ಇಂಥಾ ಕೆಟ್ಟ ಸರ್ಕಾರ ಇದ್ದರೂ ಬಾಯ್ ಮುಚ್ಕೊಂಡು ಕೂತಿದ್ದೇನೆ..! ಏನಾದ್ರೂ ಮಾತನಾಡಿದ್ರೆ ಜಾತಿ ವಿಚಾರ ಎಳೆದು ತರ್ತಾರೆ :HDK
ರಾಜ್ಯ ಸರ್ಕಾರ ಕಮಿಷನ್ ದಂಧೆಯಲ್ಲಿ ಮುಳುಗಿದೆ ಅಂತ ದೇವನಹಳ್ಳಿಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಒಂದು ಕೋಟಿ ಕಾಮಗಾರಿಗೆ 10 ಲಕ್ಷ ಕಮಿಷನ್ ಕೊಡ್ಬೇಕು. ಇಂಥಾ ಕೆಟ್ಟ ಸರ್ಕಾರ ಇದ್ದರೂ ಬಾಯ್ ಮುಚ್ಕೊಂಡು ಕೂತಿದ್ದೇನೆ.
ಏನಾದ್ರೂ ಮಾತನಾಡಿದ್ರೆ ಜಾತಿ ವಿಚಾರ ಎಳೆದು ತರ್ತಾರೆ. ಈ ಹಿಂದಿನ ಅನುಭವಗಳಿಂದ ಮೌನಕ್ಕೆ ಶರಣಾಗಿದ್ದೇನೆ ಅಂತ ಹೇಳಿದ್ದಾರೆ. ಬಿಜೆಪಿ ಸರ್ಕಾರ ಹೇಗೆ ನಡೀತಿದೆ ಎನ್ನೋದು ಗುತ್ತಿಗೆದಾರರಿಗೆ ಗೊತ್ತಿದೆ. ಜೆಡಿಎಸ್ ಅನ್ನು ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ತರ್ತೇವೆ. ಬಿಜೆಪಿಯೊಂದಿಗೆ ವಿಲೀನ, ಸೆಂಟ್ರಲ್ ಮಿನಿಸ್ಟರ್ ಅಂತಾ ಸುಳ್ಳು ಹಬ್ಬಿಸ್ತಾರೆ ಅಂತ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.