ಬಾಲ ಬಿಚ್ಚೋ ರೌಡಿ ಶೀಟರ್ಗಳಿಗೆ ಖಡಕ್ ವಾರ್ನಿಂಗ್ ನೀಡಿದ ಶಿವಮೊಗ್ಗ ಎಸ್ಪಿ..!
ಶಿವಮೊಗ್ಗ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆಎಂ ಶಾಂತರಾಜು ಶಿವಮೊಗ್ಗ ಉಪವಿಭಾಗದ ಠಾಣಾ ವ್ಯಾಪ್ತಿಯ ರೌಡಿ ಶೀಟರ್ಗಳನ್ನ ಡಿಎಆರ್ ಗ್ರೌಂಡ್ನಲ್ಲಿ ಒಂದೆಡೆ ಸೇರಿಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಪದೇ ಪದೇ ಅಪರಾಧ ಪ್ರಕರಣಗಳು ರೌಡಿಶೀಟರ್ಗಳ ಕುಮ್ಮಕ್ಕಿನಿಂದ ಮರುಕಳಿಸುತ್ತಿವೆ. ಚಾಕು, ಚೂರಿ ಇರಿತ ಜನರಲ್ಲಿ ಭಯ ಮೂಡಿಸಿದೆ. ರೌಡಿ ಶೀಟರ್ಗಳು ಗುಂಪಾಗಿ ಚಹಾ, ಪಾನಿಪುರಿ ಅಂಗಡಿ ಬಳಿ ಸೇರುವುದು, ತಡರಾತ್ರಿವರೆಗೆ ಬಾರ್ನಲ್ಲಿ ಕುಡಿದು ರಸ್ತೆಗಳ ಮೇಲೆ ಗುಂಪಾಗಿ ನಿಲ್ಲುವುದು ಸಾಮಾನ್ಯವಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನ ಸ್ವತಃ ತಾವೇ ಬೀಟ್ ಮಾಡಿ ಅವಲೋಕಿಸಿರುವ
ರೌಡಿ ಶೀಟರ್ನೊಬ್ಬನ ಹರಿದ ಜೀನ್ಸ್ ಪ್ಯಾಂಟ್ ಶೈಲಿಗೆ ಸಿಟ್ಟಾದ ಎಸ್ಪಿ, ಇವನು ಹಾಕೊಂಡು ಬಂದಿರೋ ಬಟ್ಟೆ ನೋಡಿ ಎಂದು ದಿಟ್ಟಿಸಿ ನೋಡಿದರು..! ಸಮಜಾಯಿಸಿ ಕೊಡಲು ಬಂದ ಆತನ ಅಣ್ಣನಿಗೆ ಮಾತಿನಲ್ಲಿ ಜಾಡಿಸಿದರು. ನಿಮ್ಮ ಡ್ರೆಸ್ ನಿಮ್ಮ ಮನಸ್ಥಿತಿ ತೋರುತ್ತೆ ಎಂದು ಗದರಿದರು. ಇನ್ನೊಬ್ಬನತ್ತ ಬೊಟ್ಟು ಮಾಡಿ ನೀನು ಈ ಏರಿಯಾದಿಂದ ಆ ಏರಿಯಾಕ್ಕೆ ಬಂದು ಗುಂಪು ಕಟ್ಟಿಕೊಂಡು ನಿಲ್ತೀಯಾ, ನಾನೇ ನೋಡಿದ್ದೇನೆ ಎಂದು ರೌಡಿ ಶೀಟರ್ನ್ನ ಗುರುತಿಸಿದರು. ಪದೇ ಪದೇ ನಿಮ್ಮ ಹೆಸರುಗಳು ಕೇಳಿ ಬಂದರೆ, ಪುನಃ ಕಂಬಿ ಹಿಂದೆ ಕೊಳೆಯಬೇಕಾಗುತ್ತೆ, ಸಾಕ್ಷ್ಯಗಳನ್ನ ನಾಶಮಾಡುವುದು, ಬೆದರಿಕೆ ಹಾಕುವುದು ಕಂಡು ಬಂದರೆ ಸಹಿಸುವುದಿಲ್ಲ ಎಂದು ಖಡಕ್ ವಾರ್ನಿಂಗ್ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿ, ಸುಮಾರು 170 ರೌಡಿಶೀಟರ್ಗಳನ್ನ ಶಿವಮೊಗ್ಗ ಉಪವಿಭಾಗ ವ್ಯಾಪ್ತಿಯ ಠಾಣೆಗಳಿಂದ ಕರೆಸಲಾಗಿದೆ. ಅಪರಾಧ ಪ್ರಕರಣಗಳಲ್ಲಿ ಇವರ ಹೆಸರುಗಳು ಪದೇ ಪದೇ ಕೇಳಿಬರುತ್ತಿವೆ. ಬಾರ್ನಲ್ಲಿ ರಾತ್ರಿವರೆಗೆ ಕುಡಿದು ಹೊರಗಡೆ ಗುಂಪುಕಟ್ಟಿಕೊಂಡು ನಿಲ್ಲುವುದು. ಪಾನಿಪುರಿ ಹಾಗೂ ಟೀ ಶಾಪ್ಗಳಲ್ಲಿ ಭಯ ಮೂಡಿಸುವುದು ಹೆಚ್ಚಾಗಿದೆ. ಇಲಾಖೆಯಿಂದ ಇಂತಹ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಿ ಇವರ ಚಲನವಲನಗಳ ಮೇಲೆ ನಿಗಾ ವಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಹೇಳಿದರು.