ಲವ್ನಲ್ಲಿ ಬಿದ್ರಲ್ಲ ಸಾಯಿಪಲ್ಲವಿ ಮತ್ತು ನಾಗ್.. ಇವ್ರ ಈ ಹೊಸ ಲವ್ಸ್ಟೋರಿ ಸ್ಟಾರ್ಟ್ ಆಗೋಕೆ ಇದೆ ಕಾರಣ ನೋಡಿ.!
ಸಾಯಿ ಪಲ್ಲವಿ. ಸೌತ್ ಸಿನಿ ದುನಿಯಾ ಆಳ್ತಿರೋ ಪಿಂಪಲ್ ಬ್ಯೂಟಿ. ನ್ಯಾಚುರಲ್ ಸ್ಟಾರ್ ಪಲ್ಲವಿ ಮೊಗಕೆ ಮೊಡವೆಯೇ ಭೂಷಣ.ಮಲಯಾಳಂ ಚಿತ್ರರಂಗದಲ್ಲಿ ‘ಮಲರ್’ ಎಂದೇ ಫೇಮಸ್ ಆಗಿರೋ ಸಾಯಿ ಪಲ್ಲವಿ, ಲಾಕ್ಡೌನ್ ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಸಾಯಿಪಲ್ಲವಿ ನಟನೆಯ ಲವ್ಸ್ಟೋರಿ ಸಿನಿಮಾದ ಟೀಸರ್ ರಿಲೀಸ್ ಆಗಿದೆ.
ಕಾಲಿವುಡ್,ಮಾಲಿವುಡ್ ಹಾಗೂ ಟಾಲಿವುಡ್ನಲ್ಲಿ ಅದ್ಭತವಾಗಿ ನಟಿಸಿ ಸೈ ಎನ್ನಿಸಿಕೊಂಡಿರು ರೌಡಿ ಬೇಬಿ ಸಾಯಿ ಪಲ್ಲವಿ, ಲವ್ಸ್ಟೋರಿ ಸಿನಿಮಾದಲ್ಲಿ ನಾಗಚೈತನ್ಯ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇದೊಂದು ರೊಮ್ಯಾಂಟಿಕ್ ಸ್ಟೋರಿಯಾಗಿದ್ದು, ಈಗಾಗಲೇ ಪೋಸ್ಟರ್ಗಳಿಂದಲೇ ಗಮನ ಸೆಳೆದ ಲವ್ಸ್ಟೋರಿ, ಈಗ ಟೀಸರ್ನಿಂದ ಸಿನಿಮಾದ ಬಗ್ಗೆ ಸಾಕಷ್ಟು ಕ್ಯೂರಿಯಾಸಿಟಿ ಬಿಲ್ಡ್ ಮಾಡಿದ್ದಾರೆ.
ಅಂದ್ಹಾಗೆ ಲವ್ ಸ್ಟೋರಿ ಟೀಸರ್ ರಿಲೀಸ್ ಆದ ಕೆಲವೇ ಕೆಲವು ಗಂಟೆಗಳಲ್ಲಿ 3 ಮಿಲಿಯನ್ಗೂ ಅಧಿಕ ವಿವ್ಸ್ ಪಡೆಯುವ ಮೂಲಕ ಯೂಟ್ಯೂಬ್ ಟ್ರೇಂಡಿಂಗ್ನಲ್ಲಿ ನಂಬರ್ 1 ಸ್ಥಾನದಲ್ಲಿದೆ. ಇನ್ನು ಲವ್ಸ್ಟೋರಿ ಸಿನಿಮಾಕ್ಕೆ ಶೇಖರ್ ಕಮ್ಮುಲಾ ಆ್ಯಕ್ಷನ್ ಕಟ್ ಹೇಳಿದ್ದು, ಸದ್ಯದಲ್ಲಿಯೇ ತೆರೆ ಮೇಲೆ ಲವ್ಸ್ಟೋರಿ ಹೇಳೋಕ್ಕೆ ಸಾಯಿಪಲ್ಲವಿ ಹಾಗೂ ನಾಗಚೈತನ್ಯ ಬರಲಿದ್ದಾರೆ.