ಅನುದಾನ ಕೊರತೆ ಇದ್ರೂ ಬಾದಾಮಿಗೆ ಸಿಕ್ಕಿದೆ ಭರ್ಜರಿ ಕೊಡುಗೆ! ಚರ್ಚೆಗೆ ಗ್ರಾಸವಾದ ಬಿಎಸ್‌ವೈ ನಡೆ

ಹೈಲೈಟ್ಸ್‌:

  • ಅಭಿವೃದ್ದಿ ಕಾರ್ಯಗಳಿಗೆ ರಾಜ್ಯಸರ್ಕಾರದಲ್ಲಿ ಹಣಕಾಸು ಕೊರತೆ
  • ಆದರೆ ಸಿದ್ದರಾಮಯ್ಯ ಕ್ಷೇತ್ರಕ್ಕೆ ಸಿಎಂ ಭರ್ಜರಿ ಕೊಡುಗೆ
  • ಬಾದಾಮಿಯಲ್ಲಿ ನೂರಾರು ಕೋಟಿಯ ಅಭಿವೃದ್ದಿ ಕಾಮಗಾರಿಗೆ ಚಾಲನೆ

ಬೆಂಗಳೂರು: ಅಭಿವೃದ್ದಿ ಕಾರ್ಯಗಳಿಗೆ ಹಣಕಾಸು ಕೊರತೆ ಇದೆ, ಕೋವಿಡ್‌ ನಿಂದಾಗಿ ಹಿನ್ನಡೆಯಾಗಿದೆ ಎಂದು ರಾಜ್ಯ ಸರ್ಕಾರ ಪದೇ ಪದೇ ಹೇಳುತ್ತಿದೆ. ಅನುದಾನ ಕೊರತೆ ಬಗ್ಗೆ ಆಡಳಿತ ಪಕ್ಷದ ಶಾಸಕರೇ ಸದನದಲ್ಲೂ ಧ್ವನಿ ಎತ್ತಿದ್ದಾರೆ. ಹೀಗಿದ್ದರೂ ವಿರೋಧ ಪಕ್ಷದ ನಾಯಕ

 

ಸಿದ್ದರಾಮಯ್ಯ ಕ್ಷೇತ್ರ ಸಿಎಂ ಬಿಎಸ್ ಯಡಿಯೂರಪ್ಪ ಭರ್ಜರಿ ಕೊಡುಗೆ ಕೊಟ್ಟಿದ್ದಾರೆ. ಶುಕ್ರವಾರ ಸಿದ್ದು ಕ್ಷೇತ್ರ ಬಾದಾಮಿಯಲ್ಲಿ ನೂರಾರು ಕೋಟಿಯ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ಸಿಗಲಿದೆ.

ಕೆಲವಡಿ ಗ್ರಾಮದಲ್ಲಿ ಚರಂಡಿ ಹಾಗೂ ಕಾಂಕ್ರೀಟ್ ರಸ್ತೆ, ಮುಷ್ಟಿಗೇರಿ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬೀರಲಿಂಗೇಶ್ವರ ಸಮುದಾಯ ಭವನಕ್ಕೆ ಶಿಲಾನ್ಯಾಸ, ಕರ್ನಾಟಕ ಪಬ್ಲಿಕ್ ಶಾಲೆಯ ಕಟ್ಟಡದ ಉದ್ಘಾಟನೆ ನಡೆಯಲಿದೆ.

ಐತಿಹಾಸಿಕ ತಾಣವಾದ ಪಟ್ಟದಕಲ್ಲ ಗ್ರಾಮದಲ್ಲಿ ಪ್ರವಾಸೋದ್ಯಮ ಇಲಾಖೆಯ ಉದ್ದೇಶಿತ ಸಮಗ್ರ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಅಡಿಗಲ್ಲು, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ನೂತನ ಉಪ ವಿಭಾಗದ ಕಚೇರಿ ಉದ್ಘಾಟನೆ ನೆರವೇರಲಿದೆ

ಕ್ಷೇತ್ರದ ವಿವಿಧೆಡೆ ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೆತ್ತಿಕೊಳ್ಳಲಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಹಾಗೂ ಬಾದಾಮಿ ಹಾಗೂ ಗುಳೇದಗುಡ್ಡ ತಾಲೂಕಿನ 16 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಜೀವಜಲ ಮಿಷನ್ ಯೋಜನೆಗೂ ಇದೇ ವೇಳೆ ಚಾಲನೆ ನೀಡಲಾಗುವುದು.

ಕಾರ್ಯಕ್ರಮದಲ್ಲಿ ಸಚಿವರು ಭಾಗಿ

ಇಂದು ಅಂದರೆ ಶುಕ್ರವಾರ ನಡೆಯಲಿರುವ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸ್ವತಃ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಸಚಿವ ಶ್ರೀರಾಮುಲು ಭಾಗಿಯಾಗಲಿದ್ದಾರೆ. ಪ್ರವಾದೋಧ್ಯಮ ಸಚಿವರಾದ ಯೋಗೇಶ್ವರ್ ಅವರು ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಸಿದ್ದು ಕ್ಷೇತ್ರದಕ್ಕೆ ಭರ್ಜರಿ ಅನುದಾನ

ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಕ್ಷೇತ್ರಕ್ಕೆ ಸಿಎಂ ಬಿಎಸ್‌ವೈ ಭರ್ಜರಿ ಅನುದಾನ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರ ಹಾಗೂ ಈಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಕ್ಷೇತ್ರಕ್ಕೆ ಒಟ್ಟು 1800 ಕೋಟಿ ಅನುದಾನ ದೊರಕಿದೆ. ಸದ್ಯ ಅನುದಾನ ಕೊರತೆಯ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಸಿದ್ದರಾಮಯ್ಯ ಕ್ಷೇತ್ರಕ್ಕೆ ಸಿಕ್ಕ ಅನುದಾನ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *