ಐ ಡೋಂಟ್​​ ಕೇರ್​.. ಯಾವುದಕ್ಕೂ ನಾನು ಹೆದರಲ್ಲ. ನನ್ನ ಜೊತೆ ಯಾರೂ ಇಲ್ಲದಿದ್ರೂ ನಾನು ಒಂಟಿ ಸಲಗ ತರ ಇರ್ತೀನಿ: ಯತ್ನಾಳ್​

ಸಿಎಂ ಬಿಎಸ್​​ ಯಡಿಯೂರಪ್ಪ ವಿರುದ್ಧ ರಾಜ್ಯ ಸರ್ಕಾರದ ಆಡಳಿತ ವಿರುದ್ಧ ಹೇಳಿಕೆ ನೀಡ್ತಿದ್ದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​​ಗೆ ಕೊನೆಗೂ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ನೀಡಿದೆ. ಸಿಎಂ ವಿರುದ್ಧ ಬಹಿರಂಗ ಹೇಳಿಕೆಗಳನ್ನ ನೀಡುತ್ತಿದ್ದ ಯತ್ನಾಳ್ ಬಾಯಿಗೆ ಬ್ರೇಕ್ ಹಾಕಲು ರಾಜ್ಯದ ಎಲ್ಲಾ ಎಂಪಿಗಳು ಸೇರಿ ಚರ್ಚೆಸಿ ಯತ್ನಾಳ್​​ಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿಯಿಂದ ನೋಟಿಸ್​ ಜಾರಿಯಾಗಿದೆ. ಯಡಿಯೂರಪ್ಪ ವಿರುದ್ಧ ಪದೇ-ಪದೇ ಟೀಕೆ ಮಾಡಿದ್ದ ಯತ್ನಾಳ್​​​, ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪವನ್ನೂ ಮಾಡಿದ್ರು. ಅಲ್ದೇ ಸಿಡಿ ಬಾಂಬ್​ ಸಿಡಿಸಿ ಬಿಜೆಪಿ ನಾಯಕರಿಗೆ ಮುಜುಗರವನ್ನೂ ತಂದಿದ್ರು. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ನೋಟಿಸ್​ ಜಾರಿ ಮಾಡಿದ್ದು, ತಕ್ಷಣವೇ ನೋಟಿಸ್​ಗೆ ಉತ್ತರಿಸಲು ಸೂಚನೆ ನೀಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರೋ ಬಸನಗೌಡ ಪಾಟೀಲ್ ಯತ್ನಾಳ್, ಐ ಡೋಂಟ್​​ ಕೇರ್​.. ಯಾವುದಕ್ಕೂ ನಾನು ಹೆದರಲ್ಲ. ನನ್ನ ಜೊತೆ ಯಾರೂ ಇಲ್ಲದಿದ್ರೂ ನಾನು ಒಂಟಿ ಸಲಗ ತರ ಇರ್ತೀನಿ. ನನಗೆ ಈವರೆಗೆ ಯಾವುದೇ ಶೋಕಾಸ್​ ನೋಟಿಸ್​ ಬಂದಿಲ್ಲ. ನಾನು ಇಲ್ಲಿಯವರೆಗೆ ಕ್ಷಮೆ ಕೇಳೋದಾಗಲಿ, ವಿಷಾದ ವ್ಯಕ್ತಪಡಿಸಿದ್ದಾಗಲಿ ಮಾಡಿಲ್ಲ. ನಾನು ಪಕ್ಷದ ವಿರುದ್ಧ ಯಾವ ಕೆಲಸವನ್ನೂ ಮಾಡಿಲ್ಲ, ರಾಷ್ಟ್ರ ನಾಯಕರ ವಿರುದ್ಧವೂ ನಾನು ಹೇಳಿಕೆ ಕೊಟ್ಟಿಲ್ಲ ಎಂದು ಮತ್ತೆ ಗುಡುಗಿದ್ದಾರೆ. ನೋಟಿಸ್​ ಬರಲಿ, ಆಮೇಲೆ ಮಾತ್ನಾಡ್ತೀನಿ ಎಂದ ಯತ್ನಾಳ್ ಖಡಕ್ ಆಗಿ ಹೇಳಿದ್ದಾರೆ.

ಇನ್ನು, ರಾಜಾಹುಲಿ ಯಡಿಯೂರಪ್ಪಗೆ ಹೈಕಮಾಂಡ್​ ಫುಲ್​ ಸಪೋರ್ಟ್​ ಕೊಟ್ಟಿದ್ದು, ಯಡಿಯೂರಪ್ಪ ಬೆನ್ನಿಗೆ ರಾಜ್ಯದ 25 ಸಂಸದರು ನಿಂತಿದ್ದಾರೆ. ಬುಧವಾರ ರಾತ್ರಿ ದೆಹಲಿಯ ನಳೀನ್ ಕುಮಾರ್​ ನಿವಾಸದಲ್ಲಿ ಸಂಸದರ ಸಭೆ ಬೆನ್ನಲ್ಲೇ ಯತ್ನಾಳ್​ಗೆ ನೋಟಿಸ್​ ನೀಡಲಾಗಿದೆ. ಸಂತೋಷ್ ಜೀ, ಅರುಣ್​​ ಸಿಂಗ್​​ ಸಮ್ಮುಖದಲ್ಲೇ ನಡೆದಿದ್ದ ಮೀಟಿಂಗ್​ನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕರ್ನಾಟಕದಲ್ಲಿ ಯಡಿಯೂರಪ್ಪ ಬೇರೆ ಅಲ್ಲ, ಬಿಜೆಪಿ ಬೇರೆ ಅಲ್ಲ. ಯಡಿಯೂರಪ್ಪಗೆ ಡ್ಯಾಮೇಜ್​ ಮಾಡಿದ್ರೆ ಪಕ್ಷಕ್ಕೂ ಡ್ಯಾಮೇಜ್​ ಆಗುತ್ತೆ ಅನ್ನೋ ಸಂಸದರ ಅಭಿಪ್ರಯಾದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *