ಜಿನ್‌ಪಿಂಗ್ ಜೊತೆ ಎರಡು ಗಂಟೆ ಮಾತನಾಡಿದ ಬಿಡೆನ್: ನಮ್ಮೂಟ ಕಸಿಯಲಾಗದು ಎಂದ ಅಮೆರಿಕ ಅಧ್ಯಕ್ಷ!

ಹೈಲೈಟ್ಸ್‌:

  • ಅಮೆರಿಕ ಅಧ್ಯಕ್ಷ ಹಾಗೂ ಚೀನಾ ಅಧ್ಯಕ್ಷರ ನಡುವೆ ದೂರವಾಣಿ ಸಂಭಾಷಣೆ.
  • ಜೋ ಬಿಡೆನ್ ಹಾಗೂ ಕ್ಸಿ ಜಿನ್‌ಪಿಂಗ್ ನಡುವೆ ಎರಡೂ ಗಂಟೆಗಳ ದೂರವಾಣಿ ಸಂಭಾಷಣೆ.
  • ವಿಶ್ವದ ಎರಡು ಬೃಹತ್ ಶಕ್ತಿಶಾಲಿ ರಾಷ್ಟ್ರಗಳ ಅಧ್ಯಕ್ಷರ ನಡುವೆ ನಡೆದ ಮಾತುಕತೆ ಏನು?
  • ಕ್ಸಿ ಜಿನ್‌ಪಿಂಗ್ ಅವರಿಗೆ ಜೋ ಬಿಡೆನ್ ರವಾನಿಸಿದ ಸಂದೇಶವೇನು?

ವಾಷಿಂಗ್ಟನ್: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಅಮೆರಿಕದ ನೂತನ ಅಧ್ಯಕ್ಷ ಜೋ ಬಿಡನ್ ಸುಮಾರು ಎರಡು ಗಂಟೆಗಳ ಸುದೀರ್ಘ ದೂರವಾಣಿ ಸಂಭಾಷಣೆ ನಡೆಸಿದ್ದಾರೆ.

ಈ ಕುರಿತು ಖುದ್ದು ಮಾಹಿತಿ ನೀಡಿರುವ ಜೋ ಬಿಡೆನ್, ಚೀನಾ ಅಧ್ಯಕ್ಷರ ಜೊತೆ ಎರಡು ಗಂಟೆಗೂ ಅಧಿಕ ಕಾಲ ದೂರವಾಣಿಯಲ್ಲಿ ಮಾತನಾಡಿದ್ದಾಗಿ ಹೇಳಿದ್ದಾರೆ.

ಚೀನಾದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಹರಣ, ಪ್ರಾದೇಶಿಕ ಗಡಿ ಭಾಗದಲ್ಲಿ ಆಕ್ರಮಣಕಾರಿ ಮನೋಭಾವನೆ ಹಾಗೂ ಅಮೆರಿಕ-ಚೀನಾ ನಡುವಿನ ವಾಣಿಜ್ಯ ಸಂಬಂಧದ ಕುರಿತು ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಸುದೀರ್ಘವಾಗಿ ಮಾತನಾಡಿದ್ದಾಗಿ ಜೋ ಬಿಡೆನ್ ಸ್ಪಷ್ಟಪಡಿಸಿದ್ದಾರೆ.

ಗಡಿಯಲ್ಲಿ ಆಕ್ರಮಣಕಾರಿ ಮನೋಭಾವನೆ ಕುರಿತು ಉಲ್ಲೇಖಿಸುವ ಮೂಲಕ, ಜೋ ಬಿಡೆನ್ ಭಾರತ-ಚೀನಾ ನಡುವಿನ ಸುದೀರ್ಘ ಲಡಾಖ್ ಗಡಿ ಘರ್ಷಣೆಯ ಪರೋಕ್ಷ ಉಲ್ಲೇಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಾವಧಿಯಲ್ಲಿ ಅಮೆರಿಕ-ಚೀನಾ ನಡುವಿನ ಸಂಬಂಧ ತೀರ ಹಳಸಿದ್ದು, ಬಿಡೆನ್ ಈ ಸಂಬಂಧವನ್ನು ಸುಧಾರಿಸುವ ಪ್ರಯತ್ನ ಮಾಡಲಿದ್ದಾರೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಅದರೆ ದದದಮೊದಲ ಸಂಭಾಷಣೆಯಲ್ಲೇ ಮಾನವ ಹಕ್ಕು ಉಲ್ಲಂಘನೆ ಹಾಗೂ ಸೈನಿಕ ಆಕ್ರಮಣಗಳ ಕುರಿತು ಜಿನ್‌ಪಿಂಗ್ ಅವರೊಂದಿಗೆ ಬಿಡೆನ್ ಮಾತನಾಡಿದ್ದಾರೆ. ಅಂದರೆ ಅಮೆರಿಕ ರಾಜಿಯಿಲ್ಲದ ರಾಜತಾಂತ್ರಿಕ ಸಂಬಂಧ ಹೊಂದಲಿದೆ ಎಂಬ ಸಂದೇಶವನ್ನು ಬಿಡೆನ್ ರವಾನಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಜೋ ಬಿಡೆನ್, ‘ಚೀನಾ ನೀತಿಯಲ್ಲಿ ನಾವು ಈಗಿನಿಂದಲೇ ಕಾರ್ಯಪ್ರವೃತ್ತರಾಗದಿದ್ದರೆ, ಅವರು ನಮ್ಮ ಊಟವನ್ನು ಕಸಿಯಲಿದ್ದಾರೆ..’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ವಾಣಿಜ್ಯ ಪೈಪೋಟಿಯ ದೃಷ್ಟಿಯಿಂದ ಬಿಡೆನ್ ಈ ಮಾತುಗಳನ್ನು ಹೇಳಿದ್ದಾರೆ.

ಬಿಡೆನ್ ಈ ಹಿಂದೆ ಒಬಾಮ ಆಡಳಿತದಲ್ಲಿ ಅಮೆರಿಕದ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ನೇರವಾಗಿ ಭೇಟಿ ಮಾಡಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *