ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ವಿತರಣೆ
ಅಪಜಲ್ಪುರ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ 92 ನಿರ್ಗತಿಕರಿಗೆ ಪ್ರತಿ ತಿಂಗಳು ₹ 1000 ಮಾಶಾಸನ ನೀಡಲಾಗುತ್ತಿದೆ’ ಪ್ರತಿಯೊಬ್ಬರ ಮನೆಗೆ ಹೋಗಿ ಕಾರ್ಯಕರ್ತರ ಮೂಲಕ ಫಲಾನುಭವಿಗಳಿಗೆ ಮಾಶಾಸನ ವಿತರಿಸುವ ಕೆಲಸ ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ.ಎಂದು ಸಂಸ್ಥೆಯ ತಾಲೂಕು ಯೋಜನಾಧಿಕಾರಿ ನವೀನ ಎಂ ಹೇಳಿದರು.
ಅವರು ತಾಲೂಕಿನ ಮಣ್ಣೂರ ಗ್ರಾಮದ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ
ತಾಲೂಕಿನಲ್ಲಿ ನಿರ್ಗತಿಕರನ್ನು ಗುರುತಿಸಿ ಅವರ ಜೀವನ ನಿರ್ವಹಣೆಗಾಗಿ ಪಾತ್ರೆ, ಚಾಪೆ, ತಲೆ ದಿಂಬು, ಹೊದಿಕೆ ಒಳಗೊಂಡಿರುವ ವಾತ್ಸಲ್ಯ ಎಂಬ ಕಿಟ್ ವಿತರಿಸಲಾಗುತ್ತಿದೆ’ಎಂದು ಹೇಳಿದರು.
ಯಲ್ಲಮ್ಮ ದೇವಿ ಟ್ರಸ್ಟ್ ಕಮೀಟಿ ಅಧ್ಯಕ್ಷ ಮಹಾದೇವಪ್ಪ ಕರೂಟಿ ಮಾತನಾಡಿ,
ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ಸಂಸ್ಥೆಯು ಸಮಾಜದಲ್ಲಿ ಸರ್ವರ ಒಳಿತಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಉತ್ತಮವಾಗಿ ಸೇವೆ ಮಾಡುತ್ತಿದೆ.ಸಾ.ಸಿ,ಬೆನಕನಹಳ್ಳಿ ಮಾತನಾಡಿ
ತಾಲೂಕಿನಲ್ಲಿ ಎಲ್ಲರ ಸಹಾಯ,ಸಹಕಾರದಿಂದ, ಅತ್ಯುತ್ತಮ ಕೆಲಸ ಮಾಡಲು, ಸಾಧ್ಯವಾಗಿದೆ.
ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯಗಳನ್ನು ನೀಡುತ್ತಾ ಅವರನ್ನು ಆರ್ಥಿಕವಾಗಿ ಸಬಲೀಕರಣ ಮಾಡುತ್ತಾ ಮುಂದೆ ಸಾಗುತ್ತಿರುವ ಸಂಸ್ಥೆಯ ಜನ ಸೇವೆ ಶ್ಲಾಘನೀಯ’ ಎಂದು ಹೇಳಿದರು
ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ರಮೇಶ ಧೂಳಪ್ಪ ಬಾಕೆ ಕಾರ್ಯಕ್ರಮ,
ಉದ್ಘಾಟಿಸಿದರು.ರಾಚಪ್ಪ ಕೊಪ್ಪಾ,ಜಟ್ಟೆಪ್ಪ ಭುಯ್ಯಾರ,ಸಾ.ಸಿ,ಬೆನಕನಹಳ್ಳಿ, ಬಸವರಾಜ ವಾಯಿ, ಅಪ್ಪಾಸಾಹೇಬ ಹೊಸೂರಕರ,ಆನಂದ ಶೆಟ್ಟಿ, ಶಿವಮೂರ್ತಿ,ಹಾಜಿಮಲಂಗ ಕರವಲ, ವಿನೋದ ಅಂಕಲಗಿ, ಮೇಲ್ವಿಚಾರಕಿ ಚಂದ್ರಕಲಾ,ಸೇವಾ ಪ್ರತಿನಿಧಿ ವಿದ್ಯಾವತಿ, ಸುಜಾತಾ,ಭೌರಮ್ಮ, ಒಕ್ಕೂಟದ ಅಧ್ಯಕ್ಷರು ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳಿದ್ದರು.
ಅಪಜಲ್ಪುರ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ವಿತರಿಸಲಾಯಿತು