ಈಗ ರಿಲೀಸ್ ಆಗ್ತಿರೋ ಸಿನಿಮಾಗಳನ್ನ ನೋಡೋಕೆ ಥೀಯೇಟರ್ಗೆ ಹೋಗ್ತಿದ್ದೀರ.! ಹಾಗಾದ್ರೆ ಈ ಸ್ಟೋರಿನ ನೀವು ಓದ್ಲೇಬೇಕು..
ಗಾಂಧಿನಗರ ಇವತ್ತು ಮತ್ತೆ ಕಳೆಗಟ್ಟಿತ್ತು.. 10 ತಿಂಗಳ ನಂತ್ರ ಹಂಡ್ರೆಡ್ ಪ್ರರ್ಸೆಟ್ ಆಕ್ಯುಪಸಿ ಜೊತೆಗೆ ಇವತ್ತು ಬರೋಬ್ಬರಿ ನಾಲ್ಕು ಸಿನಿಮಾಗಳು ರಿಲೀಸ್ ಆಯ್ತು.. ಲಾಕ್ಡೌನ್ ನಂತ್ರ ನವೆಂಬರ್ನಲ್ಲೇ ಸಿನಿಮಾ ಪ್ರದರ್ಶನ ಶುರುವಾದ್ರು, ಅಸಲಿ ಹಬ್ಬ ಇಂದಿನಿಂದಲೇ ಶುರುವಾಗಿದ್ದು ಅಂದ್ರೆ ತಪ್ಪಾಗಲ್ಲ.. ತ್ರಿವೇಣಿ ಚಿತ್ರಮಂದಿರದಲ್ಲಿ ಇನ್ಸ್ಪೆಕ್ಟರ್ ವಿಕ್ರಂ, ಪ್ರಸನ್ನ ಚಿತ್ರಮಂದಿರದಲ್ಲಿ ಶ್ಯಾಡೋ, ಮೂವಿಲ್ಯಾಂಡ್ನಲ್ಲಿ ‘ಮಂಗಳವಾರ ರಜಾದಿನ’ ಚಿತ್ರಗಳಿಗೆ ಭರ್ಜರಿ ಸ್ವಾಗತವೇ ಸಿಕ್ತು.. ಕಟೌಟು, ಜೈಕಾರ, ಪಟಾಕಿ ಸದ್ದು, ಶಿಳ್ಳೆ, ಕೇಕೆ, ಚಪ್ಪಾಳೆ ಮತ್ತೆ ಶುರುವಾಯ್ತು…
ಗಾಂಧಿನಗರದ ತ್ರಿವೇಣಿ ಚಿತ್ರಮಂದಿರದಲ್ಲಿ ಇನ್ಸ್ಪೆಕ್ಟರ್ ವಿಕ್ರಂ ಚಿತ್ರದ 40 ಅಡಿ ಕಟೌಟ್ ನಿಲ್ಲಿಸಿ, ಅಭಿಮಾನಿಗಳು ಅದಕ್ಕೆ 200 ಕೆಜಿ ಪುಷ್ಪಾಭಿಷೇಕ ಮಾಡಿದ್ರು..ಜಾನಪದ ತಂಡ ಹಾಗೂ ಫ್ಯಾನ್ಸ್ ಬೈಕ್ಗಳ ಮೂಲಕ ಸಡಗರ ಸಂಭ್ರಮದಿಂದ ಬೆಂಗಳೂರಿನ ಆನಂದ್ ರಾವ್ ಸರ್ಕಲ್ ಬಳಿಯ ಗಣಪತಿ ದೇವಸ್ಥಾನದಿಂದ ತ್ರಿವೇಣಿ ಥಿಯೇಟರ್ವರೆಗೆ ಱಲಿ ಬಂದು, ಪಟಾಕಿ ಹೊಡೆದು ಇನ್ಸ್ಪೆಕ್ಟರ್ ವಿಕ್ರಂನ ಬರಮಾಡಿಕೊಂಡ್ರು..
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಖಾಕಿ ಖದರ್..! ಪ್ರಜ್ಜಲ್ ಅಬ್ಬರಕ್ಕೆ ಖಡಕ್ ಲುಕ್ನಲ್ಲಿ ದರ್ಶನ್ ಸಾಥ್..!
ನರಸಿಂಹ ನಿರ್ದೇಶನದ ಈ ಚಿತ್ರದಲ್ಲಿ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಪೊಲೀಸ್ ಆಫೀಸರ್ ಆಗಿ ಅಬ್ಬರಿಸಿದ್ರೆ, ನಾಯಕಿಯಾಗಿ ಜಾಕಿ ಭಾವನಾ ಸಾಥ್ ಕೊಟ್ಟಿದ್ದಾರೆ.. ಅತಿಥಿ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ಎಂಟ್ರಿ ಅಭಿಮಾನಿಗಳಿಗೆ ಸ್ಪೆಷಲ್ ಟ್ರೀಟ್.. ಇನ್ನು ‘ಇನ್ಸ್ಪೆಕ್ಟರ್ ವಿಕ್ರಮ್’ಗೆ ಮಾಸ್ ಓಪನಿಂಗ್ ಸಿಕ್ಕಿದ್ದು, ಫಸ್ಟ್ ಡೇ ಫಸ್ಟ್ ಶೋಗೆ ಜನ ಸಾಗರವೇ ಹರಿದು ಬಂದಿತ್ತು.
ಹೊಸ ಅವತಾರದಲ್ಲಿ ಬಿಗ್ಬಾಸ್ ಚಂದನ್ ಆಚಾರ್ ಎಂಟ್ರಿ..! ‘ಮಂಗಳವಾರ ರಜಾದಿನ’ ಚಿತ್ರಕ್ಕೂ ಸಿಕ್ತು ಭರ್ಜರಿ ರೆಸ್ಪಾನ್ಸ್..!
ಬಿಗ್ಬಾಸ್ ಖ್ಯಾತಿಯ ಚಂದನ್ ಆಚಾರ್ ಅಭಿನಯದ ‘ಮಂಗಳವಾರ ರಜಾದಿನ’ ಚಿತ್ರ ಕೂಡ ರಾಜ್ಯಾದ್ಯಂತ ತೆರೆಕಂಡಿದೆ.. ಯುವಿನ್ ನಿರ್ದೇಶನದ ಮೊದಲ ಸಿನಿಮಾ ಇದು.. ಚಿತ್ರ ತಂದೆ-ಮಗನ ಬಾಂಧವ್ಯದ ಕಥೆ ಹೇಳುತ್ತದೆ.. ಚಂದನ್ ಆಚಾರ್ ಅವರ ತಂದೆಯ ಪಾತ್ರದಲ್ಲಿ ಗೋಪಾಲ್ ಕೃಷ್ಣನ್ ದೇಶಪಾಂಡೆ ಕಾಣಿಸಿಕೊಂಡಿದ್ದಾರೆ.. ಲಾಸ್ಯ ನಾಗರಾಜ್, ಜಹಾಂಗೀರ್, ಹರಿಣಿ ತಾರಾಗಣದಲ್ಲಿದ್ದಾರೆ.. ಒಂದೊಳ್ಳೆ ಕಾಮಿಡಿ ಎಂಟರ್ಟೈನರ್ ಆಗಿರೋ ‘ಮಂಗಳವಾರ ರಜಾದಿನ’ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ..
ಮಿಸ್ಟರಿ ಆ್ಯಕ್ಷನ್ ‘ಶ್ಯಾಡೋ’ ಚಿತ್ರಕ್ಕೂ ಸಿಕ್ತು ಭರ್ಜರಿ ಓಪನಿಂಗ್..! ವಿನೋದ್ ಪ್ರಭಾಕರ್ ಮಾಸ್ ಖದರ್ಗೆ ಫ್ಯಾನ್ಸ್ ದಿಲ್ಖುಷ್..!
ಇತ್ತ ತ್ರಿವೇಣಿ ಚಿತ್ರಮಂದಿರದಲ್ಲಿ ಇನ್ಸ್ಪೆಕ್ಟರ್ ವಿಕ್ರಂ, ಮೂವಿಲ್ಯಾಂಡ್ ಥಿಯೇಟರ್ನಲ್ಲಿ ಮಂಗಳವಾರ ರಜಾದಿನ ಸಿನಿಮಾ ಸದ್ದು ಮಾಡ್ತಿದ್ರೆ, ಅತ್ತ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಮರಿಟೈಗರ್ ಘರ್ಜನೆ ಶುರುವಾಗಿತ್ತು.. ವಿನೋದ್ ಪ್ರಭಾಕರ್ ಅಭಿನಯದ ಮಿಸ್ಟರಿ ಆ್ಯಕ್ಷನ್ ‘ಶ್ಯಾಡೋ’ ಸಿನಿಮಾ ಸಹ ರಾಜ್ಯಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.. ವಿನೋದ್ ಪ್ರಭಾಕರ್ ಪ್ರೇಕ್ಷಕರ ಜೊತೆ ಸಿನಿಮಾ ನೋಡಿ ಖುಷಿಪಟ್ರು.. ಇನ್ನು ಚಿತ್ರಮಂದಿರದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು..
ಈ ವಾರ ರಿಲೀಸ್ ಆಗಿರೋ ಎಲ್ಲಾ ಚಿತ್ರಗಳಿಗೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.. ಮತ್ತೆ ಥಿಯೇಟರ್ ಅಂಗಳದಲ್ಲಿ ಕಟೌಟು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.. ಥಿಯೇಟರ್ಗಳಲ್ಲಿ ಶೇ. 100ರಷ್ಟು ಆಸನ ಭರ್ತಿಗೆ ಅವಕಾಶ ಸಿಕ್ಕಿದ್ದು, ಚಿತ್ರರಂಗಕ್ಕೆ ಸಂತಸ ತಂದಿದ್ದು, ಇವತ್ತು ಥಿಯೇಟರ್ ಅಂಗಳದಲ್ಲಿ ಅದು ಗೊತ್ತಾಗ್ತಿತ್ತು.. ಪ್ರೇಕ್ಷಕರು ಕೊರೋನಾ ನಿಯಮಗಳನ್ನ ಪಾಲಿಸಿ, ಎಚ್ಚರಿಕೆಯಿಂದ ಸಿನಿಮಾ ನೋಡಿ ಖುಷಿಪಡಬೇಕು..