8 ದಿನದಲ್ಲಿ ಬಾಕ್ಸಾಫೀಸ್ ಚಿಂದಿ ಉಡಾಯಿಸಿದ ದಳಪತಿ
ಕೊರೊನಾ ಸಮಸ್ಯೆ ಮತ್ತು ಲಾಕ್ಡೌನ್ ನಂತ್ರ ಥಿಯೇಟರ್ಗಳಿಗೆ ಜನ ಬರೋದು ಡೌಟು ಅನ್ನೋ ಮಾತು ಒಂದ್ಕಡೆ ಕೇಳಿ ಬಂದ್ರೆ, ಮತ್ತೊಂದ್ಕಡೆ ಸ್ಟಾರ್ ಸಿನಿಮಾ ರಿಲೀಸ್ ಆದ್ರೆ ಮತ್ತೆ ಮೊದಲಿನಂತೆ ಪ್ರೇಕ್ಷಕ ಚಿತ್ರಮಂದಿರಕ್ಕೆ ಬರ್ತಾನೆ ಅನ್ನೋ ಮಾತು ಕೇಳಿಬಂದಿತ್ತು. ಇದೀಗ 2 ನೇ ಮಾತು ನಿಜವಾಗಿದೆ ಅದಕ್ಕೆ ಸಾಕ್ಷಿ ತಮಿಳಿನ ಮಾಸ್ಟರ್ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್. ಕೊರೊನಾ ಕೇಕೆಯಿಂದ ಚಿತ್ರರಂಗ 7ತಿಂಗಳ ಕಾಲ ವನವಾಸ ಅನುಭವಿಸಿತು. ಇದಾದ ಥಿಯೇಟರ್ಗಳ ಬಾಗಿಲು ತೆಗೆದ್ರೂ ಸ್ಟಾರ್ ಸಿನಿಮಾಗಳು ರಿಲೀಸ್ ಆಗ್ಲೇ ಇಲ್ಲ. ಅದಕ್ಕೆ ಕಾರಣ ಇತ್ತು. ಥಿಯೇಟರ್ಗಳಲ್ಲಿ ಶೇಕಾಡ 50ರಷ್ಟು ಆಸನದ ವ್ಯವಸ್ಥೆಗೆ ಅನುಮತಿ ಇತ್ತು. ಮತ್ತೊಂದೆಡೆ ಜನ ಕೂಡ ಥಿಯೇಟರ್ಗೆ ಬರಲು ಹೆದರುತ್ತಿದ್ರು, ಹೀಗಾಗಿ ಸಿನಿಮಾ ರಿಲೀಸ್ ಮಾಡಲು ಯಾರು ಕೂಡ ಧೈರ್ಯ ತೋರ್ಲೆ ಇಲ್ಲ. ಆದ್ರೆ ಅದ್ಯಾವಾಗ ತಮಿಳಿನ ಮಾಸ್ಟರ್ ಸಿನಿಮಾ ತೆರೆಗೆ ಬಂತೋ ಜನ ಥಿಯೇಟರ್ ಕಡೆ ಮುಖ ಮಾಡೋಕ್ಕೆ ಶುರುಮಾಡಿದ್ದಾರೆ.
ವಿಜಯ್ ಅಭಿನಯದ ಮಾಸ್ಟರ್ ರಿಲೀಸ್ ಆಗಿ ಬರೀ ಮೂರು ದಿನಗಳಲ್ಲಿ 100 ಕೋಟಿ ಕೊಳ್ಳೆ ಹೊಡೆದಿತ್ತು. ಸೂಪರ್‌ಹಿಟ್ ಆರಂಭ ಕೊಟ್ಟ ಮೂವಿ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಿದೆ. ಶೇ.50 ಆಸನದ ವ್ಯವಸ್ಥೆ ನಿರ್ಬಂಧನೆ ಮೇಲೆಯೂ ಸಿನಿಮಾ ದೊಡ್ಡ ಮಟ್ಟದಲ್ಲಿ ಪ್ರೇಕ್ಷರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ 8 ದಿನಕ್ಕೆ 200 ಕೋಟಿ ಕಲೆಕ್ಷನ್ ಮಾಡಿದೆ ಮಾಸ್ಟರ್ ಸಿನಿಮಾ. ಹೀಗಂತ ಸಾಕಷ್ಟು ಸಿನಿಮಾ ವಿಶ್ಲೇಷಕರು ಲೆಕ್ಕಾಚಾರ ಹಾಕಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದರ ಜೊತೆಗೆ ತೆಲಾಂಗಣ ಮತ್ತು ಆಂಧ್ರಪ್ರದೇಶ್ನಲ್ಲಿ ಮಾಸ್ಟರ್ ಡಬ್ಬಿಂಗ್ ಸಿನಿಮಾ ಬಿಡುಗೆಯಾಗಿತ್ತು. ಈ ಎರಡು ರಾಜ್ಯಗಳಲ್ಲಿ 12.67 ಕೋಟಿ ಕಲೆಕ್ಷನ್ ಆಗಿದೆ ಅಂತ ಸಿನಿ ವಿಶ್ಲೇಷಕರು ತಿಳಿಸಿದ್ದಾರೆ. ಮಾಸ್ಟರ್ ಮಾಡಿದ ಕಲೆಕ್ಷನ್ ಕೊರೊನಾ ಸಂಕಷ್ಟದ ನಡುವೆಯೂ ಹೊಸ ಬೆಳಕನ್ನು ನೀಡಿದೆ. ಈ ಸಿನಿಮಾದ ಮಿಂಚಿನ ಓಟ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಅದೇನೆ ಇರ್ಲಿ ಸಿನಿಮಾ ಮಂದಿರಗಳಲ್ಲಿ ಮತ್ತೊಮ್ಮೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಸಿನಿಮಾ ಸ್ವಾಗತಿಸಲು ಸಿನಿ ಪ್ರೇಕ್ಷಕರು ಸಜ್ಜಾಗಿದ್ದಾರೆಅನ್ನೋದಕ್ಕೆ ಇದೇ ಸಾಕ್ಷಿ.