ಭಾರತ ‘ಆತ್ಮನಿರ್ಭರ’ ಆಗಬೇಕೆಂಬ ಕನಸಿಗೆ ಏರೋ ಇಂಡಿಯಾ ಉತ್ತೇಜನ ನೀಡಲಿದೆ: ಪ್ರಧಾನಿ ಮೋದಿ
ನವದೆಹಲಿ: ಭಾರತ ‘ಆತ್ಮನಿರ್ಭರ’ ಆಗಬೇಕೆಂಬ ನಮ್ಮ ಕನಸಿಗೆ ಏರೋ ಇಂಡಿಯಾ 2021 ಉತ್ತೇಜನ ನೀಡಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಹೇಳಿದ್ದಾರೆ.
ಯಲಹಂಕದ ವಾಯುನೆಲೆಯಲ್ಲಿ ಏರ್ಪಡಿಸಲಾಗಿರುವ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನದ 13ನ ಆವೃತ್ತಿಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಇಂದು ಚಾಲನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ರಕ್ಷಣಾ ವಲಯ ಹಾಗೂ ಏರೋಸ್ಪೇಸ್’ಗೆ ಭಾರತ ಅನಿಯಮಿತ ಶಕ್ತಿಯನ್ನು ನೀಡಿದೆ. ರಕ್ಷಣಾ ವಲಯ ಹಾಗೂ ಏರೋಸ್ಪೇಸ್’ಗೆ ಏರೋ ಇಂಡಿಯಾ ಅದ್ಭುತ ವೇದಿಕೆಯಾಗಿದ್ದು, ಈ ಎರಡೂ ಕ್ಷೇತ್ರಗಳಲ್ಲಿ ಭಾರತ ಭವಿಷ್ಯದ ಸುಧಾರಣೆಗಳನ್ನು ತಂದಿದೆ. ಇದು ಭಾರತ ಆತ್ಮನಿರ್ಭರವಾಗಬೇಕೆಂಬ ಕನಸಿಗೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ಹೇಳಿದ್ದಾರೆ.