ನೂರಾರು ಮಂದಿ ಸೇರಿ ಮನೆ ಶಿಫ್ಟ್ ಮಾಡಿದ ವಿಡಿಯೋ ವೈರಲ್; ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರಿಸಿದ ನಾಗಾಲ್ಯಾಂಡ್ ಜನ
ಒಗ್ಗಟ್ಟಿನಲ್ಲಿ ಬಲವಿದೆ ಎಂದು ಗಾದೆ ಇದೆ. ಇದಕ್ಕೆ ಪೂರಕವೆಂಬಂತೆ ನಾಗಲ್ಯಾಂಡ್ ಜನರು ಒಗ್ಗಟ್ಟು ಪ್ರದರ್ಶಿಸಿ ಬೃಹತ್ ಗಾತ್ರದ ಮನೆಯನ್ನು ಯಂತ್ರದ ಸಹಾಯವಿಲ್ಲದೇ ಸ್ಥಳಾಂತರ ಮಾಡಿದ್ದಾರೆ. ನೂರಾರು ಜನರು ಒಗ್ಗಟ್ಟಿನಿಂದ ಬೃಹತ್ ಗಾತ್ರದ ಮನೆಯನ್ನು ಸುಲಭವಾಗಿ ಸ್ಥಳಾಂತರ ಮಾಡಿರುವ ವಿಡಿಯೋ ಕೂಡ ಇದೀಗ ವೈರಲ್ ಆಗಿದೆ.
ತಂತ್ರಜ್ಞಾನ ಬೆಳದಂತೆ ಮನುಷ್ಯ ಯಂತ್ರೋಪಕರಣಗಳ ಮೇಲೆ ಅವಲಂಬನೆ ಆಗುತ್ತಾನೆ. ಆದರೆ, ನಾಗಲ್ಯಾಂಡ್ನ ಈ ವಿಡಿಯೋ ಎಲ್ಲರನ್ನು ಒಮ್ಮೆ ಮೂಕವಿಸ್ಮಿತರಾಗುವಂತೆ ಮಾಡುತ್ತದೆ. ನೂರಾರು ಜನರು ಸೇರಿ ಮನೆಯೊಂದನ್ನು ಸ್ಥಳಾಂತರ ಮಾಡುವ ವಿಡಿಯೋವನ್ನು ಅರಣ್ಯ ಅಧಿಕಾರಿ ಸುಧಾ ರಮಣ್ ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ಒಗ್ಗಟ್ಟಿನಲ್ಲಿ ಬಲವಿದೆ. ಅದನ್ನು ನಾಗಲ್ಯಾಂಡ್ನ ಗ್ರಾಮವೊಂದರ ಜನರು ಸತ್ಯ ಎಂದು ತೋರಿಸಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮದುವಣಗಿತ್ತಿಯಂತೆ ಮನೆ ಶಿಫ್ಟ್!
ನಾಗಲ್ಯಾಂಡ್ನ ಗ್ರಾಮವೊಂದರ ಮನೆಯೊಂದು ಪರ್ವತದ ಕೆಳಗಡೆ ಇತ್ತು. ಇದರಿಂದ ಮನೆಯನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲು ಮಾಲೀಕರು ನಿರ್ಧರಿಸಿದ್ದರು. ಇದಕ್ಕೆ ಗ್ರಾಮದ ನೂರಾರು ಜನರು ಸೇರಿ ಮನೆಯನ್ನು ಸ್ಥಳಾಂತರ ಮಾಡುವುದಕ್ಕೆ ಕೈ ಜೋಡಿಸಿದ್ದರು. ಮನೆಯನ್ನು ಮದುವಣಗಿತ್ತಿಯಂತೆ ಎಲ್ಲರು ಎತ್ತಿಕೊಂಡು ಹೋಗಿ ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡುವುದರಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ.
ಇದನ್ನು ಅರಣ್ಯಾಧಿಕಾರಿ ಸುಧಾ ರಮಣ್ ಅವರು, ಒಗ್ಗಟ್ಟಿನಲ್ಲಿ ಬಲವಿದೆ ಎಂದು ನಮಗೆ ನಿಜವಾಗಿಯೂ ನಾಗಾಲ್ಯಾಂಡ್ ಜನರು ತೋರಿಸಿದ್ದಾರೆ. ನಾಗಲ್ಯಾಂಡ್ನಲ್ಲಿ ಮನೆಯೊಂದನ್ನು ಸ್ಥಳಾಂತರ ಮಾಡುವ ಕಾರ್ಯದಲ್ಲಿ ತೋರಿಸಿದ ಒಗ್ಗಟ್ಟು, ನಾವೆಲ್ಲರೂ ಆಶ್ಚರ್ಯಪಡುವಂತೆ ಆಗಿದೆ ಎಂದು ಟ್ವಿಟ್ಟರ್ನಲ್ಲಿ ಹಾಕಿಕೊಂಡ ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?
ಮನೆಯನ್ನು ಶಿಫ್ಟ್ ಮಾಡುತ್ತಿರುವ ದೃಶ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಆನ್ಲೈನ್ನಲ್ಲಿ ಈ ವಿಡಿಯೋ ಶೇರ್ ಆದ 1 ಗಂಟೆಯೊಳಗೆ 9,000 ಜನರು ಈ ವಿಡಿಯೋವನ್ನು ವೀಕ್ಷಣೆ ಮಾಡಿದ್ದಾರೆ. ಈ ವಿಡಿಯೋ ನೋಡಿದ ಸಾಮಾಜಿಕ ತಾಣ ಬಳಕೆದಾರನೊಬ್ಬ ‘ಸೂಪರ್’ ಎಂದರೆ ಮತ್ತೊಬ್ಬ ‘ಉತ್ತಮ ಕೆಲಸ’ ಎಂದು ಶ್ಲಾಘಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ನೋಡಿದವರು ನಾಗಾಲ್ಯಾಂಡ್ ಜನರ ಒಗ್ಗಟ್ಟನ್ನು ನೋಡಿ ವಿಡಿಯೋ ಶೇರ್ ಮಾಡಿಕೊಳ್ಳುತ್ತಿದ್ದಾರೆ.