ರಾಜ್ಯದಲ್ಲಿ ಫೆ. 28ರ ವರೆಗೆ ಚಿತ್ರಮಂದಿರಗಳಲ್ಲಿ ಶೇ. 50 ರಷ್ಟು ಆಸನ ಭರ್ತಿ ಆದೇಶ ಮುಂದುವರಿಕೆ

ಬೆಂಗಳೂರು: ಕೊರೋನಾ ವೈರಸ್ ಅಬ್ಬರ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಚಿತ್ರಮಂದಿರಗಳ ಭರ್ತಿಗೆ ಆದೇಶ ನೀಡಿ ಮಾರ್ಗಸೂಚಿ ಪ್ರಕಟಿಸಿತ್ತು. ಅಲ್ಲದೇ, ರಾಜ್ಯ ಸರ್ಕಾರಗಳು ಈ ಸಂಬಂಧ ನಿರ್ಧಾರ ಕೈಗೊಳ್ಳಬಹುದು ಎಂದು ಕೂಡ ಸೂಚಿಸಿತ್ತು. ಹೀಗಾಗಿ ರಾಜ್ಯ ಸರ್ಕಾರ ಚಿತ್ರಮಂದಿರಗಳ ಭರ್ತಿಗೆ ಅವಕಾಶ ನೀಡದೆ ಶೇ. 50 ರಷ್ಟು ಆಸನ ಮಾತ್ರ ಭರ್ತಿ ಮಾಡಲು ಅವಕಾಶ ನೀಡಿ ಆದೇಶ ಹೊರಡಿಸಿದೆ.

ಈ ಸಂಬಂಧ ರಾಜ್ಯ ಸರ್ಕಾರ ಮಂಗಳವಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಕೊರೋನಾ ಎರಡನೇ ಅಲೆಯ ಕಾರಣವೊಡ್ಡಿ ಫೆಬ್ರವರಿ 28 ರವರೆಗೆ ಶೇ. 50 ರಷ್ಟು ಆಸನ ಭರ್ತಿ ಆದೇಶ ಮುಂದುವರೆಸಿದೆ. ಇದರಿಂದ ದೊಡ್ಡ ದೊಡ್ಡ ಸಿನಿಮಾಗಳಿಗೆ ಮತ್ತೆ ನಿರಾಸೆಯಾಗಿದೆ.

ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರೂ, ನಿರ್ಲಕ್ಷ ತೊರದೆ ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವುದು ಸೂಕ್ತ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮಾರ್ಗಸೂಚಿಗಳಂತೆಯೇ, ವಿವಾಹ, ಹುಟ್ಟುಹಬ್ಬದ ಆಚರಣೆ, ಶವಸಂಸ್ಕಾರ ಅಥವಾ ಇತರ ಸಾಮಾಜಿಕ ಕಾರ್ಯಕ್ರಮಗಳನ್ನು ಭೌತಿಕ ಅಂತರ ಕಾಪಾಡಿಕೊಂಡು ನಡೆಸಬೇಕು. ಈ ಮೂಲಕ ಕೋವಿಡ್-19 ಹರಡುವುದನ್ನು ತಡೆಯಬೇಕು ಎಂದು ಹೇಳಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *