ಬ್ರೆಝಿಲ್ ಗೆ ಸಂಜೀವಿನಿ ಹೊತ್ತೊಯ್ದಿದ್ದು ಯಾರು? ಇದು ಭಾರತಕ್ಕೆ ಬ್ರೆಝಿಲ್ ಅಧ್ಯಕ್ಷರ “ಧನ್ಯವಾದ”..
ದಕ್ಷಿಣ ಅಮೆರಿಕಾದ ಅತಿದೊಡ್ಡ ರಾಷ್ಟ್ರವಾದ ಬ್ರೆಜಿಲ್‌ಗೆ ಎರಡು ಮಿಲಿಯನ್ ಕೊರೊನಾವೈರಸ್ ಲಸಿಕೆಯನ್ನು ತಲುಪಿಸಿದ ಭಾರತಕ್ಕೆ, ಬ್ರೆಜಿಲ್ ಅಧ್ಯಕ್ಷ ಜೇರ್ ಬೊಲ್ಸೊನಾರೊ ಅವರು ವಿಶೇಷವಾದ ರೀತಿಯಲ್ಲಿ ಧನ್ಯವಾದ ತಿಳಿಸಿದ್ದಾರೆ. ರಾಮಾಯಣದಲ್ಲಿ ಸಂಜೀವಿನಿ ಪರ್ವತ ಹೊತ್ತು ತಂದು ಲಕ್ಷಣನಿಗೆ ಜೀವದಾನ ನೀಡಿದ ಹನುಮಂತನಂತೆ ಕೊರೊನಾ ವೈರಸ್ ಲಸಿಕೆಗಳನ್ನು ಭಾರತವು ಬ್ರೆಜಿಲ್‌ಗೆ ಕಳುಹಿಸಿಕೊಟ್ಟು ನಮ್ಮ ಪ್ರಜೆಗಳ ಜೀವ ಉಳಿಸಲಾಗಿದೆ ಎಂದು ಬ್ರೆಜಿಲ್ ಅಧ್ಯಕ್ಷ ಫೋಟೋವೊಂದನ್ನು ಟ್ವೀಟ್ ಮಾಡುವ ಮೂಲಕ ಭಾರತದ ಸಹಾಯವನ್ನು ಹೊಗಳಿದ್ದಾರೆ. ಇದು ನಿಜಕ್ಕೂ ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ.
ನಮಸ್ಕಾರ ಪ್ರಧಾನಿ ನರೇಂದ್ರ ಮೋದಿ ಅವರೇ, ಇಂತಹ ಜಾಗತಿಕ ಸವಾಲುಗಳನ್ನು ಮೆಟ್ಟಿ ನಿಲ್ಲಲು ಭಾರತದಂತಹ ಸ್ನೇಹಿತ ನಮ್ಮೊಂದಿಗಿರುವುದು ಹೆಮ್ಮೆಯನ್ನು ಮೂಡಿಸುತ್ತದೆ. ಭಾರತದಿಂದ ಬ್ರೆಜಿಲ್‌ಗೆ ಲಸಿಕೆ ರಫ್ತು ಮಾಡಿ ಸಹಾಯ ಮಾಡಿದಕ್ಕಾಗಿ ಧನ್ಯವಾದಗಳು” ಎಂದು ಟ್ವೀಟ್‌ನಲ್ಲಿ ಬೊಲ್ಸೊನಾರೊ ತಿಳಿಸಿದ್ದಾರೆ.
ಅಂದಹಾಗೆ ಕೆಲವರು ಮೋದಿಯವರು ತಟ್ಟೆ ಚಪ್ಪಾಳೆ ತಟ್ಟುತ್ತಿದ್ದಾರೆ ಮತ್ತು ಜಗತ್ತು ಲಸಿಕೆಗಳನ್ನು ತಯಾರಿಸುತ್ತಿದೆ ಎಂದು ಕರೋನಾ ನಿರ್ವಹಣೆಯನ್ನು ಟೀಕಿಸುತ್ತಿದ್ದರು. ಕರೋನಾ ಯುಗದಲ್ಲಿ ಧೈರ್ಯವನ್ನು ಕಳೆದುಕೊಳ್ಳದೆ ಹೇಗೆ ನಿಭಾಯಿಸಬೇಕು ಅನ್ನೋದನ್ನು ಮೋದಿ ತೋರಿಸಿದರು ಹಾಗೂ ಲಸಿಕೆ ತಯಾರಿಸಿದರು, ಇಂದು ಭಾರತದಿಂದ ಲಸಿಕೆ ಪಡೆಯಲು ಅರ್ಧದಷ್ಟು ಪ್ರಪಂಚವು ಸಜ್ಜಾಗಿದೆ.
ಆಸ್ಪತ್ರೆಯನ್ನು ನಿರ್ಮಿಸಿದರೆ ಏನಾಗುತ್ತದೆ , ಮಂದಿರ ನಿರ್ಮಿಸಿದರೆ ಏನಾಗುತ್ತದೆ ಅಂತ ಹೇಳೋ ಜನ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಬೇಕು. ಭಾರತವು ದೇವಾಲಯಗಳನ್ನು ನಿರ್ಮಿಸಿತು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಿದ ದೇಶಗಳಿಗೆ ಲಸಿಕೆಗಳನ್ನು ನೀಡಿತು. ಇಂದು, ವಿದೇಶಿಯರು ಕೂಡ ಭಾರತದ ಧಾರ್ಮಿಕ ಗ್ರಂಥಗಳಿಂದ ಉದಾಹರಣೆಗಳನ್ನು ತೆಗೆದುಕೊಂಡು ಭಾರತಕ್ಕೆ ಧನ್ಯವಾದ ಅರ್ಪಿಸುತ್ತಿದ್ದಾರೆ.