ಪ್ರಧಾನಿ ಮೋದಿ ಚೀನಿಯರ ಎದುರು ನಿಲ್ಲಲಾಗದ ಹೇಡಿ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ!

ಹೈಲೈಟ್ಸ್‌:

  • ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ.
  • ಲಡಾಖ್ ಗಡಿ ಘರ್ಷಣೆ ಕುರಿತು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ರಾಹುಲ್.
  • ಭಾರತ-ಚೀನಾ ನಡುವೆ ಆದ ಒಪ್ಪಂದವನ್ನು ವಿರೋಧಿಸಿದ ಕಾಂಗ್ರೆಸ್ ನಾಯಕ.
  • ಫಿಂಗರ್ ಪಾಯಿಂಟ್ 4ರಿಂದ ಸೇನೆ ಹಿಂಪಡೆದಿದ್ದಕ್ಕೆ ರಾಹುಲ್ ವಿರೋಧ.
  • ಪ್ರಧಾನಿ ಮೋದಿ ಅವರನ್ನು ಹೇಡಿ ಎಂದು ಕರೆದ ರಾಹುಲ್ ಗಾಂಧಿ.

ಹೊಸದಿಲ್ಲಿ: ಲಡಾಖ್ ಗಡಿ ಘರ್ಷಣೆಗೆ ಅಂತ್ಯಹಾಡಲು ಭಾರತ-ಚೀನಾ ನಡುವೆ ನಡೆದ ಮಿಲಿಟರಿ ಒಪ್ಪಂದವನ್ನು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ.

ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಭಾರತ-ಚೀನಾ ಮಿಲಿಟರಿ ಒಪ್ಪಂದದಲ್ಲಿ ಭಾರತಕ್ಕೆ ಅನ್ಯಾಯವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ನಿನ್ನೆ(ಫೆ.11-ಗುರುವಾರ) ರಾಜ್ಯಸಭೆ ಹಾಆಗೂ ಲೋಕಸಭೆಯಲ್ಲಿ ಲಡಾಖ್ ಗಡಿ ಘರ್ಷಣೆ ಕುರಿತು ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉಭಯ ದೇಶಗಳ ನಡುವೆ ನಡೆದ ಒಪ್ಪಂದದ ಕುರಿತು ವಿಸ್ತೃತ ಮಾಹಿತಿ ನೀಡಿದ್ದರು.

 

ಆದರೆ ಈ ಒಪ್ಪಂದವನ್ನು ಟೀಕಿಸಿರುವ ರಾಹುಲ್ ಗಾಂಧಿ, ಪೂರ್ವ ಲಡಾಖ್‌ನ ಗಡಿಯಲ್ಲಿ ನಮ್ಮ ಸೇನೆಯನ್ನು ಫಿಂಗರ್ ಪಾಯಿಂಟ್ 4ರಿಂದ ಹಿಂದೆ ಕರೆಸಿಕೊಂಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

ನಮ್ಮ ಸೈನ್ಯ ತುಕಡಿಯನ್ನು ಫಿಂಗರ್ ಪಾಯಿಂಟ್ 4ರಿಂದ ಹಿಂದೆ ಕರೆಸಿಕೊಂಡು, ಫಿಂಗರ್ ಪಾಯಿಂಟ್ 3ರಲ್ಲಿ ನಿಯೋಜನೆ ಮಾಡಲಾಗಿದೆ. ಫಿಂಗರ್ ಪಾಯಿಂಟ್ 4 ಕೂಡ ಭಾರತದ ಭೂಭಾಗವಾಗಿದ್ದು, ನಮ್ಮ ಭೂಭ ಆಗವನ್ನು ಬಿಟ್ಟುಕೊಡಲಾಗಿದೆ ಎಂದು ರಾಹುಲ್ ತೀವ್ರ ವಾಗ್ದಳಿ ನಡೆಸಿದ್ದಾರೆ.

ಲಡಾಖ್ ಗಡಿ ಘರ್ಷಣೆಯಲ್ಲಿ ಚೀನಿಯರ ಎದುರು ನಿಲ್ಲಲಾಗದ ಪ್ರಧಾನಿ ಮೋದಿ, ತಮ್ಮ ಹೇಡಿತನವನ್ನು ಪ್ರದರ್ಶಿಸಿದ್ದಾರೆ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಭಾರತದ ಭೂಭಾಗವನ್ನು ರಕ್ಷಿಸುವುದು ಭಾರತದ ಪ್ರಧಾನಿಯ ಆದ್ಯ ಕರ್ತವ್ಯ. ಆದರೆ ಚೀನಿಯನ್ನು ಎದುರಿಸಲಾಗದ ಪ್ರಧಾನಿ, ನಮ್ಮ ಸೇನಿಕರು ಮಾಡಿದ ಬಲಿದಾನವನ್ನು ಅಪಮಾನ ಮಾಡಿದ್ದಾರೆ ಎಂದು ರಾಹುಲ್ ಹರಿಹಾಯ್ದರು.

ಸಂಸತ್ತಿಗೆ ಆಗಮಿಸಿದ ಭೂಸೇನಾ ಮುಖ್ಯಸ್ಥ: ರಾಜ್ಯಸಭೆಗೆ ಲಡಾಖ್ ವಸ್ತುಸ್ಥಿತಿ ಮಾಹಿತಿ ನೀಡಲಿರುವ ರಾಜನಾಥ್!

ಪ್ರಧಾನಿ ಮೋದಿ ಭಾರತೀಯ ಸೇನೆಯನ್ನು ಅಪಮಾನ ಮಾಡಿದ್ದು, ಇದಕ್ಕೆ ಭಾರತೀಯರಾದ ನಾವು ಆಸ್ಪದ ಕೊಡುವುದಿಲ್ಲ. ಒಪ್ಪಂದದ ಹೆಸರಿನಲ್ಲಿ ಭಾರತದ ಭೂಭ ಆಗವನ್ನು ಚೀನಾಗೆ ಬಿಟ್ಟು ಕೊಡಲು ಕೇಂದ್ರ ಸರ್ಕಾರ ಮುಂದಾಗಿರುವುದು ದುರದೃಷ್ಟಕರ ಎಂದು ರಾಹುಲ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಲಡಾಖ್ ಗಡಿ ಘರ್ಷಣೆಗೆ ಅಂತ್ಯ ಹಾಡುವ ಉದ್ದೇಶದಿಂದ ಭಾರತ-ಚೀನಾ ಸೇನೆ ನಡುವೆ ನಡೆದ 9ನೇ ಸುತ್ತಿನ ಮಾತುಕತೆ ವೇಳೆ ಮಾಡಿಕೊಂಡ ಒಪ್ಪಂದದ ಮಾಹಿತಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿನ್ನೆ(ಫೆ.11-ಗುರುವಾರ) ರಾಜ್ಯಸಭೆ ಮತ್ತು ಲೋಕಸಭೆಗೆ ಮಾಹಿತಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *