ಏಳು ದಿನವಾದ್ರು ಹಂಚಿಕೆಯಾಗದ ನೂತನ ಸಚಿವರ ಖಾತೆ…! ಇಂದು ಸಂಜೆ ತೀರ್ಮಾನ ಸಾಧ್ಯತೆ..!
ಏಳು ದಿನವಾದ್ರೂ ನೂತನ ಸಚಿವರಿಗೆ ಇನ್ನೂ ಖಾತೆ ಹಂಚಿಕೆ ಆಗಿಲ್ಲ. ಉಡುಪಿ ಪ್ರವಾಸದಲ್ಲಿರುವ ಸಿಎಂ ಬೆಂಗಳೂರಿಗೆ ಬಂದ ಕೂಡಲೇ ಖಾತೆ ಹಂಚಿಕೆ ಪಟ್ಟಿ ರಾಜಭವನಕ್ಕೆ ತಲುಪೋ ಸಾಧ್ಯತೆ ಇದೆ. ಹಲವು ಹೊಸ ಸಚಿವರು ಪ್ರಮುಖ ಖಾತೆಗಳಿಗೆ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಖಾತೆ ಹಂಚಿಕೆ ಕಗ್ಗಂಟಾಗಿದೆ.
ಹಾಲಿ ಸಚಿವರ ಕೈಲಿರೋ ಪ್ರಮುಖ ಖಾತೆಗಳನ್ನು ಕಸಿದುಕೊಂಡು ಹೊಸಬರಿಗೆ ಕೊಡ್ಬೇಕು ಇದು ಸಿಎಂಗೆ ಕಗ್ಗಂಟಾಗಿದೆ. MTB ನಾಗರಾಜ್ ವಸತಿ ಖಾತೆ, ಸಿಪಿ ಯೋಗೇಶ್ವರ್ ಲೋಕೋಪಯೋಗಿ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ. ಜಿಲ್ಲೆಗಳ ಉಸ್ತುವಾರಿ ಹಾಗೂ ಖಾತೆಗಳ ಹಂಚಿಕೆ ಬಗ್ಗೆ ಇಂದು ಸಂಜೆ ಸಿಎಂ ತೀರ್ಮಾನ ಮಾಡೋ ಸಾಧ್ಯತೆ ಇದೆ.
ನೂತನ ಸಚಿವರಾದ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಮುರುಗೇಶ್ ನಿರಾಣಿ, ಎಂಟಿಬಿ ನಾಗರಾಜ್, ಎಸ್. ಅಂಗಾರ. ಆರ್. ಶಂಕರ್, ಸಿ.ಪಿ. ಯೋಗೇಶ್ವರ್ ಅವರಿಗೆ ಖಾತೆ ಹಂಚಿಕೆ ಮಾಡಬೇಕಾಗಿದ್ದು, ಕೆಲವು ಸಚಿವರ ಖಾತೆಗಳೂ ಬದಲಾವಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.