ಸಂಪುಟ ವಿಸ್ತರಣೆ: ಬಿಎಸ್‌ವೈಯಿಂದ ಅಧಿಕೃತ ಕರೆ ಸ್ವೀಕರಿಸಿದ ಶಾಸಕರು ಯಾರೆಲ್ಲಾ?

ಬೆಂಗಳೂರು: ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭಗೊಂಡಿದ್ದು ಬಿಎಸ್‌ವೈ ಲಿಸ್ಟ್‌ನಲ್ಲಿ ಇದ್ದವರಿಗೆ ಕರೆ ಮಾಡಿ ಅಧಿಕೃತ ಆಹ್ವಾನ ನೀಡಿದ್ದಾರೆ. ಬುಧವಾರ ಮಧ್ಯಾಹ್ಮ 3.50 ಕ್ಕೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಸಿಎಂ ಬಿಎಸ್ ಯಡಿಯೂರಪ್ಪ ಅವರು ಹೇಳಿರುವಂತೆ 7 ಅಥವಾ 8 ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಲಾಗುತ್ತದೆ. ಆದರೆ ಇದುವರೆಗೆ ಕೇವಲ ನಾಲ್ಕು ಮಂದಿ ಹೆಸರು ಅಧಿಕೃತಗೊಂಡಿದೆ. ಉಳಿದ ಮೂರು ಅಥವಾ ನಾಲ್ಕು ಮಂದಿಗೆ ಯಾರು ಎಂಬುವುದು ಇನ್ನೂ ದೃಢಗೊಂಡಿಲ್ಲ.

ಸುಳ್ಳಿ ಶಾಸಕ ಎಸ್.ಅಂಗಾರ, ಉಮೇಶ್ ಕತ್ತಿ, ಎಂಟಿಬಿ ನಾಗರಾಜ್‌ ಹಾಗೂ ಸಿ.ಪಿ ಯೋಗೇಶ್ವರ್‌ಗೆ ಸಚಿವ ಸ್ಥಾನ ಫಿಕ್ಸ್ ಆಗಿದೆ. ಶಾಸಕ ಅಂಗಾರ ಅವರಿಗೆ ಸಿಎಂ ಬಿಎಸ್‌ವೈ ಮಂಗಳವಾರ ರಾತ್ರಿ ಫೋನ್ ಮಾಡಿ ದೃಢಪಡಿಸಿದ್ದಾರೆ. ಸಿ.ಪಿ ಯೋಗೇಶ್ವರ್‌ ಅವರಿಗೂ ಯಡಿಯೂರಪ್ಪ ಕರೆ ಮಾಡಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇನ್ನು ಉಮೇಶ್ ಕತ್ತಿ ಅವರಿಗೂ ಬಿಎಸ್‌ವೈ ಬುಧವಾರ ಸಂಜೆ ಫೋನ್ ಕರೆ ಮಾಡಿ ಬೆಂಗಳೂರಿಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಮತ್ತೋರ್ವ ಶಾಸಕ ಎಂಟಿಬಿ ನಾಗರಾಜ್‌ಗೂ ಸಚಿವ ಸ್ಥಾನ ಅಧಿಕೃತಗೊಂಡಿದೆ.

ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿತ್ತು. ಆದರೆ ಅದು ಇನ್ನೂ ಅಧಿಕೃತಗೊಂಡಿಲ್ಲ. ಮುನಿರತ್ನ ಮಂತ್ರಿಯಾಗುವ ವಿಶ್ವಾಸದಲ್ಲಿ ಇದ್ದರೂ ಹೈಕಮಾಂಡ್‌ ಇನ್ನೂ ಸಮ್ಮತಿ ನೀಡಿಲ್ಲ. ಆರ್‌ಆರ್‌ ನಗರದಲ್ಲಿ ಟಿಕೆಟ್‌ ನೀಡುವ ವಿಚಾರದಲ್ಲೂ ಮುನಿರತ್ನಗೆ ಹೈಕಮಾಂಡ್ ತಡಮಾಡಿತ್ತು. ಸಾಕಷ್ಟು ಪ್ರಯತ್ನಗಳ ಬಳಿಕ ಟಿಕೆಟ್ ನೀಡಲಾಗಿತ್ತು. ಆದರೆ ಇದೀಗ ಸಂಪುಟ ವಿಸ್ತರಣೆಯ ಸಂದರ್ಭದಲ್ಲೂ ಮುನಿರತ್ನಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ ಅಧಿಕವಾಗಿದೆ.

ಉಳಿದಂತೆ ಮುರುಗೇಶ್‌ ನಿರಾಣಿ, ಅರವಿಂದ್ ಲಿಂಬಾವಳಿ, ಪೂರ್ಣಿಮಾ ಶ್ರೀನಿವಾಸ್ ಅಥವಾ ರೂಪಾಳಿ ನಾಯ್ಕ್ ನಡುವೆ ಮೂರು ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ಬಹುಷಃ ಬುಧವಾರ ಮಧ್ಯಾಹ್ಮದ ಒಳಗಾಗಿ ಹೆಸರುಗಳು ಅಂತಿಮಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಉಳಿದ ಮೂರು ಸ್ಥಾನಗಳಿಗೆ ಮುರುಗೇಶ್ ನಿರಾಣಿ, ಅರವಿಂದ್ ಲಿಂಬಾವಳಿ ಹಾಗೂ ಮುನಿರತ್ನ ಹೆಸರು ಮುಂಚೂಣಿಯಲ್ಲಿದ್ದರೂ ಅಂತಿಮ ನಿರ್ಧಾರವನ್ನು ಕೈಹಮಾಂಡ್ ಕೈಗೊಳ್ಳಲಿದೆ. ಆದರೆ ಹೇಗಾದರೂ ಮಾಡಿ ಮುನಿರತ್ನಗೆ ಸಚಿವ ಸ್ಥಾನ ನೀಡಲು ಬಿಎಸ್ ಯಡಿಯೂರಪ್ಪ ಪ್ರಯತ್ನ ನಡೆಸುತ್ತಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *