ಹೆಲ್ಮೆಟ್ ಧರಿಸದೆ ರಾತ್ರಿ ಬೈಕ್ ರೈಡ್ ಮಾಡಿ ನಿಯಮ ಉಲ್ಲಂಘನೆ: ನಟ ವಿವೇಕ್ ಒಬೆರಾಯ್ ಗೆ ಪೊಲೀಸ್ ನೋಟಿಸ್..!
ಪ್ರೇಮಿಗಳ ದಿನ ಮಾಡಿಕೊಂಡ ಯಡವಟ್ಟಿಗೆ ಬಾಲಿವುಡ್ ನಟ, ಬೆಂಗಳೂರಿನ ಅಳಿಯ ವಿವೇಕ್ ಓಬೆರಾಯ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪತ್ನಿ ಪ್ರಿಯಾಂಕಾ ಆಳ್ವಾ ಜತೆ ಮಾಸ್ಕ್ ಧರಿಸದೇ ವಿವೇಕ್ ಓಬೆರಾಯ್ ಬೈಕ್ ರೇಡ್ ಮಾಡಿದ್ದಾರೆ. ಹೊಸದಾಗಿ ಖರೀದಿ ಮಾಡಿದ್ದ ಹಾರ್ಲೆ ಡೇವಿಡ್ಸನ್ ಬೈಕ್ನಲ್ಲಿ ವಿವೇಕ್ ಮತ್ತು ಪ್ರಿಯಾಂಕ ಅಡ್ಡಾಡಿದ್ದಾರೆ. ಅಷ್ಟೇ ಅಲ್ಲದೇ ರೋಡ್ ರೋಡ್ನಲ್ಲಿ ಸಿಕ್ಕ ಅಭಿಮಾನಿಗಳ ಜತೆ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ.
ಕೊರೋನಾ ರೂಲ್ಸ್ ಬ್ರೇಕ್ ಮಾಡಿದ್ದೂ ಅಲ್ಲದೆ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾಗೆ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ವಿವೇಕ್ ಒಬೆರಾಯ್ ಮೇಲೆ ಕೇಸ್ ದಾಖಲಾಗಿದೆ. ಮಾಸ್ಕ್ ರೂಲ್ಸ್ ಬ್ರೇಕ್, ಹೆಲ್ಮೆಟ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕು ಜುಹು ಸಾಂತಾ ಕ್ರೂಸ್ ಟ್ರಾಫಿಕ್ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. 500 ರೂಪಾಯಿ ಫೈನ್ ಕೂಡಾ ಜಾಡಿಸಿದ್ದಾರೆ.
ವಿವೇಕ್ ಒಬೆರಾಯ್ ಅವರೇ ಫೆಬ್ರವರಿ 14 ರ ಪ್ರೇಮಿಗಳ ದಿನದಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಇದರಲ್ಲಿ ಅವರು ಹೆಲ್ಮೆಟ್ ಇಲ್ಲದೆ ಪತ್ನಿಯೊಂದಿಗೆ ಬೈಕ್ ಸವಾರಿ ಮಾಡಿದ್ದಾರೆ. ಈ ಕಾರಣಕ್ಕೆ ನಟನ ವಿರುದ್ಧ ಐಪಿಸಿ ಸೆಕ್ಷನ್ 188, 269, ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 129, 177 ಅಡಿ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.