ಮತ್ತೆ ಶುರುವಾಗುತ್ತಾ ವರ್ಕ್ ಫ್ರಮ್ ಹೋಮ್..? ವರ್ಕ್ ಪ್ರಮ್ ಹೋಮ್ ಜಾರಿಯಾದ್ರೆ ಹಲವು ಉದ್ಯಮಗಳಿಗೆ ಲಾಸ್…!
ಕೊರೋನಾದಿಂದ ಎಲ್ಲ ಕಾರ್ಯಗಳಿಗೂ ಬ್ರೇಕ್ ಬಿದ್ದಂತಾಗಿತ್ತು. ಲಾಕ್ ಡೌನ್ ಬಳಿಕವೂ ಐಟಿ ಉದ್ಯೋಗಿಗಳು ವರ್ಕ್ ಫ್ರಮ್ ಹೋಮ್ ನಲ್ಲಿದ್ದಾರೆ, ಹೊಸ ಪ್ರಭೇದದ ಕೊರೋನಾ ವೈರಸ್ ಬಂದ ನಂತರ, ಐಟಿ ಮಂದಿಗೆ ಮತ್ತೆ ವರ್ಕ್ ಫ್ರಮ್ ಹೋಮ್ ಶುರುವಾದ್ರೆ, ಹಲವು ಉದ್ಯಮಗಳ ಮೇಲೆ ಬಾರಿ ಹೊಡೆತ ಬಿಳೋದು ಸತ್ಯ ಇದರ ಕುರಿತು ಐಟಿಬಿಟಿ ಸಚಿವರು ಏನು ಹೇಳಿದ್ದಾರೆ ಅನ್ನೋದ್ರ ಬಗ್ಗೆ ಕಂಪ್ಲೀಟ್ ಸ್ಟೋರಿ ಇಲ್ಲಿದೆ ಓದಿ..
ಕೊರೋನಾದಿಂದಾಗಿ ದೇಶದೆಲ್ಲೆಡೆ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಲಾಕ್ ಡೌನ್ ಕಾರಣದಿಂದ ಎಷ್ಟೋ ಕಂಪನಿಗಳು, ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಮಾಡಲು ಅವಕಾಶ ಮಾಡಿಕೊಟ್ಟಿತು. ಕೆಲವರು ವರ್ಕ್ ಫ್ರಂ ಹೋಮ್ ಇಷ್ಟಪಟ್ಟು ಅದಕ್ಕೆ ಅಜಸ್ಟ್ ಆದ್ರೆ, ಇನ್ನು ಕೆಲವರು ಆಫೀಸ್ ಗೆ ಹೋಗಿ ಕೆಲಸ ಮಾಡಿದ್ರೆ ಸಾಕಪ್ಪ ಅಂತ ಕಾಯುತ್ತಿದ್ದಾರೆ. ಕೊರೋನಾ ದೂರವಾಗಿ ಸಾಮಾನ್ಯ ಸ್ಥಿತಿಗೆ ಕೆಲಸ ಕಾರ್ಯಗಳು ಬರುವ ನಿರೀಕ್ಷೆಯಲ್ಲಿ ಬಹುತೇಕ ಉದ್ಯೋಗಿಗಳಿದ್ದಾರೆ. ಆದರೆ ಅದರ ಬೆನ್ನಲ್ಲೆ ಹೊಸ ಪ್ರಭೇದದ ಕೊರೋನಾ ಆತಂಕ ಮೂಡಿಸಿದೆ. ಬೆಂಗಳೂರಿನ ಖಾಸಗಿ ಅಪಾರ್ಟಮೆಂಟ್ ಮತ್ತೆ ಕಾಲೇಜ್ ನಲ್ಲಿ ಕೊರೋನಾ ಕಾಣಿಸಿಕೊಂಡಿದ್ದು ಮತ್ತಷ್ಟು ಆತಂಕ ಮೂಡಿಸಿದೆ. ರಾಜ್ಯದಲ್ಲಿ ಮತ್ತೆ ವರ್ಕ್ ಫ್ರಮ್ ಹೋಮ್ ಶುರುವಾದ್ರೆ ಹಲವು ಉದ್ಯಮಗಳ ಮೇಲೆ ಹೊಡೆತ ಬಿಳುವುದಂತು ಸತ್ಯ.
ಹೌದು ಇದಕ್ಕೆ ಸರ್ಕಾರದ ಯಾವುದೇ ನೀರ್ಭೇದವಿಲ್ಲ. ಪೂರ್ಣ ಪ್ರಮಾಣದಲ್ಲಿಯೂ ಆಫೀಸ್ ಕೆಲಸ ಪ್ರಾರಂಭವಾಗಿಲ್ಲ. ಕೊರೋನಾ ಜೊತೆಗೆ ಜೀವನ ಸಾಗಿಸಬೇಕಿದೆ. ಸರ್ಕಾರ ಪೂರ್ಣ ಪ್ರಮಾಣದ ಆಫೀಸ್ ಓಪನ್ಗೆ ಜಾರಿಗೆ ತುರುವುದಿಲ್ಲ. ಹಾಗಂತ ವರ್ಕ್ ಫ್ರಮ್ ಹೋಮ್ಗೂ ನಿರ್ಬಂಧ ಹಾಕುವುದಿಲ್ಲ, ಐಟಿಬಿಟಿ ಕಂಪನಿಗಳು ತಮ್ಮ ಉದ್ಯೋಗಿಗಳು, ಆಫೀಸ್ ನಿಂದ ಇಲ್ಲ ಮನೆಯಿಂದ ಕೆಲಸ ಮಾಡುವ ನಿರ್ಧಾರವನ್ನು ಕಂಪನಿಗಳಿಗೆ ಬಿಡಲಾಗಿದೆ, ಸರ್ಕಾರದ ಯಾವುದೇ ನಿರ್ಬಂಧವಿಲ್ಲ ಎಂದು ಡಾ. ಅಶ್ವಥ್ ನಾರಾಯಣ ಅವರು ಹೇಳಿದ್ದಾರೆ.
ಒಟ್ನಲ್ಲಿ ಇಷ್ಟು ದಿನ ವರ್ಕ್ ಫ್ರಮ್ ಹೋಮ್ ನಲ್ಲಿದ್ದ ಐಟಿ ಮಂದಿಗೆ, ಮತ್ತೆ ವರ್ಕ್ ಫ್ರಮ್ ಹೋಮ್ ಶುರುವಾದ್ರೆ, ಉಳಿದ ಉದ್ಯಮಕ್ಕೆ ಹೊಡೆತ ಬಿಳುವುದಂತು ಸತ್ಯ.