ದೆಹಲಿಯಲ್ಲಿ ಮತ್ತೆ ಟ್ರ್ಯಾಕ್ಟರ್ ರ್ಯಾಲಿಗೆ ಮುಂದಾದ ರೈತ ಮುಖಂಡರು…!
ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರೋ ಪ್ರತಿಭಟನೆ ತೀವ್ರಗೊಂಡಿದೆ. ದೆಹಲಿಯಲ್ಲಿ ಮತ್ತೆ ಟ್ರ್ಯಾಕ್ಟರ್ ಱಲಿಗೆ ರೈತ ಮುಖಂಡ ರಾಕೇಶ್ ಟಿಕಾಯತ್ ಕರೆ ಕೊಟ್ಟಿದ್ದಾರೆ. ಈ ಬಾರಿಯ ಪ್ರತಿಭಟನೆಗೆ ಸುಮಾರು 40 ಲಕ್ಷ ಟ್ರ್ಯಾಕ್ಟರ್ ಬರಲಿವೆ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಈ ಬಾರಿಯ ಬಜೆಟ್ನಲ್ಲಿ 10 ವರ್ಷದೊಳಗಿನ ವಾಹನ ನಿಷೇಧಿಸಿದ್ದು, ಕೇಂದ್ರದ ಈ ನೀತಿ ವಿರುದ್ಧ ರೈತರು ಮತ್ತಷ್ಟು ಆಕ್ರೋಶಗೊಂಡಿದ್ದಾರೆ. ಕೇಂದ್ರ ಸರ್ಕಾರದ ನಡೆ ಖಂಡಿಸಿ ರೈತ ನಾಯಕ, ಹಳೇ ಟ್ರ್ಯಾಕ್ಟರ್ ಸೇರಿ ಲಕ್ಷಾಂತರ ಟ್ರ್ಯಾಕ್ಟರ್ ಕ್ರಾಂತಿಗೆ ಕರೆ ಕೊಟ್ಟಿದ್ದಾರೆ. ನಿಮ್ಮ ಟ್ರ್ಯಾಕ್ಟರ್ಗಳಲ್ಲಿ ‘ಜ.26 ಟ್ರ್ಯಾಕ್ಟರ್ ಕ್ರಾಂತಿ 2021’ ಬರೆದುಕೊಳ್ಳಿ. ಟ್ರ್ಯಾಕ್ಟರ್ ಕ್ರಾಂತಿಯಲ್ಲಿ ಭಾಗವಹಿಸುವವರಿಗೆ ರಾಕೇಶ್ ಟಿಕಾಯತ್ ಈ ರೀತಿ ಕರೆ ಕೊಟ್ಟಿದ್ದಾರೆ.