ರೈತ ಪ್ರತಿಭಟನೆಗೀಗ ಆಸ್ಕರ್ ವಿಜೇತೆ, ಹಾಲಿವುಡ್ ನಟಿ ‘ಸೂಸನ್ ಸ್ಯಾರಂಡನ್’ ಬೆಂಬಲ!
ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾಯ್ದೆಗಳನ್ನು ರದ್ಧುಗೊಳಿಸಲು ರೈತರು ನಡೆಸುತ್ತಿರುವ ಪ್ರತಿಭಟನೆಗೆ ಅಂತಾರಾಷ್ಟ್ರೀಯ ತಾರೆಗಳ ಬೆಂಬಲ ಮುಂದುವರಿದಿದೆ. ಇದೀಗ ಹಾಲಿವುಡ್‌ನ ಖ್ಯಾತ ನಟಿ, ಆಸ್ಕರ್ ವಿಜೇತೆ ಸೂಸನ್ ಸ್ಯಾರಂಡನ್ ಕೂಡ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಅವರ ಟ್ವೀಟ್ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಲೈಕ್‌ಗಳು ಬಂದಿವೆ.