ನನ್ನ ತಂದೆಯ ಕೊಲೆಗಾರರನ್ನು ಕ್ಷಮಿಸುತ್ತೇನೆ: ರಾಜೀವ್ ಗಾಂಧಿ ಹಂತಕರ ಕುರಿತು ರಾಹುಲ್ ಮಾತು

ಪುದುಚೇರಿ: 1991ರಲ್ಲಿ ತಮ್ಮ ತಂದೆ ರಾಜೀವ್ ಗಾಂಧಿಯನ್ನು ಹತ್ಯೆಗೈದದ್ದು ತೀವ್ರ ನೋವು ತಂದಿದೆ. ಆದರೆ ಅದಕ್ಕೆ ಕಾರಣರಾದವರ ಬಗ್ಗೆ ಯಾವುದೇ ಕೋಪ ಅಥವಾ ದ್ವೇಷ ಇಲ್ಲ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ಹೇಳಿದ್ದಾರೆ.

ಇಂದು ಪುದುಚೇರಿಯ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ವಿದ್ಯಾರ್ಥಿನಿಯೊಬ್ಬರು,”ನಿಮ್ಮ ತಂದೆಯನ್ನು ಎಲ್‌ಟಿಟಿಇ(ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಲಂ) ಹತ್ಯೆ ಮಾಡಿತು. ಈ ಜನರ ಬಗ್ಗೆ ನಿಮ್ಮ ಅಭಿಪ್ರಾವೇನು?” ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ ಹಿಂಸಾಚಾರದ ಮೂಲಕ ಏನನ್ನೂ ಕಿತ್ತಿಕೊಳ್ಳಲು ಸಾಧ್ಯವಿಲ್ಲ. ನನ್ನ ತಂದೆ ನನ್ನಲ್ಲಿ ಜೀವಂತವಾಗಿದ್ದಾರೆ. ನನ್ನ ತಂದೆ ನನ್ನ ಮೂಲಕ ಮಾತನಾಡುತ್ತಿದ್ದಾರೆ ಎಂದರು.

“ನನಗೆ ಯಾರ ಬಗ್ಗೆಯೂ ಕೋಪ ಅಥವಾ ದ್ವೇಷ ಇಲ್ಲ. ಖಂಡಿತ, ನಾನು ನನ್ನ ತಂದೆಯನ್ನು ಕಳೆದುಕೊಂಡೆ ಮತ್ತು ಇದು ನನಗೆ ತುಂಬಾ ಕಷ್ಟದ ಸಮಯ” ಎಂದು ಅವರು ಹೇಳಿದರು.

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಏಳು ಅಪರಾಧಿಗಳನ್ನು ಬಿಡುಗಡೆ ಮಾಡಲು ಎಲ್ಲಾ ರಾಜಕೀಯ ಪಕ್ಷಗಳು ಬೆಂಬಲ ನೀಡಿದ್ದರೂ, ತಮಿಳುನಾಡು ಕಾಂಗ್ರೆಸ್ ಸಮಿತಿ(ಟಿಎನ್‌ಸಿಸಿ) ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *