ಬಿಟೌನ್​ನಲ್ಲಿ ಶುರುವಾಗುತ್ತಾ ‘ರಾಮಾಯಣ’ದ ಅಬ್ಬರ..? ಒಂದೇ ಫ್ರೇಮ್​ನಲ್ಲಿ ಬಾಲಿವುಡ್​-ಟಾಲಿವುಡ್​ ದಿಗ್ಗಜರು..

ಅದೊಂದು ಕಾಲವಿತ್ತು. ಪೌರಾಣಿಕ ಕಥೆಗಳನ್ನ ತಾತ.. ಮುತ್ತಾತ. ಅಜ್ಜ-ಅಜ್ಜಿಯರ ಬಾಯಿಂದು ಕೇಳಿ ತಿಳಿದುಕೊಳ್ಳೋ ಕಾಲವಿತ್ತು. ಆದ್ರೀಗ ಬೆಳ್ಳಿತೆರೆ ಮೇಲೆ ಪೌರಾಣಿಕ ಕಥೆಗಳ ಅನಾವರಣವನ್ನ ಕಣ್ತುಂಬಿಕೊಳ್ತಿದ್ದೇವೆ. ಈ ಪೌರಾಣಿಕ ಕಥೆಗಳಾದ ರಾಮಾಯಣ ಹಾಗೂ ಮಹಾಭಾರತದ ಬಗ್ಗೆ ಸಾಕಷ್ಟು ಸೀರಿಯಲ್​, ಸಿನಿಮಾಗಳು ಬೆಳ್ಳಿ ಪರದೆ ಮೇಲೆ ರಾರಾಜಿಸಿವೆ. ಆದ್ರೂ ಕೂಡ ಇದರ ಬಗ್ಗೆ ಪ್ರೇಕ್ಷಕರಿಗೆ ಆಸಕ್ತಿಯೇನು ಕಡಿಮೆಯಾಗಿಲ್ಲ. ಮತ್ತೆ ಮತ್ತೆ ಇದೇ ಪೌರಣಿಕ ಕಥೆಗಳನ್ನ ತೆರೆ ಮೇಲೆ ನೋಡೋಕ್ಕೆ ಸಿನಿರಸಿಕರು ಇಷ್ಟಪಡುತ್ತಾರೆ. ಹೀಗಾಗಿಯೇ ಈ ಕಥೆಯಾಧರಿತ ಸಿನಿಮಾಗಳು ಹೆಚ್ಚಾಗಿ ಬರುತ್ತವೆ. ಇದ್ರಂತೆ ಈಗ ಬಾಲಿವುಡ್​​ನಲ್ಲಿ ‘ರಾಮಾಯಣ’ ಸಿನಿಮಾ ಬರಲು ತಯಾರಿ ನಡೆಯುತ್ತಿದೆ.

ಟಾಲಿವುಡ್​​ ಸೂಪರ್​ ಸ್ಟಾರ್ ಮಹೇಶ್​ ಬಾಬು ಹಾಗೂ ಗ್ರೀಕ್​ ಗಾಡ್​ ಹೃತಿಕ್​​ ರೋಷನ್​..ಯಾರಿಗೆ ಗೊತ್ತಿಲ್ಲ ಹೇಳಿ. ಚಿಕ್ಕಮಕ್ಕಳಿಂದ ಹಿಡಿದು ಹಣ್​ ಹಣ್​​ ಮುದುಕರವರೆಗೂ ಇವರ ನಟನೆಯನ್ನ ಇಷ್ಟಪಡ್ತಾರೆ. ಇದ್ರಂತೆ ಇವರು ಸಹ ಅಂದಿನಿಂದ-ಇಂದಿನವರೆಗೆ, ತಮ್ಮ ಡಿಫರೆಂಟ್ ಮ್ಯಾನರಿಸಂ, ಅದ್ಭುತ ನಟನೆಯಿಂದಲೇ ಸಾವಿರಾರು ಫ್ಯಾನ್ಸ್​ ಫಾಲೋವರ್ಸ್​​ನ ಹೊಂದಿದ್ದಾರೆ. ವಯಸ್ಸು 40ರ ಗಡಿ ದಾಟಿದ್ರೂ ಸ್ಟಿಲ್​​, ಯಂಗ್​ ಆಗಿ ಮಿಂಚುತ್ತಿದ್ದಾರೆ. ಈಗ ಇವರಿಬ್ಬರು ಎವರ್​​​ಗ್ರೀನ್​ ಸ್ಟಾರ್ಸ್​​​​ ಒಂದೇ ಫ್ರೇಮ್​​ನಲ್ಲಿ ಕಾಣಿಸಿಕೊಳ್ತಾರೆ ಅನ್ನೋ ಸುದ್ದಿ ಬಾಲಿವುಡ್​ ಅಂಗಳದಲ್ಲಿ ಸಿಕ್ಕಾಪಟ್ಟೆ ಜೋರಾಗಿ ಕೇಳಿಬರ್ತಿದೆ.
ಯೆಸ್​​ ಹಿಂದಿಯಲ್ಲಿ ಬಿಗ್​ ಬಜೆಟ್​​​ ‘ರಾಮಾಯಣ’ ಸಿನಿಮಾ ಸೆಟ್ಟೇರುತ್ತಿದ್ದು, 3Dಯಲ್ಲಿ ಅದ್ಧೂರಿಯಾಗಿ ಪ್ಯಾನ್​ ಇಂಡಿಯಾ ಮೂಲಕ ರಾಮಾಯಣ ಸಿನಿಮಾ ಅಬ್ಬರಿಸಲಿದಿಯಂತೆ. 500 ಕೋಟಿ ವೆಚ್ಚದಲ್ಲಿ ಈ ಸಿನಿಮಾ ತಯಾರಾಗ್ತಿದ್ದು, ಮಧು ಮಂಟೇನಾ ಸಾರಥ್ಯದಲ್ಲಿ ನಿರ್ಮಾಣವಾಗಲಿದೆ. ಇದ್ರಲ್ಲಿ ರಾಮ, ಸೀತೆ, ಲಕ್ಷ್ಮಣ, ಭರತ, ಹನುಮಂತ ಮತ್ತು ಕಥೆಯ ಖಳನಾಯಕನಾದ ರಾವಣ, ಈ ಎಲ್ಲ ಪಾತ್ರಗಳಿದ್ದು, ಇದ್ರಲ್ಲಿ ಟಾಲಿವುಡ್​ ಹಾಗೂ ಬಾಲಿವುಡ್​ ದಿಗ್ಗಜರು ರಾರಾಜಿಸಲಿದ್ದಾರೆ.

ಹೌದು ನಿತೀಶ್​ ತಿವಾರಿ ಕೈಚಳಕದಲ್ಲಿ ಈ ಮಾಡ್ರನ್​ ರಾಮಾಯಣ ಮೂಡಿಬರಲಿದ್ದು, ರಾಮಾನಾಗಿ ಮಹೇಶ್​ ಬಾಬು ಕಾಣಿಸಿಕೊಂಡ್ರೆ, ರಾವಣನಾಗಿ ಹೃತಿಕ್​ ರೋಷನ್​​ ಮಿಂಚಲಿದ್ದಾರಂತೆ. ಇನ್ನು ಸೀತೆಯಾಗಿ ದೀಪಿಕಾ ಪಡುಕೋಣೆ​ ರಾರಾಜಿಸಿದ್ರೆ, ರಾಮನ ಬಂಟ ಹನುಮಂತನಾಗಿ ಅಲ್ಲು ಅರ್ಜುನ್​ ನಟಿಸಲಿದ್ದಾರೆ ಎಂಬ ಸುದ್ದಿ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.

ರಾಮಾಯಣ 3ಡಿ ಸಿನಿಮಾದಲ್ಲಿ ರಾಮನ ಪಾತ್ರಕ್ಕೆ ಮಹೇಶ್ ಬಾಬು ಸಂಪರ್ಕ ಮಾಡಿ, ಕಥೆ​​ ಹೇಳಿದ್ದಾರಂತೆ. ಈ ಸ್ಕ್ರೀಪ್ಟ್​​ ಮಹೇಶ್ ಬಾಬುಗೂ ಸಹ ಇಷ್ಟವಾಗಿದಿಯಂತೆ. ಇನ್ನು ಮಹೇಶ್​​ ಬಾಬು ಕಡೆಯಿಂದ ಅಧಿಕೃತವಾಗಿ ಗ್ರೀನ್​ ಸಿಗ್ನಲ್​ ಕೊಡುವುದು ಬಾಕಿಯಿದೆ. ಈ ಹಿಂದೆ ಚಿತ್ರತಂಡ ಯಂಗ್​​ ರೆಬಲ್​ ಸ್ಟಾರ್​​ ಪ್ರಭಾಸ್​ನ, ರಾಮನ ಪಾತ್ರಕ್ಕೆ ಸೆಲೆಕ್ಟ್​​ ಮಾಡಿದ್ರಂತೆ. ಆದ್ರೆ ಪ್ರಭಾಸ್ ಓಂ ರಾವತ್ ಅವರ ಆದಿಪುರುಷ್ ಸಿನಿಮಾದಲ್ಲಿ ರಾಮನಾಗಿ ಕಾಣಿಸಿಕೊಂಡ ಕಾರಣ ಮಹೇಶ್ ಬಾಬು ಅವರನ್ನು ಸಂಪರ್ಕ ಮಾಡಿದೆ ಅಂತಿದೆ ಕೆಲ ಮೂಲಗಳು

ಒಟ್ಟಾರೆಯಾಗಿ ಮಹೇಶ್​ಬಾಬು, ಹೃತಿಕ್​ ರೋಷನ್​, ದೀಪಿಕಾ ಪಡುಕೋಣೆ, ಹಾಗೂ ಅಲ್ಲು ಅರ್ಜುನ್​​ ಏನಾದ್ರೂ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಅಧಿಕೃತವಾದ್ರೆ. ಈ ಸಿನಿಮಾ ಪ್ರಭಾಸ್​ ಅಧಿಪುರುಷನನ್ನೆ ಮೀರಿಸಿದ್ರು ಆಶ್ಚರ್ಯವಿಲ್ಲ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *