ಮುದ್ದಿನ ಮಗಳ ನೃತ್ಯವನ್ನು ಕಂಡು ಭಾವುಕರಾದ ಡಿ.ಕೆ. ಶಿವಕುಮಾರ್
ಮಗಳ ಮದುವೆ ಸಂಭ್ರಮದಲ್ಲಿರೋ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಣ್ಣೀರಾಕಿದ್ದಾರೆ. ಡಿಕೆಶಿ ಪುತ್ರಿ ಐಶ್ವರ್ಯಾ ಅಪ್ಪ, ಅಮ್ಮನ ಮಮತೆ ಹಾಗೂ ತನ್ನ ಫ್ಯಾಮಿಲಿ ಮೇಲಿನ ಪ್ರೀತಿಯನ್ನ ನೃತ್ಯದ ಮೂಲಕ ವ್ಯಕ್ತಪಡಿಸಿದ್ರು. ಮಗಳ ಈ ಪ್ರೀತಿ ಕಂಡು ಡಿಕೆಶಿ ಕ್ಷಣ ಕಾಲ ಭಾವುಕರಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಅಮಾರ್ಥ್ಯ ಹೆಗ್ಡೆ ವಿವಾಹ ಇಂದು ನೆರವೇರಲಿದ್ದು, ಪ್ರೇಮಿಗಳ ದಿನವೇ ಐಶ್ವರ್ಯ ಮತ್ತು ಅಮರ್ಥ್ಯ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ. ವೈಟ್ ಫೀಲ್ಡ್ ನ ಖಾಸಗಿ ಹೋಟೆಲ್ನಲ್ಲಿ ವಿವಾಹ ಮಹೋತ್ಸವ ನಡೆಯಲಿದೆ. ಇನ್ನು ಎರಡು ರಾಜಕೀಯ ದಿಗ್ಗಜರ ಕುಟುಂಬದ ಕಲ್ಯಾಣ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರೀಯ, ರಾಜ್ಯ ಮಟ್ಟದ ನಾಯಕರು, ಧಾರ್ಮಿಕ ಮುಖಂಡರು ಸೇರಿದಂತೆ ಹಲವು ಕ್ಷೇತ್ರದ ಗಣ್ಯರು ಭಾಗಿಯಾಗಲಿದ್ದಾರೆ.
ಶಿವಕುಮಾರ್ ಮಗಳ ಮದುವೆ ಕಾರ್ಯಕ್ರಮದ ಎಲ್ಲಾ ಸಿದ್ಧತೆಯನ್ನು ಸ್ವತಃ ಡಿ.ಕೆ. ಶಿವಕುಮಾರ್ ಮುಂದೆ ನಿಂತು ಪರಿಶೀಲನೆ ಮಾಡುತ್ತಿದ್ದು ಮದುವೆಗೆ ಸಂಬಧಿಕರು ಮತ್ತು ಆತ್ಮೀಯ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ.