ಸ್ಯಾಂಡಲ್ವುಡ್ನಲ್ಲಿ ಸಂಭ್ರಮದ ಶುಕ್ರವಾರ…! ಕನ್ನಡ ಸಿನಿ ಪ್ರೇಕ್ಷಕರಿಗೆ ತ್ರಿಬಲ್ ಧಮಾಕಾ…!
ಸ್ಯಾಂಡಲ್ವುಡ್ ಸಮರದ ಬೆನ್ನಲ್ಲೇ ಸರ್ಕಾರದ ನಿರ್ಧಾರದ ಬದಲಾಗಿದ್ದು, ರಾಜ್ಯದ ಥಿಯೇಟರ್ಗಳಲ್ಲಿ ಹೌಸ್ಫುಲ್ಗೆ ಅವಕಾಶ ನೀಡಿದೆ. ಆದ್ದರಿಂದ ಶುಭ ಶುಕ್ರವಾರದಂದು ಸಿನಿಪ್ರಿಯರಿಗೆ ಮೂರು ಸಿನೆಮಾಗಳು ತೆರೆಕಾಣಲಿವೆ. ವಿನೋದ್ ಪ್ರಭಾಕರ್ ಅಭಿನಯದ ಶ್ಯಾಡೋ, ಮಂಗಳವಾರ ರಜಾ ದಿನ, ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್ಪೆಕ್ಟರ್ ವಿಕ್ರಮ್ ಒಟ್ಟು ಮೂರು ಸಿನೆಮಾಗಳು ರಿಲೀಸ್ ಆಗಿವೆ.
ಹಾಗಾಗಿ ಗಾಂಧಿನಗರದ ಸಿನಿಪ್ರಿಯರು ಸಿಕ್ಕಾಪಟ್ಟೆ ಜೋಶ್ನಲ್ಲಿದ್ದಾರೆ. ಹಾಗೂ ತ್ರಿವೇಣಿ ಥಿಯೇಟರ್ನಲ್ಲಿ ಪ್ರಜ್ಜಲ್ ದೇವರಾಜ್ ಸಿನೆಮಾವನ್ನು ನೋಡಲು ಜನ ಸೇರಿದ್ದಾರೆ. ಇದೇ ಖುಷಿಯಲ್ಲಿ ಆನಂದ್ ರಾವ್ ಸರ್ಕಲ್ನಿಂದ ಪ್ರಜ್ವಲ್ ಬೈಕ್ ಱಲಿ ನಡೆಸಿದ್ದರು.
ಅಷ್ಟೇ ಅಲ್ಲದೆ ಪ್ರಸನ್ನ ಥಿಯೇಟರ್ನಲ್ಲಿ ಶ್ಯಾಡೋ ಸಿನೆಮಾವನ್ನು ವೀಕ್ಷಿಸಲು ಹಲವಾರು ಜನ ಸೇರಿದ್ದಾರೆ. ಅದೇ ಅಲ್ಲದೇ ಮರಿ ಟೈಗರ್ ವಿನೋದ್ ಪ್ರಭಾಕರ್ ನಟನೆಯ ಶ್ಯಾಡೋ ಹಾಗೂ ಚಂದನ್ ಆಚಾರ್, ಲಾಸ್ಯ ನಾಗ್ ಜೋಡಿಯಲ್ಲಿ ಮಂಗಳವಾರ ರಜಾದಿನ ಸಿನೆಮಾವೂ ಇಂದೇ ಥಿಯೇಟರ್ನಲ್ಲಿ ರಿಲೀಸ್ ಆಗಿದೆ.