ಬಹಳಷ್ಟು ಸರ್ವಾಧಿಕಾರಿಗಳ ಹೆಸರು ‘ಎಂ’ ಅಕ್ಷರದಿಂದಲೇ ಆರಂಭವಾಗುವುದೇಕೆ?: ರಾಹುಲ್ ಗಾಂಧಿ
ನವದೆಹಲಿ: ಬಹಳಷ್ಟು ಸರ್ವಾಧಿಕಾರಿಗಳ ಹೆಸರು ‘ಎಂ’ ಎಂಬ ಅಕ್ಷರದಿಂದಲೇ ಆರಂಭವಾಗುವುದೇಕೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬುಧವಾರ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು, ಮಾರ್ಕೋಸ್, ಮುಸೊಲಿನಿ, ಮಿಲೋಸೆವಿಕ್, ಮುಬಾರಕ್, ಮೊಬುಟು, ಮುಷರಫ್, ಮೈಕೊಂಬೆರೊ ಬಹಳಷ್ಟು ಸರ್ವಾಧಿಕಾರಿಗಳ ಹೆಸರು ಎಂ ಎಂಬ ಅಕ್ಷರದಿಂದಲೇ ಆರಂಭವಾಗವುದೇಕೆ ಎಂದು ಕೇಳಿದ್ದಾರೆ. ಆದರೆ, ಈ ಪ್ರಶ್ನೆಗೆ ಕಾರಣವೇನು ಎಂಬುದನ್ನು ರಾಹುಲ್ ಗಾಂಧಿಯವರು ತಿಳಿಸಿಲ್ಲ.
ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಆದೇಶದ ಮೇರೆಗೆ ರೈತರ ಪ್ರತಿಭಟನೆ ಕುರಿತು ಪ್ರಚೋದನಾಕಾರಿ ಪೋಸ್ಟ್ ಗಳನ್ನು ಹಾಕಿದ್ದ ಟ್ವಿಟರ್ ಖಾತೆಗಳನ್ನು ಈ ಹಿಂದೆ ಟ್ವಿಟರ್ ಬ್ಲಾಕ್ ಮಾಡಿತ್ತು. ಕೇಂದ್ರ ಸರ್ಕಾರದ ಈ ಕ್ರಮದ ವಿರುದ್ಧ ರಾಹುಲ್ ಗಾಂಧಿಯವರು ತೀವ್ರವಾಗಿ ಕಿಡಿಕಾರಿದ್ದರು.