ರಾಜ್ಯ ಮಟ್ಟದ ಸ್ಟಾರ್ ಆಫ್ ಕರ್ನಾಟಕ ಪ್ರಶಸ್ತಿಗೆ ಅಕ್ರಂಪಾಶಾ ಮೋಮಿನ್ ಆಯ್ಕೆ.
ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರ ಬೆಂಗಳೂರು,ಕರ್ನಾಟಕ ಬಾಲ ವಿಕಾಸ ಆಕಾಡೆಮಿ ಧಾರವಾಡ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಡ್ಯ ಸಂಯುಕ್ತಾಶ್ರಯದಲ್ಲಿ 11ನೇ ಮಕ್ಕಳ ರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನ ಆಯೋಜನೆ ಮಾಡಲಾಗಿದು ಆ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದವರಿಗೆ ರಾಜ್ಯ ಮಟ್ಟದ ಸ್ಟಾರ್ ಆಫ್ ಕರ್ನಾಟಕ ಪ್ರಶಸ್ತಿ ಪುರಸ್ಕಾರಮಾಡಲಾಗುತಿದು. ಕಲಬುರಗಿ ಜಿಲ್ಲೆಯ ಎಸ್ ಎಸ್ ವಿ ಟಿವಿಯ ಹಿರಿಯ ವರದಿಗಾರರಾದ ಅಕ್ರಂಪಾಶಾ ಮೋಮಿನ್ ಅವರ 7 ವರ್ಷದ ಮಾಧ್ಯಮ ಕ್ಷೇತ್ರದ ಗಣನೀಯ ಸೇವೆಯನ್ನು ಪರಿಗಣಿಸಿ
ಸ್ಟಾರ್ ಆಫ್ ಕರ್ನಾಟಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರ ಬೆಂಗಳೂರು, ಅಧ್ಯಕ್ಷರಾದ ಮಹೇಶ ಬಾಬು ಸುರ್ವೆ ಅವರು ತಿಳಿಸಿದ್ದಾರೆ.
ಫೆ 14 ರಂದು ಮಂಡ್ಯ ಜಿಲ್ಲೆಯ ಗಾಂಧಿಭವನದಲ್ಲಿ ಬೆಳಿಗ್ಗೆ 10.30ಕ್ಕೆ ಮಂಡ್ಯದಲ್ಲಿ ಪ್ರಶಸ್ತಿ ಪುರಸ್ಕಾರ ಮಾಡಲಾಗುವುದು ಎಂದು ತಿಳಿಸಿದಾರೆ.