ಮಾಲ್ಡೀವ್ಸ್​​​ನಲ್ಲಿ ನವ​ ಜೋಡಿಯ ಮೋಜು ಮಸ್ತಿ..! ದ್ವೀಪ ರಾಷ್ಟ್ರದಲ್ಲಿ ಕೃಷ್ಣ-ಮಿಲನಾ ಹನಿಮೂನ್​​..!

ಲವ್​ ಮಾಕ್ಟೇಲ್​ ಸಿನಿಮಾ ಮೂಲಕ ಜನಮನ ಗೆದ್ದ, ಕೃಷ್ಣ-ಮಿಲನಾ, ಪ್ರೇಮಿಗಳ ದಿನದಂದು ಅದ್ಧೂರಿಯಾಗಿ ಸಪ್ತಪದಿ ತುಳಿದಿದ್ದು ಗೊತ್ತೇಯಿದೆ. ಈಗ ಜಾಲಿ ಮೂಡ್​ನಲ್ಲಿರೋ ಕ್ರಿಸ್ಮಿ ಜೋಡಿ, ದ್ವೀಪ ರಾಷ್ಟ್ರದಲ್ಲಿ ತಮ್ಮ ಹನಿಮೂನ್​ ಸೆಲಬ್ರೆಟ್​ ಮಾಡ್ತಿದ್ದಾರೆ.

ಸ್ಯಾಂಡಲ್​ವುಡ್​​ನಲ್ಲಿ ಲವ್​ ಮಾಕ್ಟೇಲ್​​​ ಜೋಡಿ ಅಂತಲೇ ಫೇಮಸ್​ ಆಗಿರೋ ಡಾರ್ಲಿಂಗ್​ ಕೃಷ್ಣ ಹಾಗೂ ಮಿಲನಾ ನಾಗರಾಜ್,​ ಫೆಬ್ರವರಿ 14ಕ್ಕೆ ಸಪ್ತಪದಿ ತುಳಿದಿದ್ರು. ಬ್ಯಾಚುಲರ್​ ಪಾರ್ಟಿ, ಮೆಹಂದಿ ಪಾರ್ಟಿ, ಸಂಗೀತ್ ಪಾರ್ಟಿ, ಮುಹೂರ್ತ, ರಿಸೆಪ್ಷನ್​ ಅಂತ ಮದುವೆ ಸಂಭ್ರಮ ಬಹಳ ಜೋರಾಗಿತ್ತು. 7 ವರ್ಷಗಳ ಪ್ರೀತಿಗೆ ಪ್ರೇಮಿಗಳ ದಿನದಂದೇ ಮದುವೆಯ ಮುದ್ರೆಯೊತ್ತಿದ್ದ ಕ್ರಿಸ್ಮಿ ಜೋಡಿ, ಈಗ ಹನಿಮೂನ್​ ಗುಂಗಿನಲ್ಲಿದ್ದಾರೆ.

ಕೃಷ್ಣ-ಮಿಲನಾ ಈಜು ಕೊಳದ ನಡುವೆ ಅದ್ಧೂರಿಯಾಗಿ ಮದುವೆ ಆಗಬೇಕು ಅಂತ ಜೋಡಿ ಕನಸು ಕಂಡಿತ್ತಂತೆ. ತಮ್ಮ ಕನಸಿನಂತಯೇ ಅದ್ಧೂರಿಯಾಗಿ ಏಳು ಹೆಜ್ಜೆಗೆ ಸಾಕ್ಷಿಯಾಗಿದ್ರು. ಬೆಳಗ್ಗೆ ನಡೆದ ಮುಹೂರ್ತ ಧಾರೆಗೆ ಮತ್ತು ಸಂಜೆ ನಡೆದ ರಿಸೆಪ್ಷನ್​ ಪಾರ್ಟಿಗೆ ಚಿತ್ರರಂಗ ಮತ್ತು ರಾಜಕೀಯರಂಗದ ಗಣ್ಯರು ಆಗಮಿಸಿ, ನವ ಜೋಡಿಗೆ ಶುಭ ಹಾರೈಸಿದ್ರು. ಸದ್ಯ ನೀಲಿ ಕಡಲ ಕಿನಾರೆಯಲ್ಲಿ ಈ ಜೋಡಿ ಹಕ್ಕಿ ಮೋಜುಮಸ್ತಿಯಲ್ಲಿ ಮುಳುಗಿದೆ.

ಮದುವೆಯಲ್ಲಿ ಡಿಫರೆಂಟ್​ ಕಾಸ್ಟ್ಯೂಮ್​​​ನಲ್ಲಿ ಕಂಗೊಳಿಸಿದ ಈ ಜೋಡಿ, ದ್ವೀಪ ರಾಷ್ಟ್ರದಲ್ಲಿ ತುಂಡುಡುಗೆ ತೊಟ್ಟು ಜಾಲಿ ಮೋಡ್​​​ನಲ್ಲಿ ಸಮಯ ಕಳೆಯುತ್ತಿದ್ದಾರೆ. ಮಾಲ್ಡೀವ್ಸ್​ ಜಾಲಿ ಟ್ರಿಪ್ಪಿನ ಫೋಟೋ, ವೀಡಿಯೋಗಳನ್ನ ಕೃಷ್ಣ ಹಾಗೂ ಮಿಲನಾ ತಮ್ಮ ಇನ್​ಸ್ಟಾಗ್ರಾಮ್​​​​​ನಲ್ಲಿ ಶೇರ್​​ ಮಾಡಿದ್ದಾರೆ. ಸದ್ಯ ಕೃಷ್ಣ-ಮಿಲನಾ ಹಾಲಿಡೇ-ಹನಿಮೂನ್​ ಫೋಟೋಗಳು ಸೋಷಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *