ಎಸ್ಟಿ ಪ್ರವರ್ಗದ ಬೇಡಿಕೆಯೊಂದಿಗೆ ಇಂದು ಕುರಬ ಸಮಾಜದ ಬೃಹತ್ ರ‍್ಯಾಲಿ..
ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿಗೆ ಆಗ್ರಹಿಸಿ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ಕಾಗಿನೆಲೆಯಿಂದ ಆರಂಭವಾದ ಪಾದಯಾತ್ರೆ ಬೆಂಗಳೂರು ತಲುಪಿದೆ. ಇಂದು ತುಮಕೂರು ರಸ್ತೆಯ ಮಾದಾವರದ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಬೃಹತ್ ಕುರುಬ ಸಮಾವೇಶ ಹಮ್ಮಿಕೊಂಡಿದ್ದು, ಸಮಾವೇಶದಲ್ಲಿ ಕುರುಬ ಸಮಾಜದ ಮುಖಂಡರು ತಮ್ಮ ಹಕ್ಕೊತ್ತಾಯ ಮಂಡಿಸಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಿದ್ದಾರೆ. ಇನ್ನೂ ಸಮಾವೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳೋ ಸಾಧ್ಯತೆಯಿದ್ದು, ಭದ್ರತೆಗಾಗಿ 1 ಸಾವಿರಕ್ಕೂ ಹೆಚ್ಚು ಜನರನ್ನು ನಿಯೋಜಿಸಲಾಗಿದೆ.
ಸಮಾರೋಪ ಸಮಾರಂಭದ ಸಮಾವೇಶದಲ್ಲಿ ಕನಕ ಗುರು ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮಿಗಳು, ಹೊಸದುರ್ಗ ಶಾಖಾಮಠದ ಶ್ರೀಶ್ರೀಶ್ರೀ ಈಶ್ವರಾನಂದ ಸ್ವಾಮಿಗಳು, ಸಚಿವರುಗಳಾದ ಶ್ರೀ ಕೆ.ಎಸ್.ಈಶ್ವರಪ್ಪ, ಶ್ರೀ ಎಂಟಿಬಿ ನಾಗರಾಜ್, ಶ್ರೀ ಆರ್.ಶಂಕರ್, ಭೈರತಿ ಶ್ರೀ ಬಸವರಾಜ್, ಮಾಜಿ ಸಚಿವರುಗಳಾದ ಶ್ರೀ ಎಚ್.ವಿಶ್ವನಾಥ್, ಶ್ರೀ ಎಚ್.ಎಂ.ರೇವಣ್ಣ ಸೇರಿದಂತೆ ಕುರುಬ ಸಮಾಜದ ಮಾಜಿ ಸಚಿವರು, ಶಾಸಕರುಗಳು, ಸಂಸದರುಗಳು ಹಾಗೂ ಹಲವಾರು ನಾಯಕರು ಪಾಲ್ಗೊಳ್ಳಲಿದ್ದಾರೆ.