ವಿಜಯ್ ಸೇತುಪತಿ ಜೋಡಿಯಾಗಿ ಕತ್ರೀನಾ ಕೈಫ್..! ‘ಅಂದಾಧೂನ್’ ನಿರ್ದೇಶಕರ ಸಾರಥ್ಯದಲ್ಲಿ ಬರಲಿದೆ ಹೊಸ ಸಿನಿಮಾ.!
ಬಾಲಿವುಡ್ ಟಾಪ್ ಹೀರೋಯಿನ್ ಕತ್ರೀನಾ ಕೈಫ್.. ಒಂದ್ಕಾಲದಲ್ಲಿ ತೆಲುಗು ಸಿನಿಮಾದಲ್ಲೂ ನಟಿಸಿದ್ದ ಕತ್ರೀನಾ ಈಗ ಬಾಲಿವುಡ್ ಗ್ಲಾಮರ್ ಲೋಕದಲ್ಲಿ ಮಿಂಚ್ತಿದ್ದಾರೆ.. ಆದ್ರೀಗ ತಮಿಳಿನ ವಿಜಯ್ ಸೇತುಪತಿ ಜೋಡಿಯಾಗಿ ಕ್ಯಾಟ್ ನಟಿಸೋ ಸುದ್ದಿ ಬಂದಿದೆ.. ವಿಶೇಷ ಏನಪ್ಪಾ ಅಂದ್ರೆ, ಇದು ಬಾಲಿವುಡ್ ಸಿನಿಮಾ.. ವಿಜಯ್ ಸೇತುಪತಿ ಈ ಸಿನಿಮಾ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಡ್ತಿದ್ದಾರೆ..
ಒಂದ್ಕಾಲದಲ್ಲಿ ದಕ್ಷಿಣ ಭಾರತ ಕಲಾವಿದರು ಬಾಲಿವುಡ್ಗೆ ಹೋಗೋದು ಅಂದ್ರೆ, ಸಾಮಾನ್ಯದ ವಿಷಯ ಆಗಿರಲಿಲ್ಲ.. ಅದ್ರಲ್ಲೂ ಬಿಟೌನ್ ಮಂದಿ ಕರೆದು ಅವಕಾಶ ಕೊಡೋದಂತೂ ದೂರದ ಮಾತಾಗಿತ್ತು.. ಆದ್ರೆ, ಪ್ಯಾನ್ ಇಂಡಿಯಾ ಸಿನಿಮಾ ಜಮಾನದಲ್ಲಿ ಭಾಷೆಯ ಗಡಿ ಮೀರಿ ಸಿನಿಮಾಗಳು ಬರ್ತಿವೆ.. ಹಾಗಾಗಿ ನಿರ್ದೇಶಕರು ಕಥೆಗೆ ತಕ್ಕಂತೆ ಕಲಾವಿದರ ಆಯ್ಕೆ ಮಾಡಿಕೊಳ್ತಿದ್ದಾರೆ.. ಅಂಧಾದೂನ್ ಸಿನಿಮಾ ನಿರ್ದೇಶಕ ಶ್ರೀರಾಮ್ ರಾಘವನ್ ಮುಂದಿನ ಚಿತ್ರಕ್ಕೆ ಸೇತುಪತಿನ ಹೀರೋ ಆಗಿ ಆಯ್ಕೆ ಮಾಡ್ಕೊಂಡಿದ್ದಾರೆ.
ಈ ಹಿಂದೆ ಆಮೀರ್ ಖಾನ್ ಅಭಿನಯದ ಲಾಲ್ ಚಡ್ಡಾ ಸಿನಿಮಾದಲ್ಲಿ ವಿಜಯ್ ಸೇತುಪತಿ ನಟಿಸೋ ಸುದ್ದಿ ಬಂದಿತ್ತು.. ಆದ್ರೆ, ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ.. ಇದೀಗ ಶ್ರೀರಾಮ್ ರಾಘವನ್ ನಿರ್ದೇಶನದ ಸಿನಿಮಾದಲ್ಲಿ ನಟಿಸೋ ಮೂಲಕ ಸೇತುಪತಿ ಬಾಲಿವುಡ್ಗೆ ಲಗ್ಗೆ ಇಡ್ತಿದ್ದು, ಕತ್ರೀನಾ ಕೈಫ್ ನಾಯಕಿಯಾಗಿ ನಟಿಸೋದು ಪಕ್ಕಾ ಆಗಿದೆ.. ಸೇತುಪತಿ– ಕತ್ರೀನಾ ಕಾಂಬಿನೇಷನ್ ಸಿನಿಮಾವನ್ನೇ ಯಾರೂ ಊಹೆ ಮಾಡಿರಲಿಲ್ಲ.. ಆದ್ರೀಗ ಅಂಥಾದೊಂದು ಚಿತ್ರಕ್ಕೆ ವೇದಿಕೆ ಸಿದ್ಧವಾಗ್ತಿದೆ.. ಹಿಂದಿ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಲಿದೆ..