ಲಂಚ ಪಡೆಯುವಾಗಲೇ ಎಸಿಬಿ ಬಲೆಗೆ ಬಿದ್ದ ಕೋಲಾರ ನಗರಸಭೆ ಡಿ ಗ್ರೂಪ್ ನೌಕರ ಬಿಲ್ ಕಲೆಕ್ಟರ್…!
ಲಂಚ ಪಡೆಯುವಾಗಲೇ ಕೋಲಾರ ನಗರಸಭೆ ಡಿ ಗ್ರೂಪ್ ನೌಕರ ಬಿಲ್ ಕಲೆಕ್ಟರ್ ವೆಂಕಟರಮಣಪ್ಪ ಎಸಿಬಿ ಬಲೆಗೆ ಬಿದ್ದಿದ್ದಾರೆ. ನಿವೇಶನದ ತೆರಿಗೆ ಕಡಿಮೆ ಮಾಡಿಕೊಳ್ಳಲು ಆಸೀಪ್ ಎಂಬುವರಿಂದ 18 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ನಗರಸಭೆ ಕಚೇರಿಯಲ್ಲಿ 18 ಸಾವಿರ ಲಂಚ ಪಡೆದುಕೊಳ್ಳವ ವೇಳೆ ವೆಂಕಟರಮಣಪ್ಪನನ್ನ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇನ್ನೊಂದೆಡೆ ಮುಳಬಾಗಿಲು ತಾಲೂಕು ಕಚೇರಿಯ ಗ್ರಾಮ ಲೆಕ್ಕಿಗ ಕಿರಣ್ ಕುಮಾರ್ ಪಹಣಿ ಬದಲಾವಣೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಸಂತೋಷ ಕುಮಾರ್ ಎಂಬುವರಿಂದ 1 ಲಕ್ಷ ಲಂಚ ಪಡೆಯುವಾಗ ಕಿರಣ್ ಕುಮಾರ್ನನ್ನ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.