ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರಾಗಿಣಿಗೆ ಇವತ್ತೂ ಇಲ್ಲ ಬಿಡುಗಡೆ ಭಾಗ್ಯ..!
ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ ಸಿಲುಕಿ ಜೈಲು ಪಾಲಾಗಿದ್ದ ರಾಗಿಣಿಗೆ ಯಾಕೋ ಜೈಲಿಂದ ಮುಕ್ತಿ ಸಿಗೋ ಹಾಗೆ ಕಾಣ್ತಿಲ್ಲ. ಸುಪ್ರೀಂ ಕೋರ್ಟ್ ಬೇಲ್ ಸ್ಯಾಂಕ್ಷನ್ ಮಾಡಿ ಮೂರು ದಿನ ಕಳೆದ್ರೂ ರಾಗಿಣಿಗೆ ಮಾತ್ರ ಜೈಲಿಂದ ಹೊರ ಕಾಲಿಡೋಕೆ ಸಾದ್ಯವಾಗಿಲ್ಲ.
ಹೌದು, ರಾಗಿಣಿಗೆ ಇಂದೂ ಬಿಡುಗಡೆ ಭಾಗ್ಯ ಸಿಗಲಿಲ್ಲ. ಇನ್ನೂ ಎರಡು ದಿನ ಜೈಲೂಟ ತಿನ್ನೊ ದೌರ್ಭಾಗ್ಯವೇ ಫಿಕ್ಸ್ ಆಗಿದೆ. ಬ್ಯಾಡ್ ಲಕ್ ಅಂದ್ರೆ ಇದೆ ಇರ್ಬಹುದು ಅನ್ಸುತ್ತೆ. ಯಾಕಂದ್ರೆ ರಾಗಿಣಿಯ ಸದ್ಯದ ಪರಿಸ್ಥಿತಿ ನೋಡಿದ್ರೆ ಬ್ಯಾಡ್ ಲಕ್ ಅನ್ನೋದು ಸ್ಪಷ್ಟವಾಗಿ ತಿಳಿಯುತ್ತೆ. ಡ್ರಗ್ ಕೇಸಲ್ಲಿ ಜೈಲು ಸೇರಿರೊ ನಟಿ ರಾಗಿಣಿಗೆ ಯಾಕೋ ಹೊರ ಬರೋ ಭಾಗ್ಯವೆ ಸಿಕ್ತಿಲ್ಲ. ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ತಿರಸ್ಕ್ರತವಾದ ಬೆನ್ನಲ್ಲೆ ಜಾಮೀನಿಗಾಗಿ ರಾಗಿಣಿ ಸುಪ್ರೀಂ ಮೊರೆ ಹೋಗಿದ್ರು. ಸದ್ಯ ರಾಗಿಣಿಗೆ ಎರಡು ದಿನದ ಹಿಂದೆ ಸುಪ್ರೀಂ ಜಾಮೀನು ಮಂಜೂರು ಮಾಡಿತ್ತು. ಅದರ ಆದೇಶ ಪ್ರತಿ ನಿನ್ನೆ ರಾತ್ರಿ ಎನ್ ಡಿ ಪಿ ಎಸ್ ಕೋರ್ಟ್ ತಲುಪಿತ್ತು. ಆದ್ರೆ ಇಂದು ನಾಲ್ಕನೇ ಶನಿವಾರವಾರ ಹೀಗಾಗಿ ಆಫ್ ಡೆ ಆಗಿದ್ರಿಂದ ಷರತ್ತುಗಳನ್ನೂ ಪೂರೈಸಿ ಆದೇಶ ನೀಡಲು ಸಾದ್ಯವಾಗದೆ ಸೋಮವಾರಕ್ಕೆ ಮುಂದೂಡಲಾಗಿದೆ.
ಸುಪ್ರೀಂಕೋರ್ಟ್ ಆದೇಶದಂತೆ ಬೇಲ್ ಅರ್ಜಿಯಲ್ಲಿ ಷರತ್ತು ವಿದಿಸುವ ಅಧಿಕಾರ ಎನ್ ಡಿ ಪಿ ಎಸ್ ಕೋರ್ಟ್ ಗೆ ಇತ್ತು. ಇನ್ನೂ ಬೇಲ್ ನಲ್ಲಿ ಮೂರು ಲಕ್ಷ ಬಾಂಡ್ ಇಬ್ಬರ ಶೂರಿಟಿಗೆ ಎನ್ ಡಿಪಿಎಸ್ ಕೋರ್ಟ್ ಜಡ್ಜ್ ಜಿ. ಎಂ. ಶೀನಪ್ಪ ಸೂಚಿಸಿದ್ದಾರೆ. ಆದ್ರೆ ಅದನ್ನು ಪೂರೈಸಲು ಸಮಯವಕಾಶದ ಅಭಾವ ಇದ್ದಿದ್ರಿಂದ ಸೋಮವಾರಕ್ಕೆ ಷರತ್ತು ಪೂರೈಸಿ ಬಿಡುಗಡೆ ಮಾಡಲು ಸೂಚಿಸಿದೆ. ಒಂದು ವೇಳೆ ಸೋಮವಾರ ಏನಾದ್ರು ಸಾಧ್ಯವಾಗದೆ ಇದ್ರೆ ಮಂಗಳವಾರ ಗಣರಾಜ್ಯೋತ್ಸವ ರಜೆ ಹೀಗಾಗಿ ಮತ್ತೆ ಬುಧವಾರವೇ ರಾಗಿಣಿ ಬಿಡುಗಡೆ ಭಾಗ್ಯ ಸಿಗೋದು. ಒಟ್ನಲ್ಲಿ ಚಿತ್ರರಂಗದಲ್ಲಿ ರಾಣಿಯಂತೆ ಮೆರೆದ ರಾಗಿಣಿಯ ಸದ್ಯದ ಪರಿಸ್ಥಿತಿ ಮಾತ್ರ ಯಾರಿಗೂ ಬೇಡವಾದದ್ದು. ಇಷ್ಟು ದಿನ ಜಾಮೀನಿಗಾಗಿ ಕಾದು ಕುಳಿತಿದ್ದ ಪಂಜರದ ಗಿಣಿ, ಈಗ ಜಾಮೀನು ಸಿಕ್ರು ಹೊರಬಾರದೆ ಪರದಾಡುವಂತಾಗಿದೆ.