ಚಿತ್ರಮಂದಿರಗಳಲ್ಲಿ ಮತ್ತೆ ಶುರುವಾಯ್ತು ಹಬ್ಬದ ಸಂಭ್ರಮ..! ಮರಿಟೈಗರ್​​ ಪಂಚ್​ಗೆ ಮೊದಲ ದಿನವೇ ಬಾಕ್ಸಾಫಿಸ್​ ಚಿಂದಿ..!

ವಿನೋದ್​ ಪ್ರಭಾಕರ್​ ಅಭಿನಯದ ಮಿಸ್ಟ್ರಿ ಆ್ಯಕ್ಷನ್​ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿ ಭರ್ಜರಿ ಓಪನಿಂಗ್​ ಪಡೆದುಕೊಂಡಿದೆ.. 10 ತಿಂಗಳ ನಂತ್ರ ಶೇ. 100ರಷ್ಟು ಆಸನ ಭರ್ತಿಗೆ ಅವಕಾಶ ಸಿಕ್ಕಿದ್ದು, ಮೊದಲ ದಿನ ಪ್ರೇಕ್ಷಕರು ಸಿನಿಮಾ ನೋಡಿ ಸಂಭ್ರಮಿಸಿದ್ರು.. ಥಿಯೇಟರ್​ ಅಂಗಳಲ್ಲಿ ಮತ್ತೆ ಹಳೇ ಸಂಭ್ರಮ ಮರಳಿ ಬಂದಿತ್ತು..


ಕಾಮನ್​ ಮ್ಯಾನ್​ ಕಂಟ್ರೋಲ್​ ತಪ್ಪಿದ್ರೆ, ಏನ್​ ಮಾಡ್ತಾನೆ ಅನ್ನೋ ಥೀಮ್​ ನಲ್ಲಿ ಶ್ಯಾಡೋ ಸಿನಿಮಾ ಮೂಡಿ ಬಂದಿದೆ.. ಟೀಸರ್​, ಟ್ರೈಲರ್​ನಿಂದ ಭಾರಿ ಸದ್ದು ಮಾಡ್ತಿದ್ದ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಕ್ಸಸ್​ ಕಂಡಿದೆ.. ಮಿಸ್ಟ್ರಿ, ಫ್ಯಾಮಿಲಿ ಡ್ರಾಮಾ, ಆ್ಯಕ್ಷನ್​, ರಿವೇಂಜ್, ಕಾಮಿಡಿ​ ಹೀಗೆ ಎಲ್ಲಾ ಕಮರ್ಷಿಯಲ್​ ಎಲಿಮೆಂಟ್ಸ್​ ಮಿಕ್ಸ್​ ರವಿ ಗೌಡ ಚಿತ್ರವನ್ನ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.. ಇನ್ನು ವಿನೋದ್ ಪ್ರಭಾಕರ್​ ಮಾಸ್ ಅಭಿಮಾನಿಗಳಿಗಂತೂ ಶ್ಯಾಡೋ ಹೇಳಿ ಮಾಡಿಸಿದ ಸಿನಿಮಾ..

ಮಾಸ್​ ಪ್ರೇಕ್ಷಕರಿಗೆ ಮನರಂಜನೆಯ ಹಬ್ಬದೂಟ ‘ಶ್ಯಾಡೋ’..!ರಾಜ್ಯಾದ್ಯಂತ ಮಿಸ್ಟ್ರಿ ಆ್ಯಕ್ಷನ್​ ಚಿತ್ರಕ್ಕೆ ಸಿಕ್ತು ಭರ್ಜರಿ ರೆಸ್ಪಾನ್ಸ್..!

ನನ್ನ ನೆರಳು ಕಳೆದು ಹೋಗಿದೆ, ಹುಡುಕಿ ಕೊಡಿ ಹೀರೋ ಪೊಲೀಸ್​ ಠಾಣೆ ಮೆಟ್ಟಿಲೇರ್ತಾನೆ.. ನೆರಳು ಕಳೆದು ಹೋಗೋದೇನು..? ಅಂತ ಪೊಲೀಸರು ತಲೆ ಕೆಡಿಸಿಕೊಂಡಾಗ ಕಥೆ ಬಿಚ್ಚಿಕೊಳ್ಳುತ್ತೆ.. ಒಂದು ಮರ್ಡರ್​ ಕೇಸ್​​ನ ಹೀರೋ ರೀಓಪನ್​ ಮಾಡಿಸ್ತಾನೆ, ಅಲ್ಲಿಂದ ಅಸಲಿ ಸಿನಿಮಾ ಶುರುವಾಗುತ್ತೆ..ಆತನ ನೆರಳು ಕಳೆದು ಹೋಗೋದಕ್ಕೂ ಈ ಮರ್ಡರ್​​​​​ ಕೇಸ್​ಗೂ ಏನ್​ ಸಂಬಂಧ ಅನ್ನೋದನ್ನ ತೆರೆಮೇಲೆ ನೋಡಿ ಎಂಜಾಯ್​ ಮಾಡ್ಬೇಕು.. ಮಿಸ್ಟ್ರಿ ಕಥೆ ಆಗಿರೋದ್ರಿಂದ ಕಂಪ್ಲೀಟ್ ಆಗಿ ಹೇಳಿದ್ರೆ, ಸಿನಿಮಾ ನೋಡೋ ಥ್ರಿಲ್ ಮಿಸ್ಸಾಗುತ್ತೆ..

ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ನಟ ವಿನೋದ್​ ಪ್ರಭಾಕರ್​, ನಾಯಕಿ ಶೋಭಿತಾ ರಾಣಾ ಪ್ರೇಕ್ಷಕರ ಜೊತೆ ಸಿನಿಮಾ ನೋಡಿದ್ರು.. ಮಾಸ್​ ಅಂಶಗಳು ಜಾಸ್ತಿ ಇದ್ರು, ಇಡೀ ಫ್ಯಾಮಿಲಿ ಕೂತು ಎಂಜಾಯ್​ ಮಾಡಬಹುದಾದ ಸಿನಿಮಾ ಶ್ಯಾಡೋ.. ವಿನೋದ್​ ಪ್ರಭಾಕರ್​ ಒನ್ಸ್​ ಅಗೇನ್​, ಮಾಸ್​ ಹೀರೋ ಆಗಿ ಅಬ್ಬರಿಸಿದ್ದಾರೆ.. ಅದ್ರಲ್ಲೂ ಮರಿಟೈಗರ್​ ಶರ್ಟ್​ಲೆಸ್​​ ಆ್ಯಕ್ಷನ್​ ಅಭಿಮಾನಿಗಳಿಗೆ ಸಖತ್​ ಕಿಕ್ ಕೊಡುತ್ತೆ..

ನಿರ್ದೇಶಕ ರವಿ ಗೌಡ ಮೊದಲ ಪ್ರಯತ್ನದಲ್ಲಿ ಸಕ್ಸಸ್​ ಕಂಡಿದ್ದಾರೆ.. ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ನಾಯಕಿ ಶೋಭಿತಾ ರಾಣಾ ಗಮನ ಸೆಳಿತ್ತಾರೆ.. ಪೊಲೀಸ್​ ಆಫಿಸರ್ ನರಸಿಂಹ ​ ಪಾತ್ರದಲ್ಲಿ ಶರತ್ ಲೋಹಿತಾಶ್ವ ಇಡೀ ಸಿನಿಮಾ ಕಾಣಿಸಿಕೊಂಡಿದ್ದಾರೆ.. ಕಂಚಿನ ಕಂಠದ ಶರತ್​​​​​, ಪ್ರೇಕ್ಷಕರನ್ನ ನಗಿಸೋ ಪ್ರಯತ್ನವನ್ನು ಮಾಡಿದ್ದಾರೆ.. ಚಿತ್ರದಲ್ಲಿ ಒಂದೇ ಹಾಡಿದ್ದು, ಅಚ್ಚು ಸಂಗೀತ, ಮನೋಹರ್​ ಜೋಷಿ ಛಾಯಾಗ್ರಹಣ ಶ್ಯಾಡೋ ಚಿತ್ರಕ್ಕಿದೆ..

ಬರೋಬ್ಬರಿ 10 ತಿಂಗಳ ನಂತ್ರ 100 ಪರ್ಸೆಟ್​ ಆಕ್ಸುಪಸಿ ಜೊತೆಗೆ ಚಿತ್ರಗಳು ರಿಲೀಸ್​ ಆಗಿದ್ದು, ಮೊದಲ ದಿನ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ.. ಶ್ಯಾಡೋ ಚಿತ್ರವನ್ನು ಅಭಿಮಾನಿಗಳು ಹಬ್ಬದ ರೀತಿ ಸ್ವಾಗತಿಸಿದ್ದಾರೆ.. ಕಳೆದ ವರ್ಷವೇ ಬರಬೇಕಿದ್ದ ಶ್ಯಾಡೋ ಸಿನಿಮಾ ಬಹಳ ತಡವಾಗಿ ಬಂದ್ರು, ಪ್ರೇಕ್ಷಕರ ಅದೇ ಉತ್ಸಾಹದಿಂದ ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ..

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *