Dinosaur Footprint : ಅಚ್ಚರಿ..! 4 ವರ್ಷದ ಮಗು ಪತ್ತೆ ಹಚ್ಚಿತು 20 ಕೋಟಿ ವರ್ಷ ಹಿಂದಿನ ಡೈನೋಸರಸ್ ಹೆಜ್ಜೆಗುರುತು!
ವೇಲ್ಸ್ : ನಾಲ್ಕು ವರ್ಷದ ಮಗುವೊಂದು ಜೀವವಿಜ್ಞಾನ ಕ್ಷೇತ್ರದ ಕುತೂಹಲವೊಂದನ್ನು ಬಿಚ್ಚಿಟ್ಟ ಸುದ್ದಿ ಇದು. ಬ್ರಿಟನಿನ (UK) ಮಗುವೊಂದು ಸಮುದ್ರ ಕಿನಾರೆ ಬಳಿ ಎಂದಿನಂತೆ ಆಡುತ್ತಿತ್ತು. ಆ ಮಗುವಿನ ಹೆಸರು ಲಿಲಿ ವಿಲ್ಡರ್ (Lily Wilder). ಮಗು ಎಂದಿನಂತೆ ನೆಲ ಕೆರೆಯುವಾಗ ಏನೋ ಒಂದು ವಿಚಿತ್ರ ಹೆಜ್ಜೆಗುರುತು ಪತ್ತೆಯಾಗಿತ್ತು. ಈ ವಿಚಿತ್ರ ಹೆಜ್ಜೆ ಗುರುತಿನ ಬಗ್ಗೆ ವೇಲ್ಸ್ ಸಂಗ್ರಹಾಲಯಕ್ಕೆ ತಿಳಿಸಲಾಯಿತು. ಆಗ ಗೊತ್ತಾಗಿದ್ದು ಅದು 20 ಕೋಟಿ ವರ್ಷಗಳ ಹಿಂದೆ ಕಣ್ಮರೆಯಾಗಿರುವ ಡೈನೋಸರಸ್ನ (Dinosaur) ಹೆಜ್ಜೆ ಗುರುತು ಎಂಬುದು.
ಡೈನೋಸರಸ್ ಹೆಜ್ಜೆ ಗುರುತು ಪತ್ತೆಯಾಗಿದ್ದು ಹೇಗೆ ? :
ಲಿಲಿಯ ಅಮ್ಮ ಸೈಲಿ ಹೇಳುವ ಪ್ರಕಾರ ಲಿಲಿ ಮೊದಲು ಡೈನೋಸಾರಸ್ (Dinosaur) ಹೆಜ್ಜೆ ಗುರುತು ನೋಡಿದಾಗ, ಅಪ್ಪನ ಕಡೆ ಮುಖ ಮಾಡಿ ಡ್ಯಾಡ್..ನೋಡಿ’ಅಂದಳಂತೆ. ಲಿಲಿಯ ಅಪ್ಪ ರಿಚರ್ಡ್ ಅದರ ಫೋಟೋ ತೆಗೆದು ಸೈಲಿಗೆ ತೋರಿಸಿದರು. ನೋಡಿದಾಗ ಸೈಲಿಗೂ ಅದು ಏನೋ ವಿಚಿತ್ರ ಗುರುತಿನ ರೀತಿಯಲ್ಲಿ ಕಾಣಿಸಿತು. ಬಳಿಕ ಅದನ್ನು ಪರಿಣಿತರಿಗೆ ರವಾನಿಸಲಾಯಿತು. ಆಗ ಗೊತ್ತಾಗಿದ್ದು, ಲಿಲಿ ಹುಡುಕಿದ್ದು ಡೈನೋಸಾರಸ್ ಹೆಜ್ಜೆ ಗುರುತು ಎಂಬುದು.
ವೇಲ್ಸ್ ಸಂಗ್ರಹಾಲಯದ (National Museum Wales) ಕ್ಯೂರೇಟರ್ ಸಿಂಡಿ ಹಾವೆಲ್ಸ್ ಪ್ರಕಾರ, ಡೈನೋಸಾರ್ ಹೆಜ್ಜೆ ಪತ್ತೆ ಹಚ್ಚಲಾದ ಸ್ಥಳ ಮೊದಲಿನಿಂದಲೂ ಡೈನೋಸಾರಸ್ ಹೆಜ್ಜೆಗಳಿಗಾಗಿ ವಿಶ್ವದ ಗಮನಸೆಳೆದಿತ್ತು. ಆದರೆ, ಲಿಲಿ ಪತ್ತೆ ಹಚ್ಚಿದ ಹೆಜ್ಜೆ ಗುರುತು ಇದುವರೆಗೆ ಸಿಕ್ಕಿದ ಅತ್ಯುತ್ತಮ ನಮೂನೆ.
ಪರಿಣಿತರ ಪ್ರಕಾರ ಆ ಹೆಜ್ಜೆ ಗುರುತು 4 ಇಂಚು ಉದ್ದವಿದೆ. ಅಂದರೆ, ಆ ಡೈನೋಸಾರಸ್ 8 ಅಡಿ ಎತ್ತರ ಇದ್ದಿರಬಹುದು ಎಂಬ ಅನುಮಾನವಿದೆ. ಡೈನೋಸಾರ್ (Dinosaur) ಹೆಜ್ಜೆಗುರುತು ಪತ್ತೆಯಾದ ಜಾಗವನ್ನು ಈಗಾಗಲೇ ಸಂರಕ್ಷಿಸಲಾಗಿದೆ. ಹೆಜ್ಜೆ ಗುರುತನ್ನು ಸುರಕ್ಷಿತ ಜಾಗಕ್ಕೆ ಸಾಗಿಸಲಾಗಿದೆ. ಜೀವ ವಿಜ್ಞಾನಿಗಳು ಇನ್ನಷ್ಟು ಸಂಶೋಧನೆಗಾಗಿ ವೇಲ್ಸ್ (Wales) ಸಮುದ್ರ ಕಿನಾರೆಗೆ ಧಾವಿಸುತ್ತಿದ್ದಾರೆ.