ಹಿರಿಯ ಸನ್ಯಾಸಿ ಸ್ವಾಮಿ ಹರ್ಷಾನಂದ ಇನ್ನಿಲ್ಲ
ರಾಮಕೃಷ್ಣ ಪರಂಪರೆಯ ಹಿರಿಯ ಸನ್ಯಾಸಿ, ಬಸವನಗುಡಿ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿದ್ದ ಸ್ವಾಮಿ ಹರ್ಷಾನಂದ ಮಹರಾಜ್ ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಮದ್ಯಾಹ್ನ ಸುಮಾರು 1 ಗಂಟೆಗೆ ದೈವಾರಧೀನರಾಗಿದ್ದಾರೆ ಎಂದು ಆಶ್ರಮದ ಮೂಲಗಳು ತಿಳಿಸಿವೆ.
ಬಸವನಗುಡಿಯಲ್ಲಿರುವ ಶ್ರೀ ರಾಮಕೃಷ್ಣ ಆಶ್ರಮದ ವಿದ್ಯಾರ್ಥಿ ಮಂದಿರದಲ್ಲಿ ಇಂದು ಸಂಜೆ 5 ರಿಂದ 8 ಗಂಟೆಯವರೆಗೂ ಮತ್ತು ನಾಳೆ ಬೆಳಗ್ಗೆ 6 ಗಂಟೆಯಿಂದ ಮದ್ಯಾಹ್ನ 12 ಗಂಟೆಯ ವರೆಗೆ ಸ್ವಾಮಿ ಹರ್ಷಾನಂದರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಸ್ವಾಮಿ ಹರ್ಷಾನಂದರ ನಿಧನಕ್ಕೆ ಸಿಎಂ ಬಿಎಸ್ವೈ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸ್ವಾಮಿಜಿಗಳು ರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಎತ್ತಿ ಹಿಡಿದ ವಿದ್ವಾಂಸರು, ಉತ್ತಮ ವಾಗ್ಮಿಗಳೂ ಆಗಿದ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದ್ದಾರೆ