Petrol Price: ಗಗನಕ್ಕೇರಿದ ಪೆಟ್ರೋಲ್-ಡೀಸೆಲ್ ಬೆಲೆ; ರಾಜಸ್ಥಾನದಲ್ಲಿ 1 ಲೀಟರ್ ಪೆಟ್ರೋಲ್​ಗೆ 100 ರೂ!

ನವದೆಹಲಿ, ಫೆ. 18: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯಿಲ್ ಬೆಲೆ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ, ಮಹಾ ಕ್ರೂರಿ ಕೊರೊನಾ ಮತ್ತು ಲಾಕ್ಡೌನ್ ಕಾರಣಗಳಿಂದ ಜನ ಸಾಮಾನ್ಯರು ಎಷ್ಟೇ ಕಷ್ಟದಲ್ಲಿದ್ದರೂ ಹಾಗೂ ಕಾಂಗ್ರೆಸ್ ನಾಯಕರು ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ವ್ಯಾಪಕವಾದ ವಿರೋಧ ವ್ಯಕ್ತಪಡಿಸುತ್ತಿದ್ದರೂ ಇದ್ಯಾವುದನ್ನೂ ಪರಿಗಣಿಸದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡಿದೆ.

ಕಳೆದ 49 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 22 ಬಾರಿ ಹೆಚ್ಚಾಗಿದೆ. ಜನವರಿ 1ರಿಂದೀಚೆಗೆ 6.53 ರೂಪಾಯಿ ಹೆಚ್ಚಾಗಿದೆ. ಫೆಬ್ರವರಿ ತಿಂಗಳಲ್ಲಿ 12ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗಿದೆ. ಕಳೆದ 10 ದಿನಗಳಿಂದ ನಿರಂತರವಾಗಿ ಬೆಲೆ ಏರಿಕೆ ಏರಿಸಿದ್ದು 10 ದಿನಗಳಿಂದ ಒಟ್ಟು 3.47 ಪೈಸೆ ಬೆಲೆ ಹೆಚ್ಚಳ ಮಾಡಲಾಗಿದೆ.

ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಫೆಬ್ರವರಿ 4ರಂದು ತಾರೀಖು ತಲಾ 37 ಪೈಸೆ, ಫೆಬ್ರವರಿ 5ರಂದು 37 ಪೈಸೆ, ಫೆಬ್ರವರಿ 9ರಂದು 42 ಪೈಸೆ, ಫೆಬ್ರವರಿ 10ರಂದು 31 ಪೈಸೆ, ಫೆಬ್ರವರಿ 11ರಂದು 38 ಪೈಸೆ, ಫೆಬ್ರವರಿ 12ರಂದು 38 ಪೈಸೆ, ಫೆಬ್ರವರಿ 13ರಂದು 39 ಪೈಸೆ, ಫೆಬ್ರವರಿ 14ರಂದು 34 ಪೈಸೆ, ಫೆಬ್ರವರಿ 15ರಂದು 30 ಪೈಸೆ, ಫೆಬ್ರವರಿ 16ರಂದು 38 ಪೈಸೆ ಹಾಗೂ ಫೆಬ್ರವರಿ 17ರಂದು 27 ಪೈಸೆ ಹೆಚ್ಚಳ ಮಾಡಲಾಗಿತ್ತು. ಈಗ ಫೆಬ್ರವರಿ 18ರಂದು ಮತ್ತೆ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 36 ಪೈಸೆ ಹೆಚ್ಚಳ ಮಾಡಲಾಗಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ 72.85 ರೂಪಾಯಿ ಇದೆ. ಬ್ರೆಂಟ್ ಕಚ್ಚಾ ತೈಲವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ಗೆ 60.60ನಂತೆ ಲಭ್ಯವಾಗುತ್ತಿದೆ. ಆದರೂ ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡುತ್ತಿದೆ.

ದೇಶದ ವಿವಿಧ ನಗರಗಳಲ್ಲಿನ ಪೆಟ್ರೋಲ್ -ಡೀಸೆಲ್ ಬೆಲೆ
ಬೆಂಗಳೂರು- ಪೆಟ್ರೋಲ್ 92.87 ರೂ., ಡೀಸೆಲ್ 85.07 ರೂ.
ಭೂಪಾಲ್- ಪೆಟ್ರೋಲ್ 97.86 ರೂ., ಡೀಸೆಲ್ 88.47 ರೂ.ಮುಂಬೈ- ಪೆಟ್ರೋಲ್ 96.30 ರೂ., ಡೀಸೆಲ್ 87.30 ರೂ.
ಜೈಪುರ – ಪೆಟ್ರೋಲ್ 96.35 ರೂ., ಡೀಸೆಲ್ 88.67 ರೂ.
ಪಾಟ್ನಾ- ಪೆಟ್ರೋಲ್ 92.22 ರೂ., ಡೀಸೆಲ್ 85.49 ರೂ.
ಚೆನ್ನೈ- ಪೆಟ್ರೋಲ್ 91.96 ರೂ., ಡೀಸೆಲ್ 85.30 ರೂ.
ಕೋಲ್ಕತ್ತಾ- ಪೆಟ್ರೋಲ್ 91.09 ರೂ., ಡೀಸೆಲ್ 83.84 ರೂ.
ದೆಹಲಿ- ಪೆಟ್ರೋಲ್ 89.88 ರೂ., ಡೀಸೆಲ್ 80.27 ರೂ.
ಲಕ್ನೋ- ಪೆಟ್ರೋಲ್ 88.31 ರೂ., ಡೀಸೆಲ್ 80.63 ರೂ.
ನೋಯ್ಡಾ- ಪೆಟ್ರೋಲ್ 88.13 ರೂ., ಡೀಸೆಲ್ 79.66 ರೂ.
ಗುರುಗಾವ್ – ಪೆಟ್ರೋಲ್ 87.19 ರೂ., ಡೀಸೆಲ್ 78.19 ರೂ.
ರಾಂಚಿ- ಪೆಟ್ರೋಲ್ 87.60 ರೂ., ಡೀಸೆಲ್ 84.94 ರೂ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸುವುದು ಸಾಮಾನ್ಯವಾದ ಸಂಗತಿ. ಬಹಳ‌ ಹಿಂದಿನಿಂದಲೂ ಇದು ನಡೆದುಕೊಂಡ ಬಂದಿರುವ ರೀತಿ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ‌ ಸತ್ಸಂಪ್ರದಾಯವನ್ನು ಮರೆತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿರಂತರವಾಗಿ ಹೆಚ್ಚಳ ಮಾಡುತ್ತಲೇ ಇದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *