ಇಲ್ಲಿಯವರೆಗೆ ದೇಶದಲ್ಲಿ ಲಿಸಿಕೆ ಪಡೆದವರೆಷ್ಟು? ಅಡ್ಡಪರಿಣಾಮಕ್ಕೆ ತುತ್ತಾದವರೆಷ್ಟು?
ದೇಶದಲ್ಲಿ ಮೂರು ದಿನಗಳ ಒಳಗೆ ದೇಶದಲ್ಲಿ 3,81,305 ಮಂದಿಗೆ ಲಸಿಕೆ ಹಾಕಿದ್ದು, 580 ಜನರ ಮೇಲೆ ಅಡ್ಡ ಪರಿಣಾಮ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇಬ್ಬರು ವ್ಯಾಕ್ಸಿನೇಷನ್ ವೇಳೆ ಸಾವನ್ನಪ್ಪಿದ್ದು, ಈವರೆಗೆ ಈ ಸಾವುಗಳು ವ್ಯಾಕ್ಸಿನೇಷನ್ಗೆ ಸಂಬಂಧಿಸಿದ್ದಲ್ಲ. ಆದರೂ ಮರಣೋತ್ತರ ಪರೀಕ್ಷೆ ನಂತರ ಕಾರಣ ತಿಳಿಯಲಿದೆ ಎಂದು ಇಲಾಖೆ ಆರೋಗ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಮನೋಹರ್ ಅಗ್ನಾನಿ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ 42 ವರ್ಷದ ಪುರುಷ ಸಾವನ್ನಪ್ಪಿದ್ದಾರೆ. ಅವರ ಮರಣೋತ್ತರ ಪರೀಕ್ಷೆ ವರದಿ ಕಾಯುತ್ತಿದ್ದೇವೆ. ಕರ್ನಾಟಕದ ಬಳ್ಳಾರಿಯಲ್ಲಿ ಜನವರಿ 16 ರಂದು ಲಸಿಕೆ ಹಾಕಿಸಿಕೊಂಡ 42 ವರ್ಷದ ಪುರುಷ ಕೂಡಾ ಸಾವನ್ನಪ್ಪಿದ್ದು, ಹೃದಯಾಘಾತದಿಂದ ಆಗಿದೆ ಎಂಬ ಮಾಹಿತಿ ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ 580 ಮಂದಿ ಅಡ್ಡ ಪರಿಣಾಮದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕರ್ನಾಟಕದ ಚಿತ್ರದುರ್ಗದಲ್ಲಿ ಇಬ್ಬರನ್ನು ಆಸ್ಪತ್ರೆಯ ನಿಗಾದಲ್ಲಿ ಇಡಲಾಗಿದೆ ಎಂದು ಅಗ್ನಾನಿ ಮಾಹಿತಿ ನೀಡಿದ್ದಾರೆ.