಡ್ತಿದ್ದ 80-100 ಮಂದಿ ಕೆಲಸ ಕಳೆದುಕೊಂಡಿದ್ದಾರೆ.
ಬಸ್ ನಿಲ್ದಾಣದಲ್ಲಿದ್ದ ಅಂಗಡಿ ವ್ಯಾಪಾರವನ್ನೆ ನಂಬಿಕೊಂಡಿದ್ದ ಕುಟುಂಬಗಳು ಬೀದಿಗೆ ಬಂದಿದ್ದು, ನಿತ್ಯ 40 ರಿಂದ 50 ಸಾವಿರ ವ್ಯಾಪಾರ ದುಡಿಯುತ್ತಿದ್ದ ಅಂಗಡಿ ಮಾಲೀಕರು ಸದ್ಯ ಅಂಗಡಿ ಕ್ಲೋಸ್ ಹಿನ್ನಲೆಯಲ್ಲಿ 10-15 ಸಾವಿರಕ್ಕೆ ಬೇರೆಡೆ ದುಡಿಯುತ್ತಿದ್ದಾರೆ.
ಪ್ರಯಾಣಿಕರಿಲ್ಲದೆ , ಬಸ್ ಸಂಚಾರವೂ ಇಲ್ಲದೇ ಅಂಗಡಿಗಳು ನಷ್ಟದಲ್ಲಿದ್ದವು. ಈ ಸಂಬಂಧ ಬಾಡಿಗೆ ಕಡಿಮೆ ಮಾಡುವಂತೆ ಬಿಎಂಟಿಸಿಗೆ ಅಂಗಡಿ ಮಾಲೀಕರು ಮನವಿ ಮಾಡಿದ್ದರು. ಸದ್ಯ ನೋಟಿಸ್ ಕೂಡ ನೀಡದೇ ಅಂಗಡಿ ಕ್ಲೋಸ್ ಮಾಡಿಸಿದ್ದಾರೆಂದು ಆರೋಪಿಸಿದ್ದಾರೆ.