ಚಿನ್ನದ ಚಿನ್ನದ ಏರಿಳಿತದ ಹಾವು ಏಣಿ ಆಟ, ಇಂದಿನ ಬೆಲೆ ವಿವರ ಇಲ್ಲಿದೆ
ಬೆಂಗಳೂರು: ಶನಿವಾರವಾದ ಇಂದು ದೇಶದ ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆ ಕಂಡು ಗ್ರಾಂ ಗೆ 4,854ರೂ. ದಾಖಲಾಗಿದೆ. ಕೆಲ ದಿನಗಳ ಹಿಂದೆ ಬೆಲೆ ಗಣನೀಯ ಏರಿಕೆಯಾಗಿತ್ತು.
ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು (ಶನಿವಾರ) ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆ ಏರಿಕೆ ಕಂಡು 4,595ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ ಶನಿವಾರ 50,130 ರೂಪಾಯಿಗೆ ತಲುಪಿದೆ.
ಬೆಳ್ಳಿ ದರ:
ದೇಶದಲ್ಲಿ ಬೆಳ್ಳಿ ಬೆಲೆ ಏರಿಕೆ ಕಂಡು ಇಂದು ಒಂದು ಕೆಜಿಗೆ 66,800 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 65,900 ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ ಹೈದರಾಬಾದ್ ಸೇರಿ ಕೆಲ ಕಡೆ 71,300 ರೂ ದಾಟಿದೆ.
ಪ್ರಮುಖ ನಗರಗಳಲ್ಲಿ ಶನಿವಾರ 10 ಗ್ರಾಂ ಚಿನ್ನದ ಬೆಲೆ ಇಂತಿದೆ:
- ಬೆಂಗಳೂರು: ₹45,950 (22 ಕ್ಯಾರಟ್) ₹50,130 (24 ಕ್ಯಾರಟ್)
- ಚೆನ್ನೈ: ₹46,630 (22 ಕ್ಯಾರಟ್) ₹50,870(24 ಕ್ಯಾರಟ್)
- ದಿಲ್ಲಿ: ₹48,240 (22 ಕ್ಯಾರಟ್), ₹52,620 (24 ಕ್ಯಾರಟ್)
- ಹೈದರಾಬಾದ್: ₹45,950 (22 ಕ್ಯಾರಟ್) ₹50,130 (24 ಕ್ಯಾರಟ್)
- ಕೋಲ್ಕತಾ: ₹48,160 (22 ಕ್ಯಾರಟ್), ₹50,860 (24 ಕ್ಯಾರಟ್)
- ಮಂಗಳೂರು: ₹45,950 (22 ಕ್ಯಾರಟ್) ₹50,130 (24 ಕ್ಯಾರಟ್)
- ಮುಂಬಯಿ: ₹45,950(22 ಕ್ಯಾರಟ್), ₹50,130 (24 ಕ್ಯಾರಟ್ )
- ಮೈಸೂರು: ₹45,950 (22 ಕ್ಯಾರಟ್) ₹50,130(24 ಕ್ಯಾರಟ್)
ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದರೆ, ಬೆಳ್ಳಿ ಬೆಲೆಯಲ್ಲೂ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.