ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ಸಮರ್ಥಿಸಿಕೊಂಡ ನಳಿನ್ ಕುಮಾರ್ ಕಟೀಲ್

ಬೆಂಗಳೂರು: ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರೋ ನೂತನ ಕೃಷಿ ಕಾಯ್ದೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೃಷಿ ಕಾಯ್ದೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ‘ಮೋದಿ ವಿಥ್ ಫಾರ್ಮರ್ಸ್‌’ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸರಣಿ ಟ್ವೀಟ್ ಮಾಡಿರುವ ಅವರು, ತನ್ನದೇ ಉತ್ಪನ್ನಗಳನ್ನು ರೈತ ಮಂಡಿಗೆ ಹಾಕಿದ ಮೇಲೆ, ಬೇಕೆಂದಾಗ ಹಿಂತೆಗೆದುಕೊಳ್ಳಲು ಮತ್ತೆ ಪರವಾನಗಿಯನ್ನು ಪಡೆಯಲೇಬೇಕು ಎಂಬ ಎಪಿಎಂಸಿಯ ವ್ಯವಸ್ಥೆಯನ್ನು ರದ್ದುಗೊಳಿಸಿರುವ ಕೇಂದ್ರ ಸರಕಾರ, ರೈತನು ತನ್ನಿಚ್ಛೆ ಬಂದ ಕಡೆಯಲ್ಲಿ ಮಾರುವ ವ್ಯವಸ್ಥೆಯನ್ನು ಪ್ರಸ್ತುತಗೊಳಿಸಿದೆ ಎಂದು ಹೇಳಿದ್ದಾರೆ.

ಅಲ್ಲದೇ ರೈತನ ಮೇಲಿನ ಈ ದೌರ್ಜನ್ಯ ತಡೆಯಲು 1963 ರಲ್ಲಿ ಎಪಿಎಂಸಿ ಕಾಯ್ದೆಯನ್ನು ತರಲಾಯಿತು. ಗ್ರಾಹಕನಾಗಲಿ ಅಥವಾ ರೈತನಾಗಲಿ ಈ ಮಾರುಕಟ್ಟೆಯ ಮೂಲಕವೇ ಮಾರಾಟ ಅಥವಾ ಖರೀದಿಯನ್ನು ಮಾಡಬೇಕು‌. ಆದರೆ, ಹೊಸ ಕಾಯ್ದೆ ರೈತನಿಗೆ ಮುಕ್ತ ಮಾರುಕಟ್ಟೆಯನ್ನು ಒದಗಿಸುತ್ತದೆ ಎಂದು ನಳಿನ್ ಕುಮಾರ್ ಹೇಳಿದ್ದಾರೆ.

ಇನ್ನು ರೈತನು ಬೇರೆ ತಾಲ್ಲೂಕಿನ ಎಪಿಎಂಸಿಗಳಲ್ಲಿ ಉತ್ಪನ್ನಗಳಿಗೆ ಬೆಲೆ ಹೆಚ್ಚಿದ್ದರೂ ಸಹ ಮಾರಲು ನಿಷೇಧವಿತ್ತು. ಅದನ್ನೀಗ, ಕೇಂದ್ರ ಸರಕಾರ ನಿಷೇಧಿಸಿದ್ದು, ರೈತ ತಾನು ಇಚ್ಛೆ ಪಟ್ಟ ಮಂಡಿ ಅಥವಾ ಉಳಿದ ಸ್ಥಳಗಳಲ್ಲೂ ಉತ್ಪನ್ನಗಳ ವ್ಯವಹಾರ ಮಾಡಬಹುದಾಗಿದೆ ಎಂದು ನಳಿನ್ ಪ್ರತಿಪಾದಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *