ತಮಿಳುನಾಡಿನಲ್ಲಿ ಅಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಿರಿಯಾನಿ ಸವಿದ ರಾಹುಲ್​ ಗಾಂಧಿ…!

ಯೂಟ್ಯೂಬ್‌ನಲ್ಲಿ ಜನಪ್ರಿಯ ವಿಲೇಜ್​ ಕುಕ್ಕಿಂಗ್​ ಶೋ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ರಾಹುಲ್ ಗಾಂಧಿ ಕಾಣಿಸಿಕೊಂಡ ನಂತರ ಈ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಅವರು ತಮಿಳುನಾಡಿನ ಸ್ಥಳೀಯ ಅಡುಗೆಯವರೊಂದಿಗೆ ಅಣಬೆ ಬಿರಿಯಾನಿ ಸವಿಯುತ್ತಿರುವುದು ವೈರಲ್ ಆಗಿದೆ.

ರಾಯ್ತಾ ಮಾಡುವಾಗ ಅದಕ್ಕೆ ಹಾಕುವ ಸಾಮಗ್ರಿಗಳ ತಮಿಳು ಹೆಸರುಗಳನ್ನು ಕೇಳಿ ತಿಳಿದುಕೊಂಡ ರಾಹುಲ್ ಗಾಂಧಿ ವಿಲೇಜ್ ಕುಕಿಂಗ್ ಚಾನೆಲ್​ನ ಶೆಫ್ ರೀತಿಯಲ್ಲೇ ಆ ಹೆಸರುಗಳನ್ನು ಹೇಳುತ್ತಾ ಅಡುಗೆ ಮಾಡಿದ್ದು ವಿಶೇಷವಾಗಿತ್ತು. ಅಡುಗೆಯ ನಂತರ ಚಾಪೆ ಮೇಲೆ ಕುಳಿತು, ಆ ಯೂಟ್ಯೂಬ್ ಚಾನೆಲ್​ನವರೊಂದಿಗೆ ಮಾತುಕತೆ ನಡೆಸಿದ ರಾಹುಲ್ ಗಾಂಧಿ ನಿಮಗೆ ಬೇರೆ ದೇಶಕ್ಕೆ ಹೋಗಿ ಅಡುಗೆ ಮಾಡಬೇಕೆಂಬ ಕನಸಿಲ್ಲವೇ? ಎಂದು ಕೇಳಿದರು. ಹಾಗೇ, ನನ್ನ ಆತ್ಮೀಯ ಸ್ನೇಹಿತನೊಬ್ಬ ಅಮೆರಿಕದಲ್ಲಿದ್ದಾನೆ. ಆತನಿಗೆ ನಾನು ಹೇಳಿ ನಿಮ್ಮ ಅಡುಗೆ ಶೋ ನಡೆಸಲು ವ್ಯವಸ್ಥೆ ಮಾಡಿಸುತ್ತೇನೆ. ಅಮೆರಿಕಕ್ಕೂ ಹೋಗಿ ಭಾರತೀಯ ಅಡುಗೆ ಮಾಡಿಬನ್ನಿ. ಹಾಗೇ, ಕರ್ನಾಟಕ, ಕೇರಳ ಸೇರಿದಂತೆ ಭಾರತದ ಬೇರೆ ರಾಜ್ಯಗಳಿಗೂ ಹೋಗಿ ಅಡುಗೆ ಮಾಡುವಂತೆ ಸಲಹೆ ನೀಡಿದರು.

Video Player

01:18
01:20

ರಾಹುಲ್ ಗಾಂಧಿ ಬಂದಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ವಿಲೇಜ್ ಕುಕಿಂಗ್ ಚಾನೆಲ್ ಟೀಂನವರು ತಮ್ಮ ಚಾನೆಲ್​ನ ಸಬ್​ಸ್ಕ್ರೈಬರ್​ಗಳಿಗೆ ಒಂದು ದಿನ ಔತಣಕೂಟ ಆಯೋಜಿಸಬೇಕೆಂಬ ಕನಸಿದೆ ಎಂದು ಹೇಳಿದರು. ನೀವು ಊಟ ಆಯೋಜಿಸಿದಾಗ ನನ್ನನ್ನೂ ಕರೆಯಿರಿ, ನಾನೂ ಬರುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು. ಮಶ್ರೂಮ್ ಬಿರಿಯಾನಿಯನ್ನು ಸವಿದ ರಾಹುಲ್ ಗಾಂಧಿ ತಮಿಳಿನಲ್ಲೇ ‘ನಲ್ಲ ಇರುಕು’ (ತುಂಬ ಚೆನ್ನಾಗಿದೆ) ಎಂದು ಹೇಳಿ ಮೆಚ್ಚುಗೆ ಸೂಚಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ತಮಿಳುನಾಡು ಪ್ರವಾಸದಲ್ಲಿದ್ದ ವೇಳೆ ಅವರು ಕೊಯಮತ್ತೂರು ಮತ್ತು ತಿರುಪ್ಪೂರಿಗೆ ಭೇಟಿ ನೀಡಿದ್ದರು. ಅಲ್ಲಿ ಅವರು ಕೈಗಾರಿಕೆ ಹಾಗೂ ಕೃಷಿ ವಲಯದ ಅಭಿವೃದ್ಧಿ ಮತ್ತು ಕೇಂದ್ರ ಸರ್ಕಾರವು ಅಂಗೀಕರಿಸಿದ ಹೊಸ ಕೃಷಿ ಕಾನೂನುಗಳ ಬಗ್ಗೆ ಸಂವಹನ ನಡೆಸಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *