ಕೃಷಿ ಮಸೂದೆ ಜಾರಿ ವಿರೋಧ, ಬೆಳಗಾವಿಯಲ್ಲಿ ರೈತರಿಂದ ಅರೆಬೆತ್ತಲೆ ಮೆರವಣಿಗೆ; ಅಮಿತ್ ಶಾ ಗೆ ಗೋ ಬ್ಯಾಕ್!
ಬೆಳಗಾವಿ :ಕೃಷಿ ಮಸೂದೆ ಜಾರಿ ವಿರೋಧಿಸಿ ಕೇಂದ್ರ ಸರಕಾರದ ವಿರುದ್ದ ಭಾನುವಾರ ಇಲ್ಲಿನ ಚನ್ನಮ್ಮ ವೃತ್ತದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಅರೆಬೆತ್ತಲೆ ಮೆರವಣಿಗೆ ನಡೆಸಿದ ರೈತರು ಬೆಳಗಾವಿಗೆ ಆಗಮಿಸುತ್ತಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಗೆ ಗೋ ಬ್ಯಾಕ್ ಹೇಳಿದರು.
ರೈತ ವಿರೋಧಿ ಕೃಷಿ ಮಸೂದೆಯನ್ನು ಜಾರಿಗೊಳಿಸಿರುವ ಕೇಂದ್ರ ಸರಕಾರದ ನಡೆ ಮತ್ತು ಮಸೂದೆಯಿಂದ ಆಗುವ ಲಾಭ ಹಾನಿಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಸಲು ಅನುಮತಿ ಕೋರಿದ್ದರೂ ಅವಕಾಶ ನೀಡದ ಜನಪ್ರತಿನಿಧಿಗಳ ವಿರುದ್ಧ ಹರಿಹಾಯ್ದರು.