ನಾಲ್ಕು ವಾರಗಳ ಷರತ್ತು ವಿಧಿಸಿ ಹೌಸ್ ಫುಲ್ ಪ್ರದರ್ಶನಕ್ಕೆ ಗ್ರೀನ್ ಸಿಗ್ನಲ್
ಚಿತ್ರಮಂದಿರಗಳಲ್ಲಿ ಶೇಕಡಾ 100ರಷ್ಟು ಆಸನ ಭರ್ತಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದ್ರೂ ಸಹ ರಾಜ್ಯ ಸರ್ಕಾರ ಅನುಮತಿ ನೀಡಿರಲಿಲ್ಲ. ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಸ್ಯಾಂಡಲ್ವುಡ್ ಸಿನಿ ಮಂದಿ ಸಿಡಿದೆದ್ದಿದ್ರು. ಕನ್ನಡ ಚಿತ್ರರಂಗದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಶೇಕಡಾ 100ರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಿದ್ದು, ಇಂದು ಸಂಜೆಯೇ ಹೊಸ ಆದೇಶ ಹೊರಬೀಳಲಿದೆ..
ಇನ್ನು ಕನ್ನಡ ಚಿತ್ರರಂಗದ ಪರ ನಿನ್ನೆ ಬೆಳಗ್ಗೆಯಿಂದ್ಲೇ ಬಿಟಿವಿ ವರದಿ ಮಾಡಿ, ಅಭಿಯಾನ ಮಾಡಿತ್ತು. ಬಿಟಿವಿ ಅಭಿಯಾನದಿಂದ ಎಚ್ಚತ್ತ ಸರ್ಕಾರ ಚಿತ್ರರಂಗದ ಬೇಡಿಕೆಗೆ ಮಣಿದಿದೆ. ಚಿತ್ರೋದ್ಯಮ ಪ್ರತಿನಿಧಿಗಳ ಜೊತೆ ಸಭೆ ನಡೆಸಿ, ಶೇಕಡಾ 100ರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಿದೆ. 4 ವಾರಗಳ ಕಾಲ ಈ ಆದೇಶ ಜಾರಿಯಲ್ಲಿದ್ದು, ಒಂದ್ವೇಳೆ ಥಿಯೇಟರ್ಗಳಿಂದ ಸೋಂಕು ಹರಡುವುದು ಕಂಡುಬಂದಲ್ಲಿ ಮತ್ತೆ ಆದೇಶ ಬದಲಿಸುವುದಾಗಿ ಸಚಿವ ಸುಧಾಕರ್ ಹೇಳಿದ್ದಾರೆ.