ಕೊರೋನಾ ಎಫೆಕ್ಟ್: ಕ್ರೀಡಾ ಬಜೆಟ್ ನಲ್ಲಿ 230.78 ಕೋಟಿ ರೂ. ಕಡಿತ, ಖೇಲೋ ಇಂಡಿಯಾಗೆ ತೀವ್ರ ಹೊಡೆತ!

ನವದೆಹಲಿ: ಕೊರೋನಾ ಸಾಂಕ್ರಾಮಿಕ ರೋಗ ಪರಿಣಾಮ ಕ್ರೀಡಾ ಬಜೆಟ್ ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 230 ಕೋಟಿ ರೂಪಾಯಿ ಕಡಿತ ಮಾಡಲಾಗಿದೆ.

2021-22ರ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರ ಕ್ರೀಡೆಗಾಗಿ 2596.14 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಆದರೆ ಕಳೆದ ಹಣಕಾಸು ವರ್ಷದಲ್ಲಿ ಸರ್ಕಾರವು ಕ್ರೀಡೆಗಾಗಿ 2826.92 ಕೋಟಿ ರೂ.ಗಳನ್ನು ಮೀಸಲಿಟ್ಟಿತ್ತು. ನಂತರ ಸಾಂಕ್ರಾಮಿಕ ರೋಗದಿಂದ ಕ್ರೀಡಾಕೂಟಗಳು ನಡೆಯದಿದ್ದರಿಂದ ಇದನ್ನು 1800.15 ಕೋಟಿ ರೂ.ಗೆ ಪರಿಷ್ಕರಿಸಲಾಗಿತ್ತು.

ಆದಾಗ್ಯೂ, ಟೋಕಿಯೊ ಒಲಿಂಪಿಕ್ಸ್ ಮುಂದೂಡಲ್ಪಟ್ಟಿದ್ದರಿಂದ ಕಳೆದ ವರ್ಷ ಖರ್ಚು ಹೆಚ್ಚಾಗಿತ್ತು. ಬಹುತೇಕ ಎಲ್ಲ ಕ್ರೀಡೆಗಳಲ್ಲಿ ದೇಶೀಯ ಕೂಟಗಳು ರದ್ದಾಗಿದ್ದವು. ಭಾರತದ ಹೆಚ್ಚಿನ ಕ್ರೀಡಾಪಟುಗಳಿಗೆ ಯಾವುದೇ ವಿದೇಶಿ ತರಬೇತಿ ಮತ್ತು ಸ್ಪರ್ಧೆ ಸಾಧ್ಯವಾಗಲಿಲ್ಲ. ಇನ್ನು ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದು ಸೇರಿದಂತೆ ಎಲ್ಲಾ ವಿದೇಶಿ ತರಬೇತಿ ಮತ್ತು ಸ್ಪರ್ಧೆಯ ವೆಚ್ಚವನ್ನು ಕ್ರೀಡಾ ಸಚಿವಾಲಯವೇ ಭರಿಸುತ್ತದೆ.

ಕಳೆದ ವರ್ಷದ ಬಜೆಟ್‌ನಲ್ಲಿ ಕ್ರೀಡೆಗಳಿಗೆ 2826.92 ರೂ.ಗಳನ್ನು ನಿಗದಿಪಡಿಸಲಾಯಿಗಿತ್ತು. ಆದರೆ ಕೋವಿಡ್ 19 ಸಾಂಕ್ರಾಮಿಕ ರೋಗದ ನಂತರ ವಿಶ್ವದಾದ್ಯಂತ ಎಲ್ಲಾ ಕ್ರೀಡಾಕೂಟಗಳು ಸ್ಥಗಿತಗೊಂಡಿದ್ದರಿಂದ ಬಜೆಟ್ ಅನ್ನು 1800.15 ಕೋಟಿಗಳಿಗೆ ಪರಿಷ್ಕರಿಸಲಾಯಿತು ಎಂದು ಕ್ರೀಡಾ ಸಚಿವಾಲಯದ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.

ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಹೆಚ್ಚಿನ ರಾಷ್ಟ್ರೀಯ ಶಿಬಿರಗಳನ್ನು ಮುಚ್ಚಿದ್ದರಿಂದ ಕಳೆದ ವರ್ಷ ಯಾವುದೇ ಚಟುವಟಿಕೆಗಳು ನಡೆದಿರಲಿಲ್ಲ. ಅಲ್ಲದೆ ಮೂಲಸೌಕರ್ಯ ಅಭಿವೃದ್ಧಿ ಮತ್ತು ಕ್ರೀಡಾಂಗಣಗಳ ನವೀಕರಣವು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *