ಸುದೀಪ್​​ ಸಿನಿ ಜೀವನಕ್ಕೆ 25 ವರ್ಷದ ಸಂಭ್ರಮ..! ದಚ್ಚು ‘ರಾಬರ್ಟ್​’ ಸಿನಿಮಾ ಬಗ್ಗೆ ಕಿಚ್ಚನ ಮಾತು..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಸಿನಿ ಜೀವನಕ್ಕೆ 25 ವರ್ಷದ ಸಂಭ್ರಮ. ಇದೇ ಸಂತಸದಲ್ಲಿರೋ ಕಿಚ್ಚ ದುಬೈಗೆ ಪಯಣ ಬೆಳೆಸಿ, ಅಲ್ಲಿ ಗ್ರ್ಯಾಂಡ್​ ಆಗಿ ಸೆಲಬ್ರೇಟ್​ ಮಾಡಿಕೊಳ್ತಿದ್ದಾರೆ. ಇದರ ಬೆನ್ನಲೇ ದುಬೈನಿಂದ ಸುದೀಪ್​​ ವಿಡಿಯೋ ಕಾನ್ಫರೆನ್ಸ್​ ಮೂಲಕ ಸುದ್ದಿಗೋಷ್ಠಿ ನಡೆಸಿ. 25 ವರ್ಷದ ಸಿನಿಜೀವನದ ಸಿಹಿ-ಕಹಿ ಘಟನೆಗಳನ್ನ ಮೆಲಕು ಹಾಕಿದ್ದಾರೆ. ಇಷ್ಟೇ ಅಲ್ಲ ರಾಬರ್ಟ್​ ಸಿನಿಮಾದ ಬಗ್ಗೆಯೂ ಹೇಳಿದ್ದಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​​ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 25 ವರ್ಷಗಳಾಗಿವೆ. ಇದೇ ಸಂಭ್ರಮದಲ್ಲಿರೋ ಕಿಚ್ಚ ಡೈರೆಕ್ಟ್​​ ಆಗಿ ದುಬೈಗೆ ಹಾರಿ, ಅಲ್ಲಿ ತಮ್ಮ ಸಿನಿಜೀವನದ ಬೆಳ್ಳಿ ಹಬ್ಬವನ್ನ ಆಚರಿಸಿಕೊಳ್ತಿದ್ದಾರೆ. ಇದೇ ಖುಷಿಯಲ್ಲಿರೋ ಕಿಚ್ಚ, ದುಬೈನಿಂದ ವಿಡಿಯೋ ಕಾನ್ಫರೆನ್ಸ್​​​ ಮೂಲಕ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಕಲಾ ಬದುಕಿನ 25 ವರ್ಷದ ಜರ್ನಿ, ಕಷ್ಟ-ಸುಖ, ಬದುಕಿನ ಏಳು-ಬೀಳುಗಳನ್ನ ಮೆಲಕು ಹಾಕಿದ್ದಾರೆ. ಇಂತಹ ಸುಂದರವಾದ ಜರ್ನಿಯಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಇನ್ನು ಕಿಚ್ಚನ ಸಿನಿ ಜರ್ನಿ 25 ವರ್ಷ ತುಂಬಿ 26ನೇ ವರ್ಷಕ್ಕೆ ಕಾಲಿಡುತ್ತಿದೆ.

Video Player

00:00
02:36

ಸದೀಪ್​ ಸಿನಿ ಜೀವನದ ಬೆಳ್ಳಿ ಹಬ್ಬವನ್ನ ದುಬೈನಲ್ಲಿ ಗ್ರ್ಯಾಂಡ್​ ಆಗಿ ಸೆಲಬ್ರೇಟ್​ ಮಾಡ್ತಾರೆ. ಇದರ ವಿಶೇಷವಾಗಿ ಸುದೀಪ್​ ನಟನೆಯ ವಿಕ್ರಾಂತ್​ ರೋಣ ಸಿನಿಮಾದ ಟೀಸರ್​ ದುಬೈನ ಬುರ್ಜ್​ ಖಲೀಫಾದಲ್ಲಿ ಗ್ರ್ಯಾಂಡ್​ ಆಗಿ ರಿಲೀಸ್​ ಆಗಲಿದೆ. ಇದಲ್ಲದೇ ಜಗತ್ತಿನ ಅತಿ ಎತ್ತರದ ಕಟ್ಟಡದ ಮೇಲೆ, ಕಿಚ್ಚನ 2000 ಅಡಿ ಕಟೌಟ್​ ರಾರಾಜಿಸಲಿದೆ.

 

ಅಂದ್ಹಾಗೆ ಸುದೀಪ್​ ವಿಡಿಯೋ ಕಾನ್ಫರೆನ್ಸ್​ನಲ್ಲಿ, ಸಿನಿ ಜೀವನದ ಸಿಹಿ-ಕಹಿ ಶೇರ್​ ಮಾಡಿಕೊಳ್ಳುವುದರ ಜೊತೆಗೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ನಟನೆಯ ‘ರಾಬರ್ಟ್​’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಹೌದು ರಾಬರ್ಟ್​ ಸಿನಿಮಾ ತೆಲುಗುನಲ್ಲಿ ರಿಲೀಸ್​ ಮಾಡಲು ಅಲ್ಲಿನ ಮಂದಿ ತಕರಾರು ಮಾಡಿದ್ರು. ಹೀಗಾಗಿ ನಿನ್ನೆ ದಾಸ ದರ್ಶನ್​ ಇದರ ವಿರುದ್ಧ ಸೆಡಿದೆದ್ದು, ಫಿಲ್ಮ್​​​ ಚೇಂಬರ್​ಗೆ ದೂರು ಸಲ್ಲಿಸಿದ್ರು. ಇದರ ವಿಚಾರವಾಗಿ ಕಿಚ್ಚ ಸುದೀಪ್​ಗೆ ಕೇಳಿದ್ದಾಗ ಬೇರೆಯವರ ಸಿನಿಮಾ ಬಗ್ಗೆ ಮಾತಾಡಲ್ಲ, ಅವರಿಗೆ ಅವರ ಸಿನಿಮಾವನ್ನ ಉಳಿಸಿಕೊಳ್ಳುವ ಶಕ್ತಿ ದೇವರು ಕೊಟ್ಟಿದ್ದಾನೆ ಅಂತ ಹೇಳಿದ್ದಾರೆ.

 

ಇಷ್ಟೇ ಅಲ್ಲ ಕಿಚ್ಚ ಸುದೀಪ್​ ಕನ್ನಡ ಪ್ರೇಮವನ್ನ ಸಹ ಮೆರೆದಿದ್ದಾರೆ. ಹೌದು ಕನ್ನಡ ಭಾಷೆ, ಭಾವನೆಯಿಂದ ನಾನು ಈ ಮಟ್ಟಕ್ಕೆ ಏರಿದ್ದೇನೆ. ಕನ್ನಡ ಬಿಟ್ಟು ಬೇರೆ ಭಾಷೆ ಯೋಚನೆ ಮಾಡೋದು ಅಸಾಧ್ಯ ಅಂತ ದುಬೈನಲ್ಲಿ ಭಾಷಾಭಿಮಾನ ಮೆರೆದಿದ್ದಾರೆ ಅಭಿನಯ ಚಕ್ರವರ್ತಿ ಸುದೀಪ್​​.

ಒಟ್ಟಾರೆಯಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಸಿನಿ ಜೀವನದ ಬೆಳ್ಳಿ ಹಬ್ಬದ ಸಂಭ್ರಮ ಸಿಕ್ಕಾಪಟ್ಟೆ ಡಿಫರೆಂಟ್​ ಆಗಿರುತ್ತೆ. ಎನಿವೇ ನಮ್​ ಕಡೆಯಿಂದ ಕಿಚ್ಚ ಸುದೀಪ್​ ಅವ್ರಿಗೆ 25 ವರ್ಷ ತುಂಬಿ 26 ನೇ ವರ್ಷಕ್ಕೆ ಕಾಲಿಡ್ತಿರೋ ಸಿನಿಜೀವನಕ್ಕೆ ಆಲ್​ ದಿ ಬೆಸ್ಟ್​​..

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *