ಕಾಂಟ್ರವರ್ಸಿ ಇಲ್ಲ ಅಂದ್ರೆ ಏನೋ ಮಿಸ್ ಆದಂಗೆ ಅನಿಸತ್ತೆ: ‘ಪೊಗರು’ ನಟಿ ರಶ್ಮಿಕಾ ಮಂದಣ್ಣ!

ಹೈಲೈಟ್ಸ್‌:

  • ಸಂಭಾವನೆ, ಮದುವೆ ಬಗ್ಗೆ ಮಾತನಾಡಿದ ನಟಿ ರಶ್ಮಿಕಾ ಮಂದಣ್ಣ
  • ಎಲ್ಲ ಭಾಷೆಗಳಲ್ಲಿ ನಟಿಸುವ ಬಗ್ಗೆ ಮಾಹಿತಿ ಹಂಚಿಕೊಂಡ ‘ಕಿರಿಕ್ ಪಾರ್ಟಿ ಸುಂದರಿ’
  • ಹೊಸ ಕಾರ್, ಮನೆ ಬಗ್ಗೆ ರಶ್ಮಿಕಾ ಮಂದಣ್ಣ ಅನಿಸಿಕೆ ಹಂಚಿಕೊಂಡಿದ್ದಾರೆ

ನಟ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಪೊಗರು‘ ಸಿನಿಮಾ ಫೆಬ್ರವರಿ 19ರಂದು ರಿಲೀಸ್ ಆಗುತ್ತಿದೆ. ಈ ಚಿತ್ರವು ಕನ್ನಡ ಸೇರಿ ಏಕಕಾಲಕ್ಕೆ ತೆಲುಗು, ತಮಿಳು ಭಾಷೆಯಲ್ಲಿಯೂ ರಿಲೀಸ್ ಆಗುತ್ತಿದೆ. ಈ ಸಿನಿಮಾ ಬಗ್ಗೆ ಮಾಹಿತಿ ನೀಡಲು ನಟಿ ರಶ್ಮಿಕಾ ಮಂದಣ್ಣ ಮಾಧ್ಯಮಗಳ ಮುಂದೆ ಬಂದಿದ್ದರು. ಆಗ ಅವರ ಸಿನಿಮಾ, ವೈಯಕ್ತಿಕ ಜೀವನದ ಬಗ್ಗೆ ಮಾಹಿತಿ ನೀಡಿದ್ದಾರೆ.

 

ಪೊಗರು ಸಿನಿಮಾದ ವಿಶೇಷತೆ ಏನು?
ಈ ಚಿತ್ರಕ್ಕಾಗಿ ಧ್ರುವ ಸರ್ಜಾ ಅವರು ತುಂಬ ಕಠಿಣ ಶ್ರಮ ಹಾಕಿದ್ದಾರೆ. ಆರಂಭದಲ್ಲಿ ಅವರ ಗೆಟಪ್ ನೋಡಿ ತುಂಬ ಹೆದರಿದ್ದೆ. ಈ ಹಿಂದೆ ಅವರನ್ನು ಕ್ಯೂಟ್, ಲವರ್ ಬಾಯ್ ಆಗಿಯೇ ಹೆಚ್ಚು ನೋಡಿದ್ದೆ. ಅವರು ಈ ಸಿನಿಮಾಕ್ಕಾಗಿ ಸಿಕ್ಕಾಪಟ್ಟೆ ಶ್ರಮಪಟ್ಟಿದ್ದಾರೆ. ಮಾಸ್ ಸಿನಿಮಾ ಇಷ್ಟಪಡುವವರಿಗೆ ‘ಪೊಗರು’ ತುಂಬ ಮನರಂಜನೆ ಕೊಡತ್ತೆ, ಇಷ್ಟ ಆಗತ್ತೆ.

ಪೊಗರು ಸಿನಿಮಾದಲ್ಲಿ ನಟಿಸಿದ್ದು ಹೇಗನಿಸಿತು?

ತುಂಬ ಖುಷಿಯಾಯ್ತು. ಒಂದೂವರೆ ವರ್ಷಗಳ ಕಾಲ ಈ ಚಿತ್ರದ ಕೆಲಸ ನಡೆಯಿತು. ನಂದಕಿಶೋರ್ ಅವರು ನನಗೆ ಆರಾಮಾಗಿ ಕಥೆ ಹೇಳಿದ್ದರು. ಅವರ ಜೊತೆ ಮತ್ತೊಂದು ಸಿನಿಮಾ ಮಾಡೋಕೆ ನಾನು ರೆಡಿಯಿದ್ದೇನೆ. ಪ್ರೇಕ್ಷಕರಿಗೆ ಇಷ್ಟವಾಗುವ ಎಲ್ಲ ಅಂಶಗಳು ಈ ಸಿನಿಮಾದಲ್ಲಿ ಇದೆ. ಪಕ್ಕಾ ಮಾಸ್ ಸಿನಿಮಾ. ನಾನಿಲ್ಲಿ ಅಧ್ಯಾಪಕಿ ಪಾತ್ರ ಮಾಡುತ್ತಿದ್ದೇನೆ. ನನ್ನದು ಹಾಗೂ ಧ್ರುವ ಅವರದ್ದು ಒಂಥರಾ ಟಾಮ್ ಆಂಡ್ ಜೆರ್ರಿ ಕಾರ್ಟೂನ್ ರೀತಿ ಇರತ್ತೆ. ಧನಂಜಯ್ ಅವರ ಜೊತೆ ನನ್ನ ಕಾಂಬಿನೇಶನ್ ಇಲ್ಲಿಲ್ಲ.

ಬಯೋಪಿಕ್ ಮಾಡುವ ಆಲೋಚನೆ ಇದೆಯಾ?

ಶ್ರೀದೇವಿ, ಸೌಂದರ್ಯಾ ಅವರ ಬಯೋಪಿಕ್‌ನಲ್ಲಿ ನಟಿಸುವ ಆಸೆ ಇದೆ.

ಮದುವೆ ಬಗ್ಗೆ ಏನಾದರೂ ಯೋಚನೆ ಮಾಡಿದ್ದೀರಾ?

ವಯಸ್ಸಾಗುತ್ತಿದೆ ಎನ್ನೋದು ಗೊತ್ತಿದೆ, ದಯವಿಟ್ಟು ಪದೇ ಪದೇ ನೆನಪಿಸಬೇಡಿ. ಆದರೆ ನಾನಿನ್ನೂ ಚಿಕ್ಕವಳು. ಮದುವೆ ಆಗುವ ಸಮಯಕ್ಕೆ ನೋಡೋಣ

ಎಲ್ಲ ಭಾಷೆಗಳಲ್ಲಿ ನಟಿಸುತ್ತಿದ್ದೀರಿ?

ನಾನು ಭಾಷೆ ಎಂಬ ಚೌಕಟ್ಟು ಹಾಕಿಕೊಂಡಿಲ್ಲ. ಎಲ್ಲ ಕಡೆಯೂ ಕೆಲಸ ಒಂದೇ, ಆದರೆ ಕಲಿಯುವುದಿರುತ್ತದೆ. ಒಳ್ಳೆಯ ಕಥೆ ಸಿಕ್ಕರೆ ಯಾವ ಭಾಷೆಯಲ್ಲಾದರೂ ನಟಿಸ್ತೀನಿ. ಕಥೆ ನನಗೆ ತುಂಬ ಮುಖ್ಯ. ನನ್ನ ತಾಯಿ ಮೊದಲ ಪ್ರೇಕ್ಷಕರು. ಹೀಗಾಗಿ ಅಮ್ಮ, ಮ್ಯಾನೇಜರ್ ಜೊತೆ ಕಥೆ ಕೇಳಿ ಆಯ್ಕೆ ಮಾಡಿಕೊಳ್ತೀನಿ.

ನಿಮ್ಮ ಸಂಭಾವನೆ 2 ಕೋಟಿ ರೂಪಾಯಿ ಇದೆಯಂತೆ

ನಾನು ಈ ನ್ಯೂಸ್ ಕೇಳಿದೆ, ಇದರಿಂದ ನಮ್ಮ ಮನೆ ಮೇಲೆ ಐಟಿ ರೈಡ್ ಆಯ್ತು. ನನಗೆ ಅಷ್ಟೊಂದು ದುಡ್ಡು ಕೊಡಲ್ಲ. ನಾನು ಕೊಡಿ ಅಂತ ಕೇಳಿದ್ರೂ ಕೊಡಲ್ಲ. ಆ ಹೀರೋಗೆ ಅಷ್ಟು ಕೊಡ್ತೀವಿ, ನಿಮಗೆ ಹೇಗೆ ಕೊಡೋದು ಅಂತಾರೆ. ನನಗೂ ಕೂಡ ಅಷ್ಟು ದುಡ್ಡು ಕೊಡ್ತಾರೆ ಅಂತ ಹೇಳಬೇಕು ಎಂಬ ಆಸೆ ಇದೆ

 

ನಿಮ್ಮ ಬಗ್ಗೆ ಕಾಂಟ್ರವರ್ಸಿ, ಟ್ರೋಲ್ ಕೇಳಿಬರುತ್ತಿರುತ್ತವೆ.
ಆರಂಭದಲ್ಲಿ ಸಿಕ್ಕಾಪಟ್ಟೆ ಅಳುತ್ತಿದ್ದೆ. ಅರ್ಧ ಜೀವನವನ್ನು ಅದರಲ್ಲಿಯೇ ಕಳೆದೆ. ಆಮೇಲೆ ಪಾಸಿಟಿವ್ ಆಗಿ ತಗೊಳೋಕೆ ಶುರು ಮಾಡಿದೆ. ಕಾಂಟ್ರವರ್ಸಿ ಇಲ್ಲ ಅಂದರೆ ಏನೋ ಮಿಸ್ಸಿಂಗ್ ಅಂತ ಅನಿಸುತ್ತದೆ. ನನ್ನನ್ನು ಇಷ್ಟಪಡುವ ಮಂದಿ, ಅಮ್ಮ ಇದ್ದಾರೆ. ಹೀಗಾಗಿ ನಾನು ಬೇಸರ ಮಾಡಿಕೊಳ್ಳಲು ಅವರು ಬಿಡಲ್ಲ

ಹೊಸ ಕಾರ್ ಹೇಗಿದೆ?

ಸೂಪರ್

ಹೈದರಾಬಾದ್‌ನಲ್ಲಿ ಮನೆ ಖರೀದಿ ಮಾಡಿದ್ದೀರಂತೆ

ಇಲ್ಲ. ನನಗೆ ಹೋಟೆಲ್‌ನಲ್ಲಿ ಇರೋದಕ್ಕಿಂತ ಮನೆಯಲ್ಲಿ ಇರೋದು ಖುಷಿ ಕೊಡತ್ತೆ

ಈ ಹಿಂದೆ ಬಂದ ಬಾಲಿವುಡ್‌ ಪ್ರಾಜೆಕ್ಟ್ ರಿಜೆಕ್ಟ್ ಮಾಡಿದ್ದೀರಿ. ಈಗ ಯಾಕೆ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿದ್ದು?
ನನಗೆ ಡೇಟ್ ಸಮಸ್ಯೆ ಕೂಡ ಆಗಿತ್ತು. ನಾನು ಯಾರನ್ನೂ ಕಾಯಿಸಲು ರೆಡಿ ಇಲ್ಲ. ಈಗ ‘ಮಿಷನ್ ಮಜ್ನು’ ಸಿನಿಮಾ ಒಪ್ಪಿಕೊಂಡಿದ್ದೇನೆ. ಕಥೆ ತುಂಬ ಚೆನ್ನಾಗಿದೆ.

ಕಿರಿಕ್ ಪಾರ್ಟಿ 2 ಸಿನಿಮಾ ಬರತ್ತೆ ಅಂತಿದ್ದಾರೆ
ನನಗೆ ಅದರ ಬಗ್ಗೆ ಏನೂ ಗೊತ್ತಿಲ್ಲ, ನಾನು ಕಿರಿಕ್ ಪಾರ್ಟಿಯಲ್ಲಿ ಸತ್ತು ಹೋಗಿದ್ದೆ. ಹೇಗೆ ಅದರ ಸಿಕ್ವೇಲ್‌ನಲ್ಲಿ ಕಾಣಿಸಿಕೊಳೋಕೆ ಸಾಧ್ಯ?

ಕನ್ನಡದಲ್ಲಿ ನೀವು ಮತ್ತೆ ಸಿನಿಮಾ ಮಾಡೋದು ಯಾವಾಗ?

ಹೀರೋ, ನಿರ್ಮಾಪಕರಿಗೆ ನನಗೆ ಒಳ್ಳೆಯ ಸಿನಿಮಾದಲ್ಲಿ ಅವಕಾಶ ಕೊಡೋಕೆ ಹೇಳಿ, ಸ್ಕ್ರಿಪ್ಟ್ ಚೆನ್ನಾಗಿದ್ದರೆ ಮಾಡ್ತೀನಿ

ಹಾಲಿವುಡ್‌ಗೆ ಹೋಗೋದು ಯಾವಾಗ?
ನನ್ನ ಮುಖ ನೋಡಿದ್ರೆ ಹಾಲಿವುಡ್ ಹೋಗೋ ರೀತಿ ನನ್ನ ಮುಖ ಇದೆಯಾ? ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಹಾಗೆ ನಾನು ಕಾಣಸ್ತೀನಾ?

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *