ಸುವರ್ಣ ಗ್ರಾಮ ಯೋಜನೆಯಡಿ ಪ್ರತೀ ಗ್ರಾಮಕ್ಕೆ ₹1 ಕೋಟಿ ಅನುದಾನ; ಬೊಮ್ಮಾಯಿ

ದಾವಣಗೆರೆ: ಬಿ.ಎಸ್‌.ಯಡಿಯೂರಪ್ಪ ಅಧಿಕಾರವಧಿಯಲ್ಲಿ ಜಾರಿಗೆ ತಂದಿದ್ದ ‘ಸುವರ್ಣ ಗ್ರಾಮ ಯೋಜನೆ’ಯನ್ನು ರಾಜ್ಯದಲ್ಲಿ ಮತ್ತೆ ಜಾರಿಗೆ ತಂದು ಗ್ರಾಪಂ ಅಭಿವೃದ್ಧಿಗೆ ಒಂದು ಕೋಟಿ ಅನುದಾನ ನೀಡಲಾಗುವುದು ಎಂದು ಗೃಹಸಚಿವ ಬಸವರಾಜ್‌ ಬೊಮ್ಮಾಯಿ ಹೇಳಿದರು.

ಇಲ್ಲಿನ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಜನಸೇವಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಿಎಸ್‌ವೈ ಸುವರ್ಣ ಗ್ರಾಮ ಯೋಜನೆ ತಂದಿದ್ದರು. ಆದರೆ ಕಾಂಗ್ರೆಸ್‌ ಸರಕಾರ ಯೋಜನೆ ರದ್ದುಪಡಿಸಿ ‘ಗ್ರಾಮವಿಕಾಸ’ ಯೋಜನೆ ಜಾರಿಗೆ ತಂದರು. ಆದರೆ ಹಳ್ಳಿಗಳ ಅಭಿವೃದ್ಧಿ ಮಾತ್ರ ಆಗಲಿಲ್ಲ. ಹಾಗಾಗಿ ‘ಸುವರ್ಣಗ್ರಾಮ’ ಯೋಜನೆ ಮತ್ತೆ ಜಾರಿಗೊಳಿಸಲಾಗುವುದು ಎಂದರು.

ಡಿಸಿಎಂ ಲಕ್ಷಣ ಸವದಿ ಮಾತನಾಡಿ, ಕಡೆ ಕಾರ್ಯಕರ್ತನಿಗೆ ಮಾತ್ರ ಬಿಜೆಪಿಯಲ್ಲಿಅಧಿಕಾರ ಸಿಗಲಿದೆ. ಹಳ್ಳಿಗಳಲ್ಲಿನ ಕಾರ್ಯಕರ್ತರ ಶ್ರಮ ಇದ್ದರೆ ಮುಂದೆ ಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಯಲ್ಲಿಯೂ ಅಧಿಕಾರ ಸಿಗಲಿದೆ ಎಂದು ಹೇಳಿದರು. ಸಚಿವ ಶ್ರೀ ರಾಮುಲು ಮಾತನಾಡಿ, ಎಂಎಲ್‌ಎಗಿರುವ ಶಕ್ತಿ ಪಂಚಾಯತಿ ಅಧ್ಯಕ್ಷನಿಗೆ ಇದ್ದು, ಜತೆಗಿರುವು ಅಧಿಕಾರಿಗಳೆಂಬ ಆಧುನಿಕ ಬಿಲ್ವಿದ್ಯೆ ಪ್ರವೀಣ ದ್ರೋಣಾಚಾರ್ಯರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.

ಉಸ್ತುವಾರಿ ಸಚಿವ ಭೈರತಿ ಬಸವರಾಜ್‌, ಸಂಸದರಾದ ಜಿಎಂ ಸಿದ್ದೇಶ್ವರ, ಶೋಭಾ ಕರಂದ್ಲಾಜೆ ಮಾತನಾಡಿದರು. ಶಾಸಕರಾದ ಎಸ್‌.ಎ.ರವೀಂದ್ರನಾಥ್‌, ಎಸ್‌.ವಿ.ರಾಮಚಂದ್ರ, ರೇಣುಕಾಚಾರ್ಯ, ಮಾಡಾಳ್‌ ವಿರೂಪಾಕ್ಷಪ್ಪ, ಜಿಪಂ ಅಧ್ಯಕ್ಷೆ ಶಾಂತಕುಮಾರಿ, ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್‌, ಮೇಯರ್‌ ಬಿ.ಜಿ.ಅಜೇಯ್‌ ಕುಮಾರ್‌ ಸೇರಿದಂತೆ ಇನ್ನಿತರರು ಇದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *